ತೆಲಂಗಾಣ ಮತ್ತು ಆಂಧ್ರಪ್ರದೇಶ ನಡುವೆ ಕೃಷ್ಣಾ ನೀರಿಗಾಗಿ ಮತ್ತೆ ಜಲಸಮರ: ಅಣೆಕಟ್ಟುಗಳ ಸಮೀಪ ಭಾರಿ ಭದ್ರತೆ

ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ನಡುವೆ ಕೃಷ್ಣಾ ನದಿ ನೀರಾವರಿ ಹಾಗೂ ಜಲ ವಿದ್ಯುತ್ ಯೋಜನೆಗಳ ಮತ್ತೊಂದು ಜಲಸಮರ ಆರಂಭವಾಗಿದೆ. ಎರಡೂ ರಾಜ್ಯಗಳು ತಮಗೆ ಸೇರಿದ ಅಣೆಕಟ್ಟುಗಳ ಭಾಗಗಳಲ್ಲಿ ಭದ್ರತೆ ಕಲ್ಪಿಸಿವೆ.

ತೆಲಂಗಾಣ ಮತ್ತು ಆಂಧ್ರಪ್ರದೇಶ ನಡುವೆ ಕೃಷ್ಣಾ ನೀರಿಗಾಗಿ ಮತ್ತೆ ಜಲಸಮರ: ಅಣೆಕಟ್ಟುಗಳ ಸಮೀಪ ಭಾರಿ ಭದ್ರತೆ
Linkup
ಹೈದರಾಬಾದ್: ತೆಲುಗು ರಾಜ್ಯಗಳಾದ ಮತ್ತು ಆಂಧ್ರಪ್ರದೇಶಗಳ ನಡುವೆ ಭಾರಿ ಜಲಸಮರ ಶುರುವಾಗಿದೆ. ಹಾಗೂ ಯೋಜನೆಗಳ ನಿರ್ಮಾಣ ಉಭಯ ರಾಜ್ಯಗಳ ಮಧ್ಯೆ ಉದ್ವಿಗ್ನ ವಾತಾವರಣ ನಿರ್ಮಿಸಿದ್ದು, ಕೃಷ್ಣಾ ನದಿಯ ತಮ್ಮ ತಮ್ಮ ಗಡಿ ಒಳಗಿರುವ ಜಲವಿದ್ಯುತ್ ಘಟಕಗಳಲ್ಲಿ ನೂರಾರು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿವೆ. ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ತಡೆಯಲು ಮುನ್ನೆಚ್ಚರಿಕೆ ಕ್ರಮವಾಗಿ ಪುಲಿಚಿಂತಲಾ, ಶ್ರೀಶೈಲಂ, ಜುರಾಲಾ ಮತ್ತು ನಾಗಾರ್ಜುನಸಾಗರ ಯೋಜನೆಗಳಲ್ಲಿ ವಿಶೇಷ ರಕ್ಷಣಾ ಪಡೆ ಸಿಬ್ಬಂದಿಯನ್ನು ಬುಧವಾರ ಸಂಜೆಯಿಂದಲೇ ತೆಲಂಗಾಣ ಸರಕಾರ ನಿಯೋಜಿಸಿದೆ. ಅಣೆಕಟ್ಟು ಪ್ರದೇಶಗಳಲ್ಲಿ ವಾಹನಗಳ ಸಂಚಾರ ಮತ್ತು ಪ್ರವಾಸಿಗರ ಓಡಾಟವನ್ನು ನಿರ್ಬಂಧಿಸಲಾಗಿದೆ. ಕೂಡ ಪುಲಿಚಿಂತಲಾ ಅಣೆಕಟ್ಟಿನ ತನ್ನ ಭಾಗದಲ್ಲಿ ಪೊಲೀಸ್ ಪಡೆಯನ್ನು ನಿಯೋಜನೆ ಮಾಡಿದೆ. ಯೋಜನೆಗಳ ಪ್ರಮುಖ ಸ್ಥಾವರಗಳಲ್ಲಿ ಭದ್ರತೆ ಒದಗಿಸುವುದಕ್ಕೆ ಸೀಮಿತವಾಗಿರುವುದಾಗಿ ಆಂಧ್ರಪ್ರದೇಶ ಪೊಲೀಸರು ತಿಳಿಸಿದ್ದಾರೆ. ಆದರೆ ಎರಡೂ ರಾಜ್ಯಗಳು ಭಾರಿ ಸಂಖ್ಯೆಯಲ್ಲಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿರುವುದು ಈ ಭಾಗಗಳಲ್ಲಿ ಉದ್ವಿಗ್ನತೆಯನ್ನು ಹೆಚ್ಚಿಸಿದೆ. ಎಲ್ಲ ಜಲವಿದ್ಯುತ್ ಸ್ಥಾವರಗಳಲ್ಲಿಯೂ ಪೂರ್ಣ ಪ್ರಮಾಣದಲ್ಲಿ ವಿದ್ಯುತ್ ಉತ್ಪಾದನೆ ಮಾಡುವಂತೆ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಅಧಿಕಾರಿಗಳಿಗೆ ಸೂಚಿಸಿದ್ದರು. ಶ್ರೀಶೈಲಂ, ನಾಗಾರ್ಜುನಸಾಗರ ಮತ್ತು ಪುಲಿಚಿಂತಲಾಗಳಲ್ಲಿ ಜಲ ವಿದ್ಯುತ್ ಉತ್ಪಾದನೆಗೆ ಆಂಧ್ರಪ್ರದೇಶ ಆಕ್ಷೇಪ ವ್ಯಕ್ತಪಡಿಸಿದೆ. ಆಂಧ್ರಪ್ರದೇಶ ನಡೆಸುತ್ತಿರುವ ರಾಯಲಸೀಮಾ ಏತ ನೀರಾವರಿ ಕಾಮಗಾರಿ ಅಕ್ರಮವಾಗಿದ್ದು, ಅದಕ್ಕೆ ಎನ್‌ಜಿಟಿಯಿಂದ ಅನುಮತಿ ದೊರಕಿಲ್ಲ ಎಂದು ತೆಲಂಗಾಣ ಆರೋಪಿಸಿದೆ. ಪುಲಿಚಿಂತಲಾ ಮತ್ತು ನಾಗಾರ್ಜುನ ಸಾಗರದಲ್ಲಿನ ಜಲ ವಿದ್ಯುತ್ ಉತ್ಪಾದನೆಯನ್ನು ಸ್ಥಗಿತಗೊಳಿಸುವುದಕ್ಕಾಗಿ ತೆಲಂಗಾಣದ ಜೆಂಕೊ (ತೆಲಂಗಾಣ ವಿದ್ಯುತ್ ಉತ್ಪಾದನೆ ನಿಗಮ) ಅಧಿಕಾರಿಗಳಿಗೆ ಪತ್ರ ನೀಡಲು ಬಯಸಿದ್ದ ಗುಂಟೂರಿನ ಕಂದಾಯ ಮತ್ತು ನೀರಾವರಿ ಅಧಿಕಾರಿಗಳು ಸೇರಿದಂತೆ ಆಂಧ್ರದ ಕೆಲವು ಅಧಿಕಾರಿಗಳಿಗೆ ಆಂಧ್ರಪ್ರದೇಶದ ಗಡಿ ಭಾಗ ಮಚೆರ್ಲಾದಿಂದ ಒಳಗೆ ಪ್ರವೇಶ ನೀಡಲು ತೆಲಂಗಾಣ ಪೊಲೀಸರು ನಿರಾಕರಿಸಿದ್ದಾರೆ. ಭದ್ರತೆ ನಡುವೆಯೂ ಮನವಿ ಸಲ್ಲಿಕೆಬಳಿಕ, ಭಾರಿ ಬಿಗಿ ಭದ್ರತೆ ನಡುವೆ ಆಂಧ್ರದ ಪುಲಿಚಿಂತಲಾ ವ್ಯವಸ್ಥಾಪಕ ಎಂಜಿನಿಯರ್ ಜೆ ರಮೇಶ್ ಬಾಬು ಅವರು ರಾಜ್ಯದ ಇನ್ನೊಂದು ಬದಿಯಲ್ಲಿರುವ ಜಲ-ವಿದ್ಯುತ್ ಕೇಂದ್ರವನ್ನು ತಲುಪಿ ತೆಲಂಗಾಣದ ಜೆಂಕೊ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ್ದಾರೆ. ಗಡಿಯಲ್ಲಿ ಆಂಧ್ರ ಮತ್ತು ತೆಲಂಗಾಣ ಅಧಿಕಾರಿಗಳ ನಡುವೆ ನಡೆದ ಸಂಧಾನ ಮಾತುಕತೆಯಲ್ಲಿ ನಾಲ್ಗೊಂಡ ಡಿಐಜಿ ಎವಿ ರಂಗನಾಥ್ ಮತ್ತು ಗುಂಟೂರು ಗ್ರಾಮೀಣ ಪೊಲೀಸ್ ವರಿಷ್ಠಾಧಿಕಾರಿ ವಿಶಾಲ್ ಗುನ್ನಿ ಉಪಸ್ಥಿತರಿದ್ದರು. ನೀರು ವಿಚಾರವಾಗಿ ತೆಲಂಗಾಣ ಮತ್ತು ಆಂಧ್ರಪ್ರದೇಶಗಳ ನೀರಾವರಿ ಅಧಿಕಾರಿಗಳ ನಡುವಿನ ಸಂಘರ್ಷ ಇದೇ ಮೊದಲಲ್ಲ. 2015, 2017ರಲ್ಲಿ ಕೂಡ ಎರಡೂ ರಾಜ್ಯಗಳು ಅಣೆಕಟ್ಟುಗಳ ಸಮೀಪ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಿದ್ದವು.