sivakarthikeyan: 18 ವರ್ಷಗಳ ಬಳಿಕ ನಟ ಶಿವಕಾರ್ತಿಕೇಯನ್ ಕೈ ಬೆರಳು ಹಿಡಿದು ಮಗನಾಗಿ ಬಂದ ಅವರ ತಂದೆ!

ನಟ ಶಿವಕಾರ್ತಿಕೇಯನ್ ಅವರ ಅಪ್ಪ 18 ವರ್ಷಗಳ ಬಳಿಕ ಮಗನಾಗಿ ಹುಟ್ಟಿ ಬಂದಿದ್ದಾರಂತೆ. ಈ ಕುರಿತು ಕಾರ್ತಿಕೇಯನ್ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಆ ಬಗ್ಗೆ ಮಾಹಿತಿ ಇಲ್ಲಿದೆ.

sivakarthikeyan: 18 ವರ್ಷಗಳ ಬಳಿಕ ನಟ ಶಿವಕಾರ್ತಿಕೇಯನ್ ಕೈ ಬೆರಳು ಹಿಡಿದು ಮಗನಾಗಿ ಬಂದ ಅವರ ತಂದೆ!
Linkup
ತಮಿಳು ನಟ ಶಿವಕಾರ್ತಿಕೇಯನ್ ಮನೆಯಲ್ಲಿ ಖುಷಿ, ಸಂಭ್ರಮ ತುಂಬಿದೆ. ಆರತಿ ಹಾಗೂ ಶಿವಕಾರ್ತಿಕೇಯನ್ ದಂಪತಿಗೆ ಗಂಡು ಮಗು ಜನನ ಆಗಿದೆ. ಈ ಕುರಿತು ಕಾರ್ತಿಕೇಯನ್ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಜುಲೈ 12ರಂದು ಆರತಿ ಎರಡನೇ ಮಗುವಿಗೆ ಜನ್ಮ ನೀಡಿದ್ದಾರೆ. ಈಗಾಗಲೇ ಈ ದಂಪತಿಗೆ ಆರಾಧನಾ ಎಂಬ ಮಗಳಿದ್ದಾಳೆ. 'ಕನಾ' ಸಿನಿಮಾದಲ್ಲಿ ವಾಯಾಡಿ ಪೆಥ ಪುಲ್ಲ ಎಂಬ ಹಾಡನ್ನು ಅಪ್ಪನ ಜೊತೆಗೆ ಆರಾಧನಾ ಹಾಡಿದ್ದಳು. ಆ ಹಾಡು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸೌಂಡ್ ಮಾಡಿತ್ತು, ಭಾರೀ ಹಿಟ್ ಆಗಿತ್ತು. "18 ವರ್ಷಗಳ ನಂತರದಲ್ಲಿ ನನ್ನ ಮಗನಾಗಿ ಅಪ್ಪ ಹುಟ್ಟಿದ್ದಾರೆ. ಮಗನಾಗಿ ಅಪ್ಪ ನನ್ನ ಕೈಬೆರಳುಗಳನ್ನು ಹಿಡಿದುಕೊಂಡಿದ್ದಾರೆ. ಇಷ್ಟು ವರ್ಷಗಳ ನನ್ನ ದುಃಖವನ್ನು ಪತ್ನಿ ಆರತಿ ನೀಗಿಸಿದ್ದಾಳೆ. ಖುಷಿಯಿಂದ ನಾನು ಅವಳಿಗೆ ಧನ್ಯವಾದ ತಿಳಿಸುವೆ" ಎಂದು ಶಿವಕಾರ್ತಿಕೇಯನ್ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. 'ನಮ್ಮ ವೀಟು ಪಿಲ್ಲೈ' ಸಿನಿಮಾದಲ್ಲಿ ಶಿವಕಾರ್ತಿಕೇಯನ್ ಕೊನೆಯದಾಗಿ ಕಾಣಿಸಿಕೊಂಡಿದ್ದರು. 'ಡಾಕ್ಟರ್' ಸಿನಿಮಾದ ರಿಲೀಸ್‌ಗಾಗಿ ಅವರು ಈಗ ಕಾಯುತ್ತಿದ್ದಾರೆ. ಓಟಿಟಿಯಲ್ಲಿ ಈ ಸಿನಿಮಾ ನೇರವಾಗಿ ರಿಲೀಸ್ ಆಗಲಿದೆ ಎಂದು ಕೂಡ ಮಾತಿದೆ. ಆದರೆ ಸಿನಿಮಾ ತಂಡ ಇನ್ನು ಅಧಿಕೃತ ಮಾಹಿತಿ ನೀಡಿಲ್ಲ. ಕಾರ್ತಿಕೇಯನ್ ನಟನೆಯ 'ಅಯಲಾನ್' ಸಿನಿಮಾ ಕೂಡ ರಿಲೀಸ್ ಆಗಬೇಕಿದೆ, ರವಿ ಕುಮಾರ್ ಈ ಚಿತ್ರದ ನಿರ್ದೇಶನ ಮಾಡಿದ್ದಾರೆ. ಆರಂಭದಲ್ಲಿ ಸ್ಟ್ಯಾಂಡಪ್ ಕಾಮಿಡಿಯನ್ ಆಗಿದ್ದ ಶಿವಕಾರ್ತಿಕೇಯನ್ ಸಿನಿಮಾದಲ್ಲಿ ನಟಿಸಿ, ಹಾಡಿ, ನಿರ್ಮಾಣ ಕೂಡ ಮಾಡುತ್ತಿದ್ದಾರೆ. ಇನ್ನು ಬರಹಗಾರರಾಗಿ ಕೂಡ ಗುರುತಿಸಿಕೊಂಡಿದ್ದಾರೆ. 2010ರಲ್ಲಿ ಕಾರ್ತಿಕೇಯನ್ ಆರತಿಯನ್ನು ಮದುವೆಯಾದರು.