ಜಿಯೋಗೆ 1,005 ಕೋಟಿ ರೂ.ಗೆ ಸ್ಪೆಕ್ಟ್ರಂ ಮಾರಾಟ ಮಾಡಿದ ಏರ್‌ಟೆಲ್‌!

ಮೂರು ವೃತ್ತಗಳಲ್ಲಿ 800 ಮೆಗಾಹರ್ಟ್ಸ್‌ ಸ್ಪೆಕ್ಟ್ರಂನ್ನು ಭಾರ್ತಿ ಏರ್‌ಟೆಲ್‌ ತನ್ನ ಪ್ರತಿಸ್ಪರ್ಧಿ ರಿಲಯನ್ಸ್ ಜಿಯೋ ಇನ್ಫೊಕಾಮ್‌ಗೆ ಮಾರಾಟ ಮಾಡಿದ್ದು, ಇದು ಎರಡು ಕಂಪನಿಗಳ ನಡುವಿನ ಮೊದಲ ಡೀಲ್‌ ಆಗಿದೆ.

ಜಿಯೋಗೆ 1,005 ಕೋಟಿ ರೂ.ಗೆ ಸ್ಪೆಕ್ಟ್ರಂ ಮಾರಾಟ ಮಾಡಿದ ಏರ್‌ಟೆಲ್‌!
Linkup
ಮುಂಬಯಿ: ವಲಯದಲ್ಲಿ ಜಗಜಟ್ಟಿಗಳ ತರ ಪೈಪೋಟಿಗೆ ಬಿದ್ದಿರುವ ಮತ್ತು ಜಿಯೋ ನಡುವೆಯೇ ತರಂಗಾತರಗಳ ಮಾರಾಟ ನಡೆದಿದೆ. ಅಚ್ಚರಿಯಾದರೂ ಇದು ಸತ್ಯ. ಮೂರು ವೃತ್ತಗಳಲ್ಲಿ 800 ಮೆಗಾಹರ್ಟ್ಸ್‌ ಸ್ಪೆಕ್ಟ್ರಂನ್ನು ಭಾರ್ತಿ ಏರ್‌ಟೆಲ್‌ ತನ್ನ ಪ್ರತಿ ಸ್ಪರ್ಧಿ ರಿಲಯನ್ಸ್ ಜಿಯೋ ಇನ್ಫೊಕಾಮ್‌ಗೆ ಮಾರಾಟ ಮಾಡಿದೆ. ಇದು ಎರಡು ಕಂಪನಿಗಳ ನಡುವಿನ ಮೊದಲ ಡೀಲ್‌ ಆಗಿದೆ. ಷೇರು ವಿನಿಮಯ ಮಾರುಕಟ್ಟೆಗೆ ರೆಗ್ಯುಲೇಟರಿ ಫೈಲಿಂಗ್‌ ವೇಳೆ ಒಪ್ಪಂದ ಪೂರ್ಣಗೊಂಡಿದೆ ಎಂದು ಏರ್‌ಟೆಲ್‌ ಹೇಳಿದೆ. ಇದರಿಂದ ಮೂರು ವಲಯಗಳಲ್ಲಿ ಏರ್‌ಟೆಲ್‌ನ 800 ಮೆಗಾಹರ್ಟ್ಸ್‌ ತರಂಗಗಳನ್ನು ಬಳಸಿಕೊಳ್ಳುವ ಹಕ್ಕು ಜಿಯೋಗೆ ಸಿಕ್ಕಿದೆ. ಒಪ್ಪಂದದ ಪ್ರಕಾರ 1004.8 ಕೋಟಿ ರೂ.ಗಳನ್ನು ಜಿಯೋದಿಂದ ಸ್ವೀಕರಿಸಿರುವುದಾಗಿ ಏರ್‌ಟೆಲ್‌ ಹೇಳಿದೆ. ಇದರ ಜತೆಗೆ ಭವಿಷ್ಯದ ಹೊಣೆಗಾರಿಕೆ ಮೊತ್ತ 469.3 ಕೋಟಿ ರೂ.ಗಳನ್ನೂ ಜಿಯೋ ಪಾವತಿಸಬೇಕಿದೆ. ಈ ವರ್ಷದ ಆರಂಭದಲ್ಲಿ ತನ್ನ 800 ಮೆಗಾಹರ್ಟ್ಸ್‌ನ ತರಂಗಗಳನ್ನು ರಿಲಯನ್ಸ್‌ ಜಿಯೋಗೆ ಮಾರಾಟ ಮಾಡಲು ಏರ್‌ಟೆಲ್‌ ಒಪ್ಪಂದ ಮಾಡಿಕೊಂಡಿತ್ತು. ನಂತರ ಆಂಧ್ರ ಪ್ರದೇಶದಲ್ಲಿ 3.75 ಮೆಗಾಹರ್ಟ್ಸ್‌, ದಿಲ್ಲಿಯಲ್ಲಿ 1.25 ಮೆಗಾಹರ್ಟ್ಸ್‌, ಮುಂಬಯಿನಲ್ಲಿ 2.5 ಮೆಗಾಹರ್ಟ್ಸ್‌ ತರಂಗಗಳನ್ನು ಮಾರಾಟ ಮಾಡುವ ಪ್ರಸ್ತಾವನೆಯನ್ನೂ ಕಂಪನಿ ಮುಂದಿಟ್ಟಿತ್ತು.