2020ರ ಡಿಸೆಂಬರ್‌ ಮಟ್ಟಕ್ಕಿಳಿದ ಬಿಸಿನೆಸ್‌ ಚಟುವಟಿಕೆ: ಜೂನ್‌ ನಂತರ ಆರ್ಥಿಕತೆ ಚೇತರಿಕೆ ನಿರೀಕ್ಷೆ

ಕೋವಿಡ್‌-19 ಎರಡನೆಯ ಅಲೆಯ ತೀವ್ರಗತಿಯ ಪರಿಣಾಮ ದೇಶದಲ್ಲಿ ಏಪ್ರಿಲ್‌ ಎರಡನೆಯ ವಾರದಲ್ಲಿ ಬಿಸಿನೆಸ್‌ ಚಟುವಟಿಕೆಗಳು ಕಲೆದ ಡಿಸೆಂಬರ್‌ನ ಮಟ್ಟಕ್ಕೆ ಇಳಿಕೆಯಾಗಿವೆ ಎಂದು ವರದಿಯಾಗಿದೆ. ಏಪ್ರಿಲ್‌-ಜೂನ್‌ ನಂತರ ಆರ್ಥಿಕತೆ ಚೇತರಿಕೆ ನಿರೀಕ್ಷೆ ಇದೆ.

2020ರ ಡಿಸೆಂಬರ್‌ ಮಟ್ಟಕ್ಕಿಳಿದ ಬಿಸಿನೆಸ್‌ ಚಟುವಟಿಕೆ: ಜೂನ್‌ ನಂತರ ಆರ್ಥಿಕತೆ ಚೇತರಿಕೆ ನಿರೀಕ್ಷೆ
Linkup
ಹೊಸದಿಲ್ಲಿ: ಕೋವಿಡ್‌-19 ಎರಡನೆಯ ಅಲೆಯ ತೀವ್ರಗತಿಯ ಪರಿಣಾಮ ದೇಶದಲ್ಲಿ ಏಪ್ರಿಲ್‌ ಎರಡನೆಯ ವಾರದಲ್ಲಿ ಬಿಸಿನೆಸ್‌ ಚಟುವಟಿಕೆಗಳು ಕಲೆದ ಡಿಸೆಂಬರ್‌ನ ಮಟ್ಟಕ್ಕೆ ಇಳಿಕೆಯಾಗಿವೆ ಎಂದು ವರದಿಯಾಗಿದೆ. ನೊಮುರಾ ಇಂಡಿಯಾ ಬಿಸಿನೆಸ್‌ ಸೂಚ್ಯಂಕದ ಪ್ರಕಾರ ಏ.11ಕ್ಕೆ ಅಂತ್ಯವಾದ ವಾರದಲ್ಲಿ ಸೂಚ್ಯಂಕದ ಅಂಕ 93.7ರಿಂದ 90.4ಕ್ಕೆ ಇಳಿಕೆಯಾಗಿದೆ. ಕೋವಿಡ್‌-19 ಎರಡನೆಯ ಅಲೆಯನ್ನು ತಡೆಯಲು ವಿಧಿಸಲಾಗುತ್ತಿರುವ ನಿರ್ಬಂಧಗಳಿಂದ ಆರ್ಥಿಕತೆಗೆ ಏಪ್ರಿಲ್‌-ಜೂನ್‌ ತ್ರೈಮಾಸಿದಲ್ಲಿ ಹಿನ್ನಡೆಯಾಗಲಿದೆ. ನಂತರ ಮತ್ತೆ ಚೇತರಿಕೆಯಾಗಲಿದೆ. ಹೀಗಿದ್ದರೂ, ಮತ್ತಿತರ ನಿರ್ಬಂಧಗಳು ದೀರ್ಘಕಾಲೀನವಾಗಿ ಮುಂದುವರಿದರೆ ಆರ್ಥಿಕ ಬೆಳವಣಿಗೆಗೆ ತೊಡಕಾಗಲಿದೆ ಎಂದು ಆರ್ಥಿಕ ತಜ್ಞರು ಹೇಳಿದ್ದಾರೆ. ಏಪ್ರಿಲ್‌-ಜೂನ್‌ ನಂತರ ಚೇತರಿಕೆ? ನಿರ್ಬಂಧಗಳು ಹಾಗೂ ಭಾಗಶಃ ಲಾಕ್‌ ಡೌನ್‌ ಪರಿಣಾಮ ಏಪ್ರಿಲ್‌-ಜೂನ್‌ ತ್ರೈಮಾಸಿಕದಲ್ಲಿಆರ್ಥಿಕ ಚಟುವಟಿಕೆಗಳ ಮೇಲೆ ಪ್ರತಿಕೂಲ ಪ್ರಭಾವ ಬೀರಬಹುದು. ಆದರೆ ನಂತರದ ತ್ರೈಮಾಸಿಕಗಳಲ್ಲಿ ಜಿಡಿಪಿ ಚೇತರಿಸಲಿದೆ ಎಂದು ಆರ್ಥಿಕ ತಜ್ಞರು ಹೇಳಿದ್ದಾರೆ. '' ಮೂಡೀಸ್‌, ಗೋಲ್ಡ್‌ ಮ್ಯಾನ್‌ ಸ್ಯಾಕ್ಸ್‌, ನೊಮುರಾ ಇತ್ಯಾದಿ ಸಂಸ್ಥೆಗಳ ಸಮೀಕ್ಷೆ ಪ್ರಕಾರ ಕೋವಿಡ್‌-19 ಬಿಕ್ಕಟ್ಟಿನ ನಡುವೆಯೂ ಭಾರತದ ಜಿಡಿಪಿ ಎರಡಂಕಿಯ ಬೆಳವಣಿಗೆ ದಾಖಲಿಸಲಿದೆ. ನಿರ್ಬಂಧಗಳಿಂದ ಜಿಡಿಪಿಯ ಮೇಲೆ ಶೇ.0.05ರಿಂದ ಶೇ.1ರಷ್ಟು ಇಳಿಕೆಯಾಗಬಹುದು. ಆದರೆ ಒಟ್ಟಾರೆಯಾಗಿ ಬೆಳವಣಿಗೆ ದಾಖಲಾಗಲಿದೆ. ಹೀಗಿದ್ದರೂ, ಕೋವಿಡ್‌-19 ಬಿಕ್ಕಟ್ಟಿನ ನಂತರ ತಂತ್ರಜ್ಞಾನದ ಪರಿಣಾಮ ಉದ್ಯಮ ವಲಯದಲ್ಲಿ ಅಗಾಧ ಪರಿವರ್ತನೆಯಾಗಿದೆ'' ಎನ್ನುತ್ತಾರೆ ಅಸೊಚೆಮ್‌ ಮಾಜಿ ಅಧ್ಯಕ್ಷ ಸಂಪತ್‌ ರಾಮನ್‌. ಮಹಾರಾಷ್ಟ್ರ ಎಫೆಕ್ಟ್: ಮಹಾರಾಷ್ಟ್ರದಲ್ಲಿ ಲಾಕ್‌ಡೌನ್‌ ಪರಿಣಾಮ ಮುಂದಿನ 15 ದಿನಗಳ ಕಾಲ ಸುಮಾರು ಅರ್ಧದಷ್ಟು ಕಾರ್ಖಾನೆಗಳು ಉತ್ಪಾದನೆ ಸ್ಥಗಿತಗೊಳಿಸುವ ಸಾಧ್ಯತೆ ಇದೆ. ಗೃಹ ಬಳಕೆಯ ಉಪಕರಣಗಳು, ಜವಳಿ ಮಾರುಕಟ್ಟೆ ಬಂದ್‌ ಆಗುವ ಸಾಧ್ಯತೆ ಇದೆ. ಇವುಗಳನ್ನು ಅಗತ್ಯ ವಸ್ತು, ಸೇವೆಗಳ ಪಟ್ಟಿಯಿಂದ ಹೊರಗಿಡಲಾಗಿದೆ. ರಫ್ತು ಆಧಾರಿತ ಉದ್ದಿಮೆಗಳು ಮುಂದುವರಿಯಲಿವೆ. ಈ ವಲಯದಲ್ಲೂ ಕೈಗಾರಿಕೆಗಳೂ ಶೇ.50ರಷ್ಟು ಕಾರ್ಮಿಕ ಬಲದಲ್ಲಿ ಕಾರ್ಯನಿರ್ವಹಿಸಬೇಕೆಂದೂ ನಿರ್ಬಂಧ ವಿಧಿಸಲಾಗಿದೆ. ಉಳಿದ ಕೈಗಾರಿಕೋದ್ಯಮಗಳು 15 ದಿನ ಸ್ಥಗಿತಗೊಳ್ಳಬೇಕು ಎಂದು ಸೂಚಿಸಲಾಗಿದೆ. ಮಹಾರಾಷ್ಟ್ರ ಪ್ರಮುಖ ಕೈಗಾರಿಕಾ ರಾಜ್ಯವಾದ್ದರಿಂದ ಇದರ ಪರಿಣಾಮ ಇತರ ರಾಜ್ಯಗಳ ಮೇಲೂ ಆಗುವ ನಿರೀಕ್ಷೆ ಇದೆ.