ಭಾರತ 99 ರಾಷ್ಟ್ರಗಳ ಪ್ರವಾಸಿಗರಿಗೆ ಮುಕ್ತ, ಸಂಪೂರ್ಣ ಕೋವಿಡ್‌ ಲಸಿಕೆ ಮಾತ್ರ ಅವಶ್ಯಕ

ಭಾರತ 99 ರಾಷ್ಟ್ರಗಳ ಪ್ರವಾಸಿಗರಿಗೆ ಸೋಮವಾರದಿಂದ ಮುಕ್ತವಾಗಿದ್ದು, ಈ ದೇಶಗಳ ಪ್ರವಾಸಿಗರು ಸಂಪೂರ್ಣ ಕೊರೊನಾ ನಿರೋಧಕ ಲಸಿಕೆ ಹಾಕಿಸಿಕೊಂಡಿದ್ದರೆ, ಕ್ವಾರಂಟೈನ್‌ ಇಲ್ಲದೆಯೂ ದೇಶಕ್ಕೆ ಪ್ರವಾಸ ಕೈಗೊಳ್ಳಬಹುದು.

ಭಾರತ 99 ರಾಷ್ಟ್ರಗಳ ಪ್ರವಾಸಿಗರಿಗೆ ಮುಕ್ತ, ಸಂಪೂರ್ಣ ಕೋವಿಡ್‌ ಲಸಿಕೆ ಮಾತ್ರ ಅವಶ್ಯಕ
Linkup
ಹೊಸದಿಲ್ಲಿ: ಭಾರತ 99 ರಾಷ್ಟ್ರಗಳ ಪ್ರವಾಸಿಗರಿಗೆ ಸೋಮವಾರದಿಂದ ಮುಕ್ತವಾಗಿದೆ. ಈ ದೇಶಗಳ ಪ್ರವಾಸಿಗರು ಸಂಪೂರ್ಣ ಕೊರೊನಾ ನಿರೋಧಕ ಲಸಿಕೆ ಹಾಕಿಸಿಕೊಂಡಿದ್ದರೆ, ಕ್ವಾರಂಟೈನ್‌ ಇಲ್ಲದೆಯೂ ಭಾರತಕ್ಕೆ ಪ್ರವಾಸ ಕೈಗೊಳ್ಳಬಹುದು. ಅಮೆರಿಕ, ಬ್ರಿಟನ್‌, ಯುಎಇ, ಕತಾರ್‌, ಫ್ರಾನ್ಸ್‌, ಜರ್ಮನಿ ಸೇರಿದಂತೆ ಹಲವಾರು ಪ್ರಮುಖ ದೇಶಗಳಿಂದ ಪ್ರವಾಸಿಗರು ಮುಕ್ತವಾಗಿ ದೇಶಕ್ಕೆ ಬರಬಹುದು. ಭಾರತ ಕಳೆದ ಮಾರ್ಚ್‌ನಲ್ಲಿ ಪ್ರವಾಸಿ ವೀಸಾ ವಿತರಣೆಯನ್ನು ಅಮಾನತುಗೊಳಿಸಿತ್ತು. ಕಳೆದ ಅಕ್ಟೋಬರ್‌ 15ರಂದು ಮತ್ತೆ ಪ್ರವಾಸಿ ವೀಸಾ ನೀಡುವುದನ್ನು ಆರಂಭಿಸಿತ್ತು. ಈ 99 ರಾಷ್ಟ್ರಗಳ ಪ್ರವಾಸಿಗರು ಭಾರತಕ್ಕೆ ಆಗಮಿಸಿದ 72 ಗಂಟೆಯೊಳಗೆ (ಕೆಟಗರಿ-ಎ) ಕೋವಿಡ್‌ ನೆಗೆಟಿವ್‌ ವರದಿ ಮತ್ತು ಸಂಪೂರ್ಣ ಲಸಿಕೆ ಹಾಕಿಸಿಕೊಂಡಿರುವ ಬಗ್ಗೆ 'ಏರ್‌ ಸುವಿಧಾ' ಪೋರ್ಟಲ್‌ನಲ್ಲಿ ದಾಖಲೆಗಳನ್ನು ಅಪ್‌ಲೋಡ್‌ ಮಾಡಬೇಕು. ಕೋವಿಡ್‌ ಲಸಿಕೆ ಸರ್ಟಿಫಿಕೇಟ್‌ಗೆ ಸಂಬಂಧಿಸಿ ಪರಸ್ಪರ ಮಾನ್ಯತೆ ನೀಡುವ ಬಗ್ಗೆ ಒಪ್ಪಂದ ಏರ್ಪಟ್ಟಿರುವ ರಾಷ್ಟ್ರಗಳಿಂದ ಬರುವ ಪ್ರವಾಸಿಗರು 'ಕೆಟಗರಿ ಎ' ಅಡಿಯಲ್ಲಿ ಬರುತ್ತಾರೆ. ಭಾರತದ ಜತೆಗೆ ಒಪ್ಪಂದ ಇರದಿದ್ದರೂ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಮಾನ್ಯತೆಯ ಲಸಿಕೆ ಪಡೆದಿರುವವರೂ 'ಕೆಟಗರಿ ಎ' ಅಡಿಯಲ್ಲಿ ಬರುತ್ತಾರೆ. ರಿಸ್ಕ್‌ ಕೆಟಗರಿಯ ರಾಷ್ಟ್ರಗಳು ಪಟ್ಟಿಯಲ್ಲಿ ಕೆಲ ರಾಷ್ಟ್ರಗಳನ್ನು ಕೋವಿಡ್‌ ದೃಷ್ಟಿಯಿಂದ 'ರಿಸ್ಕ್‌' ಕೆಟಗರಿ ಎಂದು ಪರಿಗಣಿಸಲಾಗಿದ್ದು, ಬ್ರಿಟನ್‌, ದಕ್ಷಿಣ ಆಫ್ರಿಕಾ, ಬ್ರೆಜಿಲ್‌, ಬಾಂಗ್ಲಾದೇಶ, ಮಾರಿಷಸ್‌, ನ್ಯೂಜಿಲೆಂಡ್‌, ಬೋಟ್ಸ್‌ವಾನಾ, ಜಿಂಬಾಬ್ವೆ ಮತ್ತು ಸಿಂಗಾಪುರ ಈ ಪಟ್ಟಿಯಲ್ಲಿ ಇದೆ. 'ರಿಸ್ಕ್‌' ಕೆಟಗರಿ ಅಡಿಯಲ್ಲಿಬ ರುವವರು ವಿಮಾನ ನಿಲ್ದಾಣದಿಂದ ನಿರ್ಗಮಿಸಿದ ನಂತರ 14 ದಿವಸ ತಮ್ಮ ಆರೋಗ್ಯವನ್ನು ಸ್ವಯಂ ನಿಗಾ ವಹಿಸಬೇಕು ಎಂದು ಸರಕಾರ ತಿಳಿಸಿದೆ. ಪಟ್ಟಿಯಲ್ಲಿ ಇರದ ರಾಷ್ಟ್ರಗಳು: ಕೆಲವು ರಾಷ್ಟ್ರಗಳು ಈ ಪಟ್ಟಿಯಲ್ಲೇ ಇಲ್ಲ. ಅಂದರೆ ಈ ರಾಷ್ಟ್ರಗಳಿಂದ ಆಗಮಿಸುವವರಿಗೆ ಈ ವಿನಾಯಿತಿಗಳು ಸಿಗುವುದಿಲ್ಲ. ಅವುಗಳೆಂದರೆ, ಚೀನಾ, ಜಪಾನ್‌, ದಕ್ಷಿಣ ಕೊರಿಯಾ, ಇಂಡೊನೇಷ್ಯಾ ಹಾಗೂ ಇನ್ನಿತರ.