ಸದ್ದಿಲ್ಲದೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಖ್ಯಾತ ನಟಿ ಯಾಮಿ ಗೌತಮ್; ವರನಾರು?

ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 'ಉಲ್ಲಾಸ ಉತ್ಸಾಹ' ಸಿನಿಮಾ ನಾಯಕಿ ಯಾಮಿ ಗೌತಮ್ ಅವರು ಆದಿತ್ಯ ಎಂಬುವವರ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಕೊರೊನಾ ವೈರಸ್ ಇರುವುದರಿಂದ ಖಾಸಗಿಯಾಗಿ ಮದುವೆಯಾಗಿದ್ದಾರೆ.

ಸದ್ದಿಲ್ಲದೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಖ್ಯಾತ ನಟಿ ಯಾಮಿ ಗೌತಮ್; ವರನಾರು?
Linkup
ಅಭಿನಯದ 'ಉಲ್ಲಾಸ ಉತ್ಸಾಹ' ಸಿನಿಮಾ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ್ದ ನಟಿ ಅವರು ಆದಿತ್ಯ ಎಂಬುವವರ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಯಾಮಿ ಗೌತಮ್ ಅವರು ತೆಲುಗು, ತಮಿಳು, ಹಿಂದಿ, ಪಂಜಾಬಿ, ಮಲಯಾಳಂ ಭಾಷೆಯ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ. ಯಾಮಿ ಗೌತಮ್ ಹೇಳಿದ್ದೇನು? ಸೋಶಿಯಲ್ ಮೀಡಿಯಾದಲ್ಲಿ ಮದುವೆಯ ಫೋಟೋ ಹಂಚಿಕೊಂಡಿರುವ ಯಾಮಿ ಗೌತಮ್ "ನಿನ್ನ ಬೆಳಕಿನಲ್ಲಿ ನಾನು ಪ್ರೀತಿಸುವುದನ್ನು ಕಲಿತೆ. ಕುಟುಂಬದ ಆಶೀರ್ವಾದದೊಂದಿಗೆ ನಾವು ಇಂದು ಕೆಲವೇ ಕೆಲವು ಮಂದಿ ಸಾಕ್ಷಿಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದೇವೆ. ಆತ್ಮೀಯರ ಸಮ್ಮುಖದಲ್ಲಿ ಖುಷಿಯೊಂದಿಗೆ ಮದುವೆಯಾಗಿದ್ದೇವೆ. ನಿಮ್ಮೆಲ್ಲರ ಪ್ರೀತಿ-ಆಶೀರ್ವಾದ ನಮಗೆ ಬೇಕು" ಎಂದು ಹೇಳಿಕೊಂಡಿದ್ದಾರೆ. ರಾಷ್ಟ್ರ ಪ್ರಶಸ್ತಿ ನಿರ್ದೇಶಕ ಯಾಮಿ ಗೌತಮ್ ಅವರು ನಿರ್ದೇಶಕ ಆದಿತ್ಯ ಧರ್ ಅವರನ್ನು ವರಿಸಿದ್ದಾರೆ. 2019ರಲ್ಲಿ 'ಉರಿ: ದಿ ಸರ್ಜಿಕಲ್ ಸ್ಟ್ರೈಕ್' ಸಿನಿಮಾದಲ್ಲಿ ಇವರಿಬ್ಬರು ಒಟ್ಟಾಗಿ ಕೆಲಸ ಮಾಡಿದ್ದರು. ಈ ಸಿನಿಮಾಕ್ಕಾಗಿ ಆದಿತ್ಯ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡಿದ್ದರು. ಯಾಮಿ ಹಾಗೂ ಆದಿತ್ಯ ಅವರದ್ದು ಪ್ರೇಮ ವಿವಾಹ ಎನ್ನಲಾಗಿದೆ. ಯಾಮಿ ಗೌತಮ್, ಆದಿತ್ಯ ಅವರ ಮುಂಬರುವ ಸಿನಿಮಾಗಳು ಯಾವುವು? 2008ರಿಂದ ಆದಿತ್ಯ ಕೆಲವೇ ಕೆಲವು ಸಿನಿಮಾಗಳಲ್ಲಿ ಸಾಹಿತ್ಯ, ಡೈಲಾಗ್ಸ್ ಬರೆದಿದ್ದರು. ಅವರ ಮೊದಲ ನಿರ್ದೇಶನದ ಸಿನಿಮಾ 'ಉರಿ: ದಿ ಸರ್ಜಿಕಲ್ ಸ್ಟ್ರೈಕ್' ಆಗಿತ್ತು. ಈಗ 'ದಿ ಇಮ್ಮೊರ್ಟಲ್ ಅಶ್ವತ್ಥಾಮ' ಸಿನಿಮಾವನ್ನು ಆದಿತ್ಯ ನಿರ್ದೇಶಿಸಲಿದ್ದು, ವಿಕ್ಕಿ ಕೌಶಲ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. 2020ರಲ್ಲಿ ಯಾಮಿ ಗೌತಮ್ ಅವರು 'ಗಿನ್ನಿ ವೆಡ್ಸ್ ಸನ್ನಿ' ಸಿನಿಮಾದಲ್ಲಿ ನಟಿಸಿದ್ದರು. ಈಗ ಯಾಮಿ ಕೈಯ್ಯಲ್ಲಿ 'ಭೂತ್ ಪೊಲೀಸ್', 'ದಸ್ವಿ', 'ಎ ಥರ್ಸಡೇ' ಚಿತ್ರಗಳಿವೆ.