'ದ್ವಿತ್ವ' ಚಿತ್ರದ ಬಗ್ಗೆ ಇಂಟರೆಸ್ಟಿಂಗ್ ವಿಚಾರ ಹಂಚಿಕೊಂಡ ನಿರ್ದೇಶಕ ಪವನ್‌ ಕುಮಾರ್!

ಪುನೀತ್ ರಾಜ್‌ಕುಮಾರ್ ನಟನೆಯ 'ದ್ವಿತ್ವ' ಸಿನಿಮಾದ ಬಗ್ಗೆ ನಿರ್ದೇಶಕ ಪವನ್ ಮಾತನಾಡಿದ್ದಾರೆ. 'ಈ ಕಥೆ ಎಳೆಯು ಬಹಳ ವರ್ಷಗಳಿಂದ ನನ್ನಲ್ಲಿತ್ತು. ಈ ಕಥೆ ಬಗ್ಗೆ ವರ್ಕ್ ಮಾಡಬೇಕು ಎಂದು ಒಂದಿಷ್ಟು ವರ್ಷನ್‌ಗಳನ್ನು ಬರೆಯುತ್ತಲೇ ಬಂದೆ' ಎಂದಿದ್ದಾರೆ ಅವರು.

'ದ್ವಿತ್ವ' ಚಿತ್ರದ ಬಗ್ಗೆ ಇಂಟರೆಸ್ಟಿಂಗ್ ವಿಚಾರ ಹಂಚಿಕೊಂಡ ನಿರ್ದೇಶಕ ಪವನ್‌ ಕುಮಾರ್!
Linkup
'ಪವರ್ ಸ್ಟಾರ್' ಪುನೀತ್ ರಾಜ್‌ಕುಮಾರ್- 'ಲೂಸಿಯಾ' ಕಾಂಬಿನೇಷನ್‌ನಲ್ಲಿ '' ಸಿನಿಮಾ ಘೋಷಣೆ ಆಗಿದೆ. ಹೊಂಬಾಳೆ ಫಿಲ್ಸ್ಮ್‌ನ 9ನೇ ಸಿನಿಮಾವಾಗಿ ಇದು ಮೂಡಿಬರಲಿದೆ. ವಿಜಯ್ ಕಿರಗಂದೂರು ನಿರ್ಮಾಣದ 'ದ್ವಿತ್ವ' ಬಗ್ಗೆ ಪವನ್‌ ಕುಮಾರ್ ಮಾತನಾಡಿದ್ದಾರೆ. 'ಈ ಕಥೆ ಎಳೆಯು ಬಹಳ ವರ್ಷಗಳಿಂದ ನನ್ನಲ್ಲಿತ್ತು' ಎಂದು ಅವರು ಹೇಳಿಕೊಂಡಿದ್ದಾರೆ. 2019ರಲ್ಲಿ ಸ್ಕ್ರಿಪ್ಟ್ ಫೈನಲ್! 'ನಮ್ಮ ಸಿನಿಮಾಗೆ ದೊಡ್ಡದಾಗಿ ಸ್ವಾಗತ ನೀಡಿದ್ದಕ್ಕೆ ಎಲ್ಲರಿಗೂ ಧನ್ಯವಾದಗಳು. ಎಲ್ಲರೂ ಕೂಡ ದ್ವಿತ್ವ ಟೈಟಲ್‌ ಬಗ್ಗೆ ಗೂಗಲ್ ಮಾಡಿರುತ್ತೀರಿ. ಎರಡು ಬಗೆಯ, ಎಂಬರ್ಥ ಇದೆ. ಹೊಂಬಾಳೆ ಫಿಲ್ಸ್ಮ್‌ನ ವಿಜಯ್ ಕಿರಗಂದೂರು, ಪುನೀತ್‌ ರಾಜ್‌ಕುಮಾರ್ ಅವರಿಗೆ ಧನ್ಯವಾದಗಳು. ಈ ಸಿನಿಮಾದ ಬಗ್ಗೆ ಒಂದು ಇಂಟರೆಸ್ಟಿಂಗ್ ವಿಚಾರವನ್ನು ಹಂಚಿಕೊಳ್ಳಬೇಕು ಎಂದರೆ, ಇದರ ಕಥೆ ಎಳೆಯು ಬಹಳ ವರ್ಷಗಳಿಂದ ನನ್ನಲ್ಲಿತ್ತು. ಈ ಕಥೆ ಬಗ್ಗೆ ವರ್ಕ್ ಮಾಡಬೇಕು ಎಂದು ಒಂದಿಷ್ಟು ವರ್ಷನ್‌ಗಳನ್ನು ಬರೆಯುತ್ತಲೇ ಬಂದೆ. 2019ರಲ್ಲಿ ಈಗ ಸಿನಿಮಾ ಆಗುತ್ತಿರುವ ಸ್ಕ್ರಿಪ್ಟ್ ಫೈನಲ್ ಆಯ್ತು' ಎಂದು ಪವನ್ ತಿಳಿಸಿದ್ದಾರೆ. ಥೈಲ್ಯಾಂಡ್‌ ಕುಳಿತು ಸ್ಕ್ರಿಪ್ಟ್ ಮುಗಿಸಿದೆ'ನನ್ನ ನಟನೆಯ 'ಗಾಳಿಪಟ 2' ಶೂಟಿಂಗ್ ಶುರುವಾಗುವುದಕ್ಕೂ ಮುನ್ನ ನಾನು ಥೈಲ್ಯಾಂಡ್‌ಗೆ ಹೋಗಿದ್ದೆ. ಅಲ್ಲಿ ಆರು ವಾರಗಳು ಇದ್ದಾಗ, ಅಲ್ಲಿನ ಒಂದು ಕೆಫೆಯಲ್ಲಿ ಕುಳಿತುಕೊಂಡು, ಈ ಸ್ಕ್ರಿಪ್ಟ್‌ ಬರೆದು ಮುಗಿಸಿದೆ. ಅಲ್ಲಿಂದಲೇ ಅವರಿಗೆ ಇದನ್ನು ಶೇರ್ ಮಾಡಿದ್ದು. ಅದನ್ನು ಅವರು ಓದಿ, ಪ್ರತಿಕ್ರಿಯಿಸಿದರು. ನಂತರ ಹೊಂಬಾಳೆ ಅವರ ಜೊತೆಗೆ ಸೇರಿಕೊಂಡೆವು. ಇದೀಗ ಈ ಹಂತಕ್ಕೆ ಬಂದಿದ್ದೇವೆ' ಎಂದು ಪವನ್ ಹೇಳುತ್ತಾರೆ. ಬಹುದಿನಗಳಿಂದ ಕಾಪಾಡಿಕೊಂಡಿದ್ದ ದ್ವಿತ್ವ ಟೈಟಲ್ 'ಇದಕ್ಕೆ 'ದ್ವಿತ್ವ' ಅಂತ ಟೈಟಲ್ ಇಡಬೇಕು ಎಂದು ತುಂಬ ವರ್ಷಗಳಿಂದ, ಅದನ್ನು ಕಾಪಾಡಿಕೊಂಡು ಬಂದಿದ್ದೆ. ಅದನ್ನು ಸಾಧಿಸಲು ಸಾಧ್ಯವಾಯ್ತು. ಸದ್ಯ ರಿಲೀಸ್ ಆಗಿರುವ ಪೋಸ್ಟರ್ ಅನ್ನು ಆದರ್ಶ್ ಡಿಸೈನ್ ಮಾಡಿದ್ದಾರೆ. ಅವರು ನನ್ನ ಜೊತೆ ಲೂಸಿಯಾ ಟೈಮ್‌ನಿಂದಲೂ ಇದ್ದಾರೆ. ಲೂಸಿಯಾ, ಯು ಟರ್ನ್, ಒಂದು ಮೊಟ್ಟೆಯ ಕಥೆ, ನನ್ನ ತೆಲುಗು ವೆಬ್ ಸಿರೀಸ್‌ ಹೀಗೆ ನನ್ನೆಲ್ಲ ಕೆಲಸಗಳಿಗೆ ಅವರೇ ಡಿಸೈನ್‌ ಮಾಡಿದ್ದಾರೆ. ಈಗ ರಿಲೀಸ್ ಆಗಿರುವ ಪೋಸ್ಟರ್‌ನಲ್ಲಿ ನನ್ನ ಸ್ಕ್ರಿಪ್ಟ್‌ನ ಬಹುತೇಕ ಅಂಶಗಳು ಇವೆ. ಇದೊಂಥರ ಸೈಕಲಾಜಿಕಲ್ ಡ್ರಾಮಾ, ಥ್ರಿಲ್ಲರ್ ಆಗಿದೆ. ಪ್ರೀತಾ ಜಯರಾಮನ್ ಛಾಯಾಗ್ರಹಣ ಮಾಡಲಿದ್ದಾರೆ. ನನ್ನ ಜೊತೆ 'ಲೂಸಿಯಾ'ದಿಂದ ಕೆಲಸ ಮಾಡಿಕೊಂಡು ಬಂದಿರುವ ಪೂರ್ಣಚಂದ್ರ ತೇಜಸ್ವಿ ಈ ಸಿನಿಮಾಗೆ ಸಂಗೀತ ನೀಡುತ್ತಿದ್ದಾರೆ. ಸೆಪ್ಟೆಂಬರ್‌ನಿಂದ ಶೂಟಿಂಗ್ ಮಾಡಬೇಕು ಎಂದುಕೊಂಡಿದ್ದೇವೆ. 2022ರ ಹೊತ್ತಿಗೆ ತೆರೆಗೆ ತರಲಿದ್ದೇವೆ' ಎಂದಿದ್ದಾರೆ ಪವನ್.