ಕೊರೊನಾ ಲಕ್ಷಣಗಳನ್ನು ಜನ ಸೀರಿಯಸ್‌ಆಗಿ ತೆಗೆದುಕೊಳ್ತಿಲ್ಲ: ಪ್ರಜ್ವಲ್ ದೇವರಾಜ್ ಬೇಸರ

ಕೊರೊನಾ ವೈರಸ್ ರೋಗ ಲಕ್ಷಣಗಳನ್ನು ಜನ ಸೀರಿಯಸ್‌ಆಗಿ ತೆಗೆದುಕೊಳ್ಳುತ್ತಿಲ್ಲ. ನೆಗ್ಲೆಟ್ ಮಾಡುತ್ತಿರುವುದರಿಂದ ಸೋಂಕು ಹೆಚ್ಚಾಗುತ್ತಿದೆ ಎಂದು ಪ್ರಜ್ವಲ್ ದೇವರಾಜ್ ಬೇಸರ ವ್ಯಕ್ತಪಡಿಸಿದ್ದಾರೆ.

ಕೊರೊನಾ ಲಕ್ಷಣಗಳನ್ನು ಜನ ಸೀರಿಯಸ್‌ಆಗಿ ತೆಗೆದುಕೊಳ್ತಿಲ್ಲ: ಪ್ರಜ್ವಲ್ ದೇವರಾಜ್ ಬೇಸರ
Linkup
ಡೈನಾಮಿಕ್ ಪ್ರಿನ್ಸ್ ಹಾಗೂ ಪತ್ನಿ ರಾಗಿಣಿ ಚಂದ್ರನ್‌ಗೆ ಕೊರೊನಾ ವೈರಸ್ ಸೋಂಕು ತಗುಲಿತ್ತು. ಕೆಲ ದಿನಗಳ ಹಿಂದೆಯಷ್ಟೇ ಅವರಿಗೆ ಕಂಡುಬಂದಿತ್ತು. ಆದ್ರೀಗ, ಕೊರೊನಾ ವೈರಸ್ ಸೋಂಕಿನಿಂದ ಪ್ರಜ್ವಲ್ ದೇವರಾಜ್ ಹಾಗೂ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. ಯುಗಾದಿ ಹಬ್ಬಕ್ಕೂ ಮುನ್ನವೇ ಪ್ರಜ್ವಲ್ ದೇವರಾಜ್ ಹಾಗೂ ಪತ್ನಿ ರಾಗಿಣಿ ಚಂದ್ರನ್‌ಗೆ ಕೊರೊನಾ ವೈರಸ್ ನೆಗೆಟಿವ್ ಬಂದಿತ್ತು. ಹೀಗಾಗಿ, ಯುಗಾದಿ ಹಬ್ಬವನ್ನು ಕುಟುಂಬದ ಜೊತೆಗೆ ಖುಷಿಯಾಗಿ ಆಚರಿಸಿದ್ದಾರೆ ಪ್ರಜ್ವಲ್ ದೇವರಾಜ್. ಕೊರೊನಾ ವೈರಸ್ ಎರಡನೇ ಅಲೆಯಿಂದ ಕೋವಿಡ್-19 ಪಾಸಿಟಿವ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಜನರು ಸೋಂಕನ್ನು ಲಘುವಾಗಿ ಪರಿಗಣಿಸುತ್ತಿದ್ದಾರೆ. ಜನರು ಜಾಗರೂಕರಾಗಿರಬೇಕು ಎಂದು ಕೊರೊನಾ ಗೆದ್ದ ಪ್ರಜ್ವಲ್ ದೇವರಾಜ್‌ ಹೇಳಿದ್ದಾರೆ. ಪ್ರಜ್ವಲ್ ದೇವರಾಜ್ ಹೇಳಿದ್ದೇನು? ''ಕೊರೊನಾ ಪರೀಕ್ಷೆಗೆ ಒಳಗಾಗುವ ಎರಡು ದಿನಗಳ ಮುನ್ನವೇ ನನಗೆ ಸುಸ್ತು ಕಾಡುತ್ತಿತ್ತು. ಜ್ವರ ಕೂಡ ಬಂದಿತ್ತು. ಹೀಗಾಗಿ ಪಾಸಿಟಿವ್ ಅಂತ ಗೊತ್ತಾಗುವ ಮುನ್ನವೇ ನಾನು ಐಸೊಲೇಟ್ ಆದೆ. ಇದನ್ನ ಎಲ್ಲರೂ ಅನುಸರಿಸಬೇಕು. ಬರೀ ನೆಗಡಿ ಅಥವಾ ಸುಸ್ತು ಅಂತ ಎಷ್ಟೋ ಜನ ನೆಗ್ಲೆಟ್ ಮಾಡುತ್ತಿದ್ದಾರೆ. ಆದರೆ, ಈ ಹಂತವೇ ಬಹಳ ಮುಖ್ಯವಾದದ್ದು. ಈ ಹಂತದಲ್ಲಿ ಯಾರೊಂದಿಗೂ ಬೆರೆಯದೆ ಐಸೊಲೇಟ್ ಆಗುವುದು ಬಹಳ ಮುಖ್ಯ. ರೋಗ ಲಕ್ಷಣಗಳನ್ನು ಜನ ಸೀರಿಯಸ್‌ಆಗಿ ತೆಗೆದುಕೊಳ್ಳುತ್ತಿಲ್ಲ'' ಎಂದು ಪ್ರಜ್ವಲ್ ದೇವರಾಜ್ ಬೇಸರ ವ್ಯಕ್ತಪಡಿಸಿದ್ದಾರೆ. ''ನನಗೆ ಹಾಗೂ ಪತ್ನಿ ರಾಗಿಣಿಗೆ ಮೈಲ್ಡ್ ರೋಗ ಲಕ್ಷಣಗಳಿದ್ದವು. ಕೊರೊನಾ ಪರೀಕ್ಷೆ ಮಾಡಿಸಿದಾಗ ಭಯ ಇರಲಿಲ್ಲ. ಕೆಲ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಹಾಗೂ ಔಷಧಿ ಪಡೆದುಕೊಂಡ್ವಿ. ಪಾಸಿಟಿವ್ ಬಂದ ಬಳಿಕ ನನಗೆ ಸುಸ್ತು ಕಾಡುತ್ತಿತ್ತು. ವಾಸನೆ ಮತ್ತು ರುಚಿ ಗ್ರಹಿಕೆ ಇರಲಿಲ್ಲ. ಕ್ವಾರಂಟೈನ್ ಆಗಿದ್ದಾಗ ಪೇಂಟಿಂಗ್ ಮತ್ತು ವರ್ಕೌಟ್ ಮಾಡುತ್ತಿದ್ದೆ'' ಅಂತ ಪ್ರಜ್ವಲ್ ದೇವರಾಜ್ ಹೇಳಿದ್ದಾರೆ. ''ಸೋಂಕು ಕಾಣಿಸಿಕೊಂಡಾಗ ಆರೋಗ್ಯಕರ ಆಹಾರ ಸೇವಿಸುವುದು ಬಹಳ ಮುಖ್ಯ. ಔ‍ಷಧಿ ತೆಗೆದುಕೊಳ್ಳುವಾಗ ದೇಹಕ್ಕೆ ನ್ಯೂಟ್ರಿಷನ್ ಅವಶ್ಯಕ. ರಾಗಿಣಿಗೂ ಪಾಸಿಟಿವ್ ಬಂದಿದ್ರಿಂದ ನಾವಿಬ್ಬರೂ ಬೆಳಗ್ಗೆ ಬೇಗ ಎದ್ದು, ಧ್ಯಾನ ಮಾಡ್ತಿದ್ವಿ. ಆರೋಗ್ಯದಲ್ಲಿ ಚೇತರಿಕೆ ಕಂಡುಬಂದರೂ ನಾವು ಹೊರಗೆ ಹೋಗಲಿಲ್ಲ. ಕೊರೊನಾ ನೆಗೆಟಿವ್ ರಿಪೋರ್ಟ್ ಕೆಲ ದಿನಗಳ ಹಿಂದೆ ಬಂತು. ಹೀಗಾಗಿ, ಫ್ಯಾಮಿಲಿ ಒಟ್ಟಿಗೆ ಸೇರಿ ಯುಗಾದಿ ಹಬ್ಬ ಆಚರಣೆ ಮಾಡಿದ್ವಿ'' ಎಂದಿದ್ದಾರೆ ಪ್ರಜ್ವಲ್ ದೇವರಾಜ್. ''ನಾವು ಮನೆಯ ಮೇಲಿನ ಮಹಡಿಯಲ್ಲಿ ಐಸೊಲೇಟ್ ಆಗಿದ್ವಿ. ಈ ಸಮಯದಲ್ಲಿ ಅಪ್ಪ-ಅಮ್ಮನನ್ನು ಅಪ್ಪಿಕೊಳ್ಳುವುದನ್ನು ನಾನು ತುಂಬಾ ಮಿಸ್ ಮಾಡಿದೆ. ಅಪ್ಪ-ಅಮ್ಮ ನೆಲ ಮಹಡಿಯಲ್ಲಿದ್ದರು. ಪ್ರತಿ ದಿನ ಬೆಳಗ್ಗೆ ದೂರದಿಂದಲೇ ಅವರಿಗೆ ಗುಡ್ ಮಾರ್ನಿಂಗ್ ಹೇಳುತ್ತಿದ್ದೆ'' ಅಂತ ಹೇಳಿ ಕ್ವಾರಂಟೈನ್ ದಿನಗಳನ್ನು ಪ್ರಜ್ವಲ್ ದೇವರಾಜ್ ಮೆಲುಕು ಹಾಕಿದರು. ''ಚೇತರಿಕೆ ಕಂಡ ಕೂಡಲೆ ಕೆಲವರು ಹೊರಗೆ ಬಂದುಬಿಡುತ್ತಾರೆ. ಇದು ತಪ್ಪು. ಸಂಪೂರ್ಣವಾಗಿ ಗುಣಮುಖರಾಗುವವರೆಗೂ ಕಾಯಬೇಕು. ಇಲ್ಲದಿದ್ದರೆ ಬೇರೆಯವರ ಜೀವಕ್ಕೆ ಅಪಾಯ'' ಎಂಬ ಸಲಹೆಯನ್ನ ಪ್ರಜ್ವಲ್ ದೇವರಾಜ್ ನೀಡಿದ್ದಾರೆ.