ಪ್ರತ್ಯೇಕ ಚಿಮುಲ್‌ನಿಂದ ಆರ್ಥಿಕ ಅಭಿವೃದ್ಧಿ: ಕೋಚಿಮುಲ್‌ ನಿರ್ದೇಶಕ ಜೆ.ಕಾಂತರಾಜು

ಅವಿಭಜಿತ ಕೋಲಾರ ಜಿಲ್ಲೆಯ ಹಾಲು ಒಕ್ಕೂಟವನ್ನು ಪ್ರತ್ಯೇಕಗೊಳಿಸಿ ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ರಚನೆಗೆ ರಾಜ್ಯ ಸಚಿವ ಸಂಪುಟವು ಅನುಮೋದನೆ ನೀಡಿರುವುದು ಜಿಲ್ಲೆಯ ಜನತೆಯ ಹಾಗೂ ರೈತರು ಸಂತಸ ವ್ಯಕ್ತಪಡಿಸಿದ್ದಾರೆ.

ಪ್ರತ್ಯೇಕ ಚಿಮುಲ್‌ನಿಂದ ಆರ್ಥಿಕ ಅಭಿವೃದ್ಧಿ: ಕೋಚಿಮುಲ್‌ ನಿರ್ದೇಶಕ ಜೆ.ಕಾಂತರಾಜು
Linkup
ಗೌರಿಬಿದನೂರು: ಬಹು ವರ್ಷಗಳ ಬೇಡಿಕೆಯಂತೆ ಅವಿಭಜಿತ ಜಿಲ್ಲೆಯ ಹಾಲು ಒಕ್ಕೂಟವನ್ನು ಪ್ರತ್ಯೇಕಗೊಳಿಸಿ ಹಾಲು ಒಕ್ಕೂಟ ರಚನೆಗೆ ರಾಜ್ಯ ಸಚಿವ ಸಂಪುಟವು ಅನುಮೋದನೆ ನೀಡಿರುವುದು ಜಿಲ್ಲೆಯ ಜನತೆಯ ಹಾಗೂ ರೈತರು ಸಂತಸ ವ್ಯಕ್ತಪಡಿಸಿದ್ದಾರೆ ಎಂದು ಕೋಚಿಮುಲ್‌ ನಿರ್ದೇಶಕ ಜೆ.ಕಾಂತರಾಜು ಹೇಳಿದರು. ನಗರದ ಕೋಚಿಮುಲ್‌ ಶೀತಲ ಘಟಕ ಕೇಂದ್ರ ಸಭಾಂಗಣದಲ್ಲಿ ರಾಸುಗಳ ವಿಮಾ ಫಲಾನುಭವಿಗಳಿಗೆ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಗಳಿಸಿದ ರೈತರ ಮಕ್ಕಳಿಗೆ ಉಚಿತ ಲ್ಯಾಪ್‌ಟ್ಯಾಪ್‌ ವಿತರಿಸಿ ಮಾತನಾಡಿದರು. 2007ರಲ್ಲಿ ಕೋಲಾರ ಜಿಲ್ಲೆಯಿಂದ ವಿಭಜನೆಗೊಂಡು ಪ್ರತ್ಯೇಕ ಜಿಲ್ಲೆಯಾದ ಚಿಕ್ಕಬಳ್ಳಾಪುರ 14 ವರ್ಷಗಳ ಬಳಿಕ ತನ್ನದೇ ಆದ ಪ್ರತ್ಯೇಕ ಹಾಲು ಒಕ್ಕೂಟ ಹೊಂದುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್‌ ಅವರು ಕೆಲವು ಶಾಸಕರ ವಿರೋಧಗಳ ನಡುವೆಯೂ ಎಚ್‌.ಎನ್‌.ವ್ಯಾಲಿ, ಸಂಸ್ಕರಿದ ತ್ಯಾಜ್ಯು ನೀರು ಪೂರೈಕೆ ಯೋಜನೆ, ಮೆಡಿಕಲ್‌ ಕಾಲೇಜು, ಮಂಚೇನಹಳ್ಳಿ ತಾಲೂಕು ಘೋಷಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದರು. ಮೆಗಾಡೇರಿ: ಈಗಾಗಲೇ ಜಿಲ್ಲೆಯಲ್ಲಿ ಮೆಗಾಡೈರಿ ಹೊಂದಿದ್ದು ಜಿಲ್ಲಾ ಹಾಲು ಒಕ್ಕೂಟ ರಚನೆಯಿಂದ ಜಿಲ್ಲೆಯ ರೈತರಿಗೆ ಹೆಚ್ಚು ಸಹಕಾರಿಯಾಗಲಿದ್ದು, ಎರಡು ವರ್ಷಗಳಲ್ಲಿ ಕೋಲಾರ ಡೇರಿಗಿಂತಲೂ ಹೆಚ್ಚು ಆರ್ಥಿಕ ಸಬಲೀಕರಣಕ್ಕೆ ನಿರ್ದೇಶಕರುಗಳು ಶ್ರಮಿಸುತ್ತೇವೆ ಹಾಗೂ ರೈತರಿಗೆ ಕೋಲಾರ ಡೇರಿಗಿಂತಲೂ ಹಾಲಿಗೆ ಹೆಚ್ಚು ಹಣ ಬೆಲೆ ನೀಡಲಾಗುವುದು ಎಂದು ತಿಳಿಸಿದರು. ಚಿಮುಲ್‌ಗೆ ಹಸಿರು ನಿಶಾನೆ: ನಿರ್ದೇಶಕ ಸುಬ್ಬಾರೆಡ್ಡಿ ಮಾತನಾಡಿ, ಪ್ರತ್ಯೇಕ ಚಿಮುಲ್‌ ರಚನೆಗೆ ಸರಕಾರದಿಂದ ಅನುಮೋದನೆ ದೊರೆತಿರುವುದರಿಂದ ಜಿಲ್ಲೆಯ ಆರ್ಥಿಕ ಅಭಿವೃದ್ದಿಗೆ ಮತ್ತಷ್ಟು ಬಲ ಬಂದಂತಾಗಿದೆ, ಸಹಕಾರ ಸಂಘಗಳನ್ನು ರಾಜಕೀಯ ಉದ್ದೇಶಗಳಿಗೆ ಬಳಕೆ ಮಾಡುವುದು ಸರಿಯಲ್ಲ, ರೈತರ ಹಿತದೃಷ್ಟಿಯಿಂದ ನಮ್ಮ ಜಿಲ್ಲಾ ಉಸ್ತುವಾರಿ ಸಚಿವರು ಕೊಟ್ಟ ಮಾತಿನಂತೆ ಇಂದು ಚಿಮುಲ್‌ ರಚನೆಗೆ ಹಸಿರು ನಿಶಾನೆ ಪಡೆದುಕೊಂಡಿದ್ದಾರೆ ಎಂದು ತಿಳಿಸಿರು. ಡಿಸಿಸಿ ಬ್ಯಾಂಕ್‌ ವಿಭಜನೆಯಾಗಲಿದೆ: ನಿರ್ದೇಶಕಿ ಸುನಂದಮ್ಮಪೆದ್ದಾರೆಡ್ಡಿ ಮಾತನಾಡಿ, ಚಿಕ್ಕಬಳ್ಳಾಪುರ ಜಿಲ್ಲೆಗೆ ಪ್ರತ್ಯೇಕ ಹಾಳು ಒಕ್ಕೂಟ ಸ್ಥಾಪನೆ ಹೋರಾಟಕ್ಕೆ ಜಯ ಸಿಕ್ಕಂತಾಗಿದೆ, ಕಳೆದ 15 ವರ್ಷಗಳ ಬೇಡಿಕೆಯಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ನೆರವೇರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜಿಲ್ಲೆಯ ಜನರ ಧ್ವನಿಗೆ ಸುಧಾಕರ್‌ ಧ್ವನಿಗೂಡಿಸಿ ಪ್ರತ್ಯೇಕ ಒಕ್ಕೂಟಕ್ಕೆ ಅನುಮೂದನೆಯನ್ನು ಸರಕಾರದಿಂದ ಪಡೆದುಕೊಂಡಿದ್ದಾರೆ, ಪ್ರತ್ಯೇಕ ಹಾಲು ಒಕ್ಕೂಟದ ಜತೆಗೆ ಪ್ರತ್ಯೇಕ ಡಿಸಿಸಿ ಬ್ಯಾಂಕ್‌ ವಿಭಜನೆಗೂ ಸಹ ಆಗಲಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ರೈತರ ಹಸುಗಳ ವಿಮಾ ಸೌಲಭ್ಯದ ಚೆಕ್‌ಗಳನ್ನು ಹಾಗೂ ಪಿಯುಸಿಯಲ್ಲಿ ಅತ್ಯುತ್ತಮ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಲ್ಯಾಪ್‌ಟ್ಯಾಪ್‌ಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಕೋಚಿಮುಲ್‌ ಶೀಥಲ ಘಟಕದ ವ್ಯವಸ್ಥಾಪಕರಾದ ಗಜರಾಜ್‌ ಸಿ.ರಣತೂರ್‌,ವಿಜಯಲಕ್ಷ್ಮಿ, ವಿಸ್ತರಣಾಧಿಕಾರಿ ಉದಯ ಶಂಕರರೆಡ್ಡಿ , ಡೇರಿಗಳ ಕಾರ್ಯದರ್ಶಿಗಳು ಮತ್ತು ಸಿಬ್ಬಂದ್ದಿ ಹಾಜರಿದ್ದರು. ಜಿಲ್ಲೆಯಲ್ಲಿ ಪ್ರತಿನಿತ್ಯ 4.5 ಲಕ್ಷ ಲೀ.ಹಾಲು ಉತ್ಪಾದನೆಯಾಗುತ್ತಿದ್ದು, ಡಾ.ಕೆ.ಸುಧಾಕರ್‌ ಅವರು ನೀಡಿದ ಭರವಸೆಯಂತೆ ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟ ರಚನೆಗೆ ಸರಕಾರದಿಂದ ಅಂಗೀಕಾರ ಸಿಕ್ಕಿದೆ ಅದೇ ರೀತಿ ಡಿಸಿಸಿ ಬ್ಯಾಂಕ್‌ ಪ್ರತ್ಯೇಕವನ್ನೂ ಸಹ ಶೀಘ್ರದಲ್ಲೇ ಸರಕಾರ ಅಂಗೀಕಾರ ಮಾಡಲಿದೆ. ಮುಂದಿನ ದಿನಗಳಲ್ಲಿ ಚಿಮುಲ್‌ ಘಟಕದಿಂದ ಪನ್ನೀರ್‌ ಘಟಕವನ್ನು ಆರಂಭಿಸಲಾಗುವುದು. -ಜೆ.ಕಾಂತರಾಜು, ನಿರ್ದೇಶಕರು ಕೋಚಿಮುಲ್‌ "ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಹಾಲು ಒಕ್ಕೂಟ ವಿಭಜನೆಗೆ ಫಣತೊಟ್ಟಿದ್ದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್‌ ಅವರು ರೈತರಿಗೆ ಕೊಟ್ಟ ಮಾತಿನಂತೆ ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ, ಇದರಿಂದ ಜಲ್ಲೆಯ ರೈತರ ಆರ್ಥಿಕ ಅಭಿವೃದ್ಧಿಗೆ ಹೆಚ್ಚು ಸಹಕಾರಿಯಾಗಲಿದೆ. ಚಿಮುಲ್‌ ಅಭಿವೃದ್ಧಿಗೆ ಪಕ್ಷಾತೀತವಾಗಿ ಶ್ರಮಿಸಬೇಕು." -ಸುಬ್ಬಾರೆಡ್ಡಿ, ನಿರ್ದೇಶಕರು , ಕೋಚಿಮುಲ್‌ ಚಿಕ್ಕಬಳ್ಳಾಪುರ ಜಿಲ್ಲೆಯಾಗಿ ಘೋಷಣೆಯಾದ 14ವರ್ಷಗಳ ಬಳಿಕ ಪ್ರತ್ಯೇಕ ಹಾಲು ಒಕ್ಕೂಟ ರಚನೆಯಾದಂತಾಗಿರುವುದು ಸಂತಸ ಸಂಗತಿಯಾಗಿದೆ. ಮುಂದಿನ ದಿನಗಳಲ್ಲಿ ಚಿಮುಲ್‌ ಹಾಲು ಒಕ್ಕೂಟಕ್ಕೆ ಸೂಕ್ತ ಮಾರುಕಟ್ಟೆ ಹಾಗೂ ಅಭಿವೃದ್ಧಿಗೆ ಜಿಲ್ಲಾ ಉಸ್ತುವಾರಿ ಸಚಿವರು ಶ್ರಮಿಸುವುದಾಗಿ ತಿಳಿಸಿರುವುದು ಸಂತಸದ ಸಂಗತಿಯಾಗಿದೆ. ಇದರಿಂದ ರೈತರ ಸರ್ವತೋಮುಖ ಅಭಿವೃದ್ಧಿಗೆ ಸಚಿವರು ಪ್ರತ್ಯೇಕ ಹಾಲು ಒಕ್ಕೂಟದ ಮೂಲಕ ನಾಂದಿ ಹಾಡಿದ್ದಾರೆ. ಶೀಘ್ರದಲ್ಲೇ ಮಂಚೇನಹಳ್ಳಿ ತಾಲೂಕಿನ ಸರ್ವತೋಮುಖ ಅಭಿವೃದ್ದಿಗೆ ಹೆಚ್ಚು ಒತ್ತು ನೀಡಲಿದ್ದಾರೆ. -ಸುನಂದಮ್ಮ ಪೆದ್ದಾರೆಡ್ಡಿ, ನಿರ್ದೇಶಕರು, ಕೋಚಿಮುಲ್‌