ಜಿಎಸ್‌ಟಿ ಪರಿಹಾರ ವ್ಯವಸ್ಥೆ ವಿಸ್ತರಿಸಲು ಕೇಂದ್ರಕ್ಕೆ ಪತ್ರ - ಯಡಿಯೂರಪ್ಪ

ಈಗಿರುವ ಜಿಎಸ್‌ಟಿ ಪರಿಹಾರ ವ್ಯವಸ್ಥೆಯನ್ನು ಮುಂದುವರಿಸುವಂತೆ ಒತ್ತಾಯಿಸಿ ಕೇಂದ್ರ ಸರಕಾರಕ್ಕೆ ಪತ್ರ ಬರೆಯಲಾಗುವುದು ಎಂದು ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಹೇಳಿದ್ದಾರೆ. ಈಗಿರುವ ವ್ಯವಸ್ಥೆ 2022ಕ್ಕೆ ಅಂತ್ಯವಾಗಲಿದೆ.

ಜಿಎಸ್‌ಟಿ ಪರಿಹಾರ ವ್ಯವಸ್ಥೆ ವಿಸ್ತರಿಸಲು ಕೇಂದ್ರಕ್ಕೆ ಪತ್ರ - ಯಡಿಯೂರಪ್ಪ
Linkup
ಬೆಂಗಳೂರು: ವ್ಯವಸ್ಥೆ ಮುಂದುವರಿಸುವಂತೆ ಒತ್ತಾಯಿಸಿ ಕೇಂದ್ರ ಸರಕಾರಕ್ಕೆ ಪತ್ರ ಬರೆಯಲಾಗುವುದು ಎಂದು ಸಿಎಂ ತಿಳಿಸಿದ್ದಾರೆ. ತೆರಿಗೆ ಸಂಗ್ರಹಣಾ ಇಲಾಖೆಗಳೊಂದಿಗೆ ಸಿಎಂ ಅವರು ಸೋಮವಾರ ಪ್ರಗತಿ ಪರಿಶೀಲನೆ ಸಭೆ ನಡೆಸಿದರು. ಬಳಿಕ ಮಾತನಾಡಿದ ಅವರು, ಪರಿಹಾರ ನೀಡುವ ಕ್ರಮ 2022ಕ್ಕೆ ಅಂತ್ಯಗೊಳ್ಳಲಿದೆ. ಹಾಗಾಗಿ ರಾಜ್ಯದ ಹಿತದೃಷ್ಟಿಯಿಂದ ಇದನ್ನು ಇನ್ನಷ್ಟು ವರ್ಷ ವಿಸ್ತರಿಸುವಂತೆ ಆಗ್ರಹಿಸಲಾಗುವುದು. ಈ ಸಂಬಂಧ ಕೇಂದ್ರಕ್ಕೆ ವಿವರವಾದ ಪತ್ರ ಬರೆಯಲಾಗುವುದು ಎಂದು ಹೇಳಿದರು. ಕೋವಿಡ್‌ ನಡುವೆಯೂ ತೆರಿಗೆ ಸಂಗ್ರಹ ತೃಪ್ತಿಕರವಾಗಿದೆ. ನಿರ್ಬಂಧ ಸಡಿಲಿಕೆ ಬಳಿಕ ಪರಿಸ್ಥಿತಿ ಸುಧಾರಿಸುವ ವಿಶ್ವಾಸವಿದೆ. ತೆರಿಗೆ ಸೋರಿಕೆ ತಡೆಯಲು ಒತ್ತು ಕೊಡುವಂತೆ ಸೂಚಿಸಲಾಗಿದೆ ಎಂದರು. ವಾಣಿಜ್ಯ ತೆರಿಗೆರಾಜ್ಯದಲ್ಲಿ 2020-21ರಲ್ಲಿ 82,443 ಕೋಟಿ ರೂ. ತೆರಿಗೆ ಸಂಗ್ರಹದ ಗುರಿಗೆ ಎದುರಾಗಿ 82,462 ಕೋಟಿ ರೂ. ತೆರಿಗೆ ಸಂಗ್ರಹವಾಗಿದೆ. ಅಬಕಾರಿ ಮೂಲದಿಂದ ಈ ವರ್ಷ 24,580 ಕೋಟಿ ರೂ. ಸಂಗ್ರಹದ ಗುರಿಯಿದೆ. ಮೇ ಅಂತ್ಯಕ್ಕೆ ಅನ್ವಯವಾಗುವಂತೆ 4,284.05 ಕೋಟಿ ರೂ. ಸಂಗ್ರಹವಾಗಿದೆ. ಜಿಎಸ್‌ಟಿ ಸಂಗ್ರಹದಲ್ಲಿ ರಾಜ್ಯ ಎರಡನೇ ಸ್ಥಾನದಲ್ಲಿದೆ ಎಂದು ಅಧಿಕಾರಿಗಳು ಸಭೆಗೆ ತಿಳಿಸಿದರು. ಹಣಕಾಸು ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಐ.ಎಸ್‌.ಎನ್‌. ಪ್ರಸಾದ್‌, ಮುಖ್ಯಮಂತ್ರಿಯವರ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ಇ.ವಿ. ರಮಣ ರೆಡ್ಡಿ, ಹಣಕಾಸು ಇಲಾಖೆ ಕಾರ್ಯದರ್ಶಿಗಳಾದ ಏಕ್‌ರೂಪ್‌ ಕೌರ್‌, ಪಿ.ಸಿ. ಜಾಫರ್‌, ವಾಣಿಜ್ಯ ತೆರಿಗೆ ಇಲಾಖೆ ಆಯುಕ್ತ ಎಂ.ಎಸ್‌. ಶ್ರೀಕರ್‌, ಅಬಕಾರಿ ಇಲಾಖೆ ಆಯುಕ್ತ ಬಿ. ಲೋಕೇಶ್‌ ಪಾಲ್ಗೊಂಡಿದ್ದರು.