ಪವನ್ ಕಲ್ಯಾಣ್‌ರನ್ನು 'ಲೋಫರ್', 'ಬ್ರೋಕರ್' ಎಂದು ನಿಂದಿಸಿದ ನಟ ಪೋಸಾನಿ ಮನೆ ಮುಂದೆ ಅಭಿಮಾನಿಗಳ ಆಕ್ರೋಶ

ನಟ ಪೋಸನಿ ಅವರು ಪವನ್ ಕಲ್ಯಾಣ್‌ರನ್ನು 'ಲೋಫರ್', 'ಬ್ರೋಕರ್' ಎಂದು ನಿಂದಿಸಿದ್ದಾರೆ. ಅಷ್ಟೇ ಅಲ್ಲದೆ ಈ ವಿವಾದದಲ್ಲಿ ನಾನು ಸತ್ತರೆ ಅದಕ್ಕೆ ಪವನ್ ಕಲ್ಯಾಣ್ ಹಾಗೂ ಅವನ ಅಭಿಮಾನಿಗಳು ಕಾರಣ ಎಂದು ಹೇಳಿದ್ದಾರೆ.

ಪವನ್ ಕಲ್ಯಾಣ್‌ರನ್ನು 'ಲೋಫರ್', 'ಬ್ರೋಕರ್' ಎಂದು ನಿಂದಿಸಿದ ನಟ ಪೋಸಾನಿ ಮನೆ ಮುಂದೆ ಅಭಿಮಾನಿಗಳ ಆಕ್ರೋಶ
Linkup
ನಟ ಅವರನ್ನು ಇನ್ನೋರ್ವ ನಟ ಅವರು ಲೋಫರ್ ಎಂದು ಕರೆದಿದ್ದಾರೆ. ಈ ಮಾತು ಕೇಳಿ ಪವನ್ ಅಭಿಮಾನಿಗಳು ಪೋಸನಿ ಮನೆ ಮುಂದೆ ದೌಡಾಯಿಸಿ ಆಕ್ರೋಶ ಹೊರಹಾಕುತ್ತಿದ್ದಾರೆ. ಪೋಸನಿ ಮನೆಗೆ ಕಲ್ಲು ಎಸೆದು, ದೈಹಿಕ ಹಲ್ಲೆ ಮಾಡುವ ಯತ್ನ ಮಾಡಲಾಗುತ್ತಿದೆ, ಪೊಲೀಸರು ಕೂಡ ಅಭಿಮಾನಿಗಳನ್ನು ನಿಭಾಯಿಸಲು ಕಷ್ಟಪಡುತ್ತಿದ್ದಾರೆ. ಪೋಸನಿ ಮೇಲೆ ನಿಂದನೆ, ಹಲ್ಲೆ ಸುದ್ದಿಗೋಷ್ಠಿಯನ್ನು ಕರೆದು ಪೋಸನಿ ಅವರು ಆಂಧ್ರ ಪ್ರದೇಶದ ಸರ್ಕಾರಕ್ಕೆ ಬೆಂಬಲ ನೀಡಿದ್ದರು, ಪವನ್ ಕಲ್ಯಾಣ್ ಮಾತನ್ನು ತಿರಸ್ಕರಿಸಿದ್ದರು. ಆ ನಂತರದಲ್ಲಿ ಮತ್ತೊಂದು ಸುದ್ದಿಗೋಷ್ಠಿ ಕರೆದು, "5000ಕ್ಕೂ ಅಧಿಕ ಮಂದಿ ಫೋನ್ ಮಾಡಿ ನನ್ನನ್ನು ನಿಂದಿಸಿದ್ದಾರೆ, ಕೆಲವರು ನನ್ನ ಮೇಲೆ ದೈಹಿಕ ಹಲ್ಲೆ ಮಾಡಲು ಪ್ರಯತ್ನಪಟ್ಟರು" ಎಂದು ಹೇಳಿಕೆ ನೀಡಿದ್ದರು. ಆ ನಂತರದಲ್ಲಿ ತೆಲಂಗಾಣ ಪೊಲೀಸರು ಪೋಸನಿ ಅವರ ಮೇಲೆ ಹಲ್ಲೆ ಮಾಡಿದವರಲ್ಲಿ ಕೆಲವರನ್ನು ಪೊಲೀಸ್ ವ್ಯಾನ್‌ನಲ್ಲಿ ಸೋಮಜಿಗುಡ ಪೊಲೀಸ್ ಸ್ಟೇಶನ್‌ಗೆ ಕರೆದುಕೊಂಡು ಹೋಗಿದ್ದಾರೆ. ಪೋಸನಿ ಮನೆ ಮುಂದೆ ಪವನ್ ಕಲ್ಯಾಣ್ ಅಭಿಮಾನಿಗಳ ಆಕ್ರೋಶ ಬುಧವಾರ ಬೆಳಗ್ಗಿನ ಜಾವ 2 ಗಂಟೆಗೆ ಕೆಲವರು ಪೋಸನಿ ಮನೆ ಮುಂದೆ ಬಂದು ಕಲ್ಲು ಎಸೆದಿದ್ದಾರೆ. ಅವರು ಯಾರು ಅಂತ ಪೋಸನಿ ಅವರಿಗೆ ಗುರುತಿಸಲು ಸಾಧ್ಯವಾಗಿಲ್ಲ. ಹೈದರಾಬಾದ್‌ನ ಎಲ್ಲರೆಡ್ಡಿಗುಡ್ಡದ ಮನೆಯ ಬಳಿ ಪೋಸನಿ ಅವರನ್ನು ಬಾಯಿಗೆ ಬಂದಹಾಗೆ ನಿಂದಿಸಿದ್ದಾರೆ. ಆ ಸಮಯದಲ್ಲಿ ಪೋಸನಿ ಕುಟುಂಬಸ್ಥರು ಮನೆಯಲ್ಲಿ ಇರಲಿಲ್ಲ. ಪೋಸನಿ ಪಕ್ಕದ ಮನೆಯವರು ಈ ಘಟನೆಯನ್ನು ನೋಡಿ ಹೇಳಿದ್ದು, ಬೈಕ್‌ನಲ್ಲಿ ಕಿಡಿಗೇಡಿಗಳು ಬಂದು ಕಲ್ಲು ಎಸೆದಿದ್ದಾರೆ ಎಂದು ಹೇಳಿದ್ದಾರೆ. ನಾನು ಸತ್ತರೆ ಅದಕ್ಕೆ ಪವನ್ ಕಲ್ಯಾಣ್ ಹಾಗು ಅವರ ಅಭಿಮಾನಿಗಳು ಕಾರಣ ಈ ಎಲ್ಲ ಘಟನೆ ನಂತರದಲ್ಲಿ ಪೋಸನಿ ಅವರು ಎಸ್‌ಆರ್ ನಗರ ಪೊಲೀಸ್ ಸ್ಟೇಶನ್‌ನಲ್ಲಿ ಸಿಸಿಟಿವಿ ಫೂಟೇಜ್ ಕೊಟ್ಟು, ದೂರು ದಾಖಲಿಸಿದ್ದಾರೆ. ಮತ್ತೆ ಇನ್ನೊಂದು ಸುದ್ದಿಗೋಷ್ಠಿ ಕರೆದ ಪೋಸನಿ ಅವರು ಪವನ್ ಕಲ್ಯಾಣ್‌ರನ್ನು 'ಲೋಫರ್', 'ಬ್ರೋಕರ್' ಅಂತೆಲ್ಲ ಕರೆದಿದ್ದಾರೆ, ಅಷ್ಟೇ ಅಲ್ಲದೆ ಅವರ ಅಭಿಮಾನಿಗಳಿಗೆ ಬಾಯಿಗೆ ಬಂದಹಾಗೆ ಬೈಯ್ದಿದ್ದಾರೆ. "ನನಗೆ ಸಾವಿನ ಭಯ ಇಲ್ಲ, ನಾನು ಒಂದು ವೇಳೆ ಈ ವಿವಾದದಲ್ಲಿ ಸತ್ತರೆ ಅದಕ್ಕೆ ಪವನ್ ಕಲ್ಯಾಣ್ ಹಾಗೂ ಅವರ ಅಭಿಮಾನಿಗಳು ಕಾರಣ" ಎಂದು ಹೇಳಿದ್ದಾರೆ. ಆಂಧ್ರ ಪ್ರದೇಶದ ಸರ್ಕಾರದ ವಿರುದ್ಧ ಪವನ್ ಕಲ್ಯಾಣ್ ಗರಂ ಸಾಯಿ ಧರಂ ತೇಜ ಅಭಿನಯದ 'ರಿಪಬ್ಲಿಕ್' ಸಿನಿಮಾದ ಪ್ರಿ-ರಿಲೀಸ್ ಇವೆಂಟ್‌ನಲ್ಲಿ ಭಾಗವಹಿಸಿದ್ದ ಪವನ್ ಕಲ್ಯಾಣ್ ಅವರು ಆಂಧ್ರ ಪ್ರದೇಶವು ರೈಲ್ವೆ ಟಿಕೆಟ್ ಮಾರಿದಂತೆ ಸಿನಿಮಾ ಟಿಕೆಟ್‌ಗಳನ್ನು ಕೂಡ ಹೊಸ ಪೋರ್ಟಲ್ ಸೃಷ್ಟಿ ಮಾಡಿ ಆನ್‌ಲೈನ್‌ನಲ್ಲಿ ಮಾರಾಟ ಮಾಡಲು ರೆಡಿಯಾಗಿರುವುದರ ಬಗ್ಗೆ ಬೇಸರ ಹೊರಹಾಕಿದ್ದರು. ಕೊರೊನಾದಿಂದ ಚಿತ್ರರಂಗ ಸಂಕಷ್ಟದಲ್ಲಿದ್ದು, ಸರ್ಕಾರ ಸಹಾಯಕ್ಕೆ ಧಾವಿಸುತ್ತಿಲ್ಲ ಎಂದು ಅವರು ಆಕ್ರೋಶ ಹೊರಹಾಕಿದ್ದರು. ಆಂಧ್ರ ಸರ್ಕಾರದ ಬಗ್ಗೆ ಪವನ್ ಮಾತನಾಡಿರೋದು ದೊಡ್ಡ ವಿವಾದ ಹುಟ್ಟುಹಾಕಿದೆ.