ನಾಗರಿಕ ವಿಮಾನಯಾನ ಇಲಾಖೆಯಿಂದ ಹೊಸ ನಿಯಮ, ಏರ್‌ ಟಿಕೆಟ್‌ ದರ ದುಬಾರಿ

ನಾಗರಿಕ ವಿಮಾನಯಾನ ಇಲಾಖೆಯು ವಿಮಾನ ಟಿಕೆಟ್‌ಗಳ ಕನಿಷ್ಠ ದರದ ಮಿತಿಯನ್ನು ಏರಿಕೆ ಮಾಡಿರುವುದರಿಂದ ದರಗಳು ಶೇ.12.82ರ ತನಕ ಶೀಘ್ರ ಏರಿಕೆಯಾಗಲಿವೆ. 40 ನಿಮಿಷಗಳ ಹಾರಾಟದ ಕನಿಷ್ಠ ಮಿತಿಯನ್ನು 2,600 ರೂ.ಗಳಿಂದ 2,900 ರೂ.ಗೆ ಏರಿಸಲಾಗಿದೆ.

ನಾಗರಿಕ ವಿಮಾನಯಾನ ಇಲಾಖೆಯಿಂದ ಹೊಸ ನಿಯಮ, ಏರ್‌ ಟಿಕೆಟ್‌ ದರ ದುಬಾರಿ
Linkup
ಹೊಸದಿಲ್ಲಿ: ನಾಗರಿಕ ಇಲಾಖೆಯು ಏರ್‌ ಟಿಕೆಟ್‌ಗಳ ಕನಿಷ್ಠ ದರದ ಮಿತಿಯನ್ನು ಏರಿಕೆ ಮಾಡಿರುವುದರಿಂದ ದರಗಳು ಶೇ.12.82ರ ತನಕ ಶೀಘ್ರ ಏರಿಕೆಯಾಗಲಿವೆ. ನಾಗರಿಕ ವಿಮಾನಯಾನ ಸಚಿವಾಲಯವು ಆಗಸ್ಟ್‌ 12ರಂದು ಹೊರಡಿಸಿರುವ ಆದೇಶದ ಪ್ರಕಾರ, 40 ನಿಮಿಷಗಳ ಅವಧಿಯ ಹಾರಾಟದ ವಿಮಾನಯಾನಕ್ಕೆ ಕನಿಷ್ಠ ಮಿತಿಯನ್ನು 2,600 ರೂ.ಗಳಿಂದ 2,900 ರೂ.ಗೆ ಏರಿಸಲಾಗಿದೆ. ಶೇ.11.53ರಷ್ಟು ವೃದ್ಧಿಸಲಾಗಿದೆ. ಗರಿಷ್ಠ ಮಿತಿಯನ್ನು 8,800 ರೂ.ಗೆ ಏರಿಸಲಾಗಿದೆ. ಅಂದರೆ ಶೇ.12.83ರಷ್ಟು ವೃದ್ಧಿಸಲಾಗಿದೆ. ಇದೇ ರೀತಿ 40-60 ನಿಮಿಷಗಳ ಅವಧಿಯ ಹಾರಾಟಕ್ಕೆ ಕನಿಷ್ಠ ದರ ಮಿತಿಯನ್ನು ಈಗಿನ 3,300 ರೂ.ಗಳಿಂದ 3,700 ರೂ.ಗೆ ಏರಿಸಲಾಗಿದೆ. ಗರಿಷ್ಠ ಮಿತಿಯನ್ನು ಶೇ.12.24ರಷ್ಟು ವೃದ್ಧಿಸಲಾಗಿದ್ದು, 11,000 ರೂ.ಗೆ ನಿಗದಿಯಾಗಿದೆ. 60-90 ನಿಮಿಷಗಳ ಅವಧಿಗೆ ಕನಿಷ್ಠ ದರದ ಮಿತಿಯನ್ನು 4,500 ರೂ.ಗೆ ಹಾಗೂ ಗರಿಷ್ಠ ದರ ಮಿತಿಯನ್ನು 13,200 ರೂ.ಗೆ ನಿಗದಿಪಡಿಸಲಾಗಿದೆ. ಸರಕಾರ ಕಳೆದ ವರ್ಷ ಮೇ 25ರಿಂದ ವಿಮಾನ ಹಾರಾಟದ ಅವಧಿಯನ್ನು ಆಧರಿಸಿ ಏರ್‌ಟಿಕೆಟ್‌ನ ದರಕ್ಕೆ ಮಿತಿ ವಿಧಿಸುತ್ತಿದೆ. ಕೋವಿಡ್‌ ಬಿಕ್ಕಟ್ಟಿನ ನಂತರ ವಿಮಾನ ಪ್ರಯಾಣಗಳಿಗೆ ನಿರ್ಬಂಧ ವಿಧಿಸಿದ್ದರಿಂದ ಏರ್‌ಲೈನ್‌ಗಳ ಆರ್ಥಿಕ ಬಿಕ್ಕಟ್ಟು ತೀವ್ರವಾಗಿತ್ತು. ಹೀಗಾಗಿ ಪ್ರಯಾಣ ದರಕ್ಕೆ ಕನಿಷ್ಠ ದರದ ಮಿತಿ ಇರುವುದರಿಂದ ಏರ್‌ಲೈನ್‌ಗಳಿಗೆ ಅನುಕೂಲಕರ. ಗರಿಷ್ಠ ಮಿತಿ ಇರುವುದರಿಂದ ಪ್ರಯಾಣಿಕರಿಗೆ ಅನುಕೂಲಕರವಾಗಿದೆ.