ದೇಶದಲ್ಲಿ ಹೆಚ್ಚಾದ 'ಬ್ಲ್ಯಾಕ್‌ ಫಂಗಸ್‌' ಕಾಟ, ದಿಲ್ಲಿಯಲ್ಲಿ ಒಂದೇ ದಿನ ಐವರು ಬಲಿ

​​ಹೆಚ್ಚು ಕಾಲ ಆಸ್ಪತ್ರೆಗಳಲ್ಲಿ ಉಳಿಯುವ ಕೋವಿಡ್‌-19 ಸೋಂಕಿತರು ಮತ್ತು ಕೊರೊನಾದಿಂದ ಗುಣಮುಖರಾಗಿ ಮಲೀನ ಪರಿಸರದಲ್ಲಿ ವಾಸ ಮಾಡುವ ದುರ್ಬಲ ಕಾಯರಿಗೆ ಫಂಗಸ್‌ ಸೋಂಕು ತಗುಲುವ ಸಾಧ್ಯತೆ ಹೆಚ್ಚಾಗಿರುತ್ತದೆ.

ದೇಶದಲ್ಲಿ ಹೆಚ್ಚಾದ 'ಬ್ಲ್ಯಾಕ್‌ ಫಂಗಸ್‌' ಕಾಟ, ದಿಲ್ಲಿಯಲ್ಲಿ ಒಂದೇ ದಿನ ಐವರು ಬಲಿ
Linkup
ಹೊಸದಿಲ್ಲಿ: ಕೋವಿಡ್‌ ಸಾಂಕ್ರಾಮಿಕ ಅಟ್ಟಹಾಸ ತೀವ್ರಗೊಂಡಿರುವ ನಡುವೆಯೇ ಸೋಂಕು ಹಾವಳಿ ಉಲ್ಬಣಗೊಂಡಿದೆ. ದಿಲ್ಲಿಯಲ್ಲಿ ಗುರುವಾರ ಈ ಸೋಂಕಿಗೆ ಐವರು ಬಲಿಯಾಗಿದ್ದಾರೆ. ಹೆಚ್ಚು ಕಾಲ ಆಸ್ಪತ್ರೆಗಳಲ್ಲಿ ಉಳಿಯುವ ಕೋವಿಡ್‌ ಸೋಂಕಿತರು ಹಾಗೂ ಸೋಂಕಿನಿಂದ ಗುಣಮುಖರಾಗಿ ಮಲೀನ ಪರಿಸರದಲ್ಲಿ ವಾಸ ಮಾಡುವ ದುರ್ಬಲ ಕಾಯರಿಗೆ ಫಂಗಸ್‌ ಸೋಂಕು ತಗುಲುವ ಸಾಧ್ಯತೆ ಹೆಚ್ಚಾಗಿರುತ್ತದೆ. ದಿಲ್ಲಿಯಲ್ಲಿ ಇಂತಹ ಪ್ರಕರಣಗಳು ಇತ್ತೀಚೆಗೆ ಉಲ್ಬಣಿಸಿದ್ದು, ಗುರುವಾರ ಒಂದೇ ದಿನ ಐವರು ಮೃತಪಟ್ಟಿದ್ದಾರೆ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ. ಮುಂಬಯಿನಲ್ಲಿ ಕೂಡ ಈ ಅಪರೂಪದ ಸೋಂಕಿಗೆ ಇಬ್ಬರು ಕೋವಿಡ್‌ ಸೋಂಕಿತರು ಬಲಿಯಾಗಿದ್ದಾರೆ. ಈ ಸೋಂಕಿನ ವಿವರಗಳ ಮೇಲೆ ನಿಗಾ ಇರಿಸಲು ಮಹಾರಾಷ್ಟ್ರ ಆರೋಗ್ಯ ಇಲಾಖೆ, ಪ್ರತ್ಯೇಕ ಡೇಟಾಬೇಸ್‌ ಸೃಷ್ಟಿಸಲು ನಿರ್ಧರಿಸಿದೆ. ಉಸಿರಾಟದ ಮೂಲಕ ಸೋಂಕಿತರ ದೇಹ ಸೇರುವ ಫಂಗಸ್‌, ಮೂಗಿನ ಮೇಲ್ಭಾಗ, ಕಣ್ಣು ಮತ್ತು ಮೆದುಳಿನ ಮೇಲೆ ಮಾರಕ ಪರಿಣಾಮ ಬೀರುತ್ತದೆ. ''ಚಿಕಿತ್ಸೆಯಲ್ಲಿ ಸ್ವಲ್ಪ ಎಡವಟ್ಟಾದರೂ ರೋಗಿ ಬದುಕುಳಿಯಲಾರ,'' ಎಂದು ವೈದ್ಯರು ಎಚ್ಚರಿಸಿದ್ದಾರೆ. ಕರ್ನಾಟಕದಲ್ಲಿಯೂ ಹಲವಾರು ಬ್ಲ್ಯಾಕ್‌ ಫಂಗಸ್‌ ಸೋಂಕಿತರಿಗೆ ಚಿಕಿತ್ಸೆ ನೀಡಲಾಗಿದ್ದು, ಈ ಬಗ್ಗೆ ಆರೋಗ್ಯ ಇಲಾಖೆ ತಜ್ಞರ ಮೂಲಕ ಅಧ್ಯಯನವನ್ನೂ ನಡೆಸುತ್ತಿದೆ.