ಜಾತಿ ಧರ್ಮ ಮೀರಿದ ಮಾತೃಹೃದಯಿ ಸಂಘಟನೆ, ನಾನು ಕಂಡ ಆರ್‌ಎಸ್‌ಎಸ್‌: ನಟ ಜಗ್ಗೇಶ್

ಆರ್‌ಎಸ್‌ಎಸ್ ಕುರಿತು ರಾಜ್ಯದಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ಇದರ ಜೊತೆಗೆ ನವರಸನಾಯಕ ಜಗ್ಗೇಶ್ ಅವರು ಆರ್‌ಎಸ್‌ಎಸ್ ಪರವಾಗಿ ಸರಣಿ ಟ್ವೀಟ್ ಮಾಡಿ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಜಗ್ಗೇಶ್ ಏನಂದ್ರು?

ಜಾತಿ ಧರ್ಮ ಮೀರಿದ ಮಾತೃಹೃದಯಿ ಸಂಘಟನೆ, ನಾನು ಕಂಡ ಆರ್‌ಎಸ್‌ಎಸ್‌: ನಟ ಜಗ್ಗೇಶ್
Linkup
ಆರ್‌ಎಸ್‌ಎಸ್ ಕುರಿತಂತೆ ರಾಜ್ಯದಲ್ಲಿ ಚರ್ಚೆ ಆರಂಭವಾಗಿದೆ. ಆರ್‌ಎಸ್‌ಎಸ್ ಪರ ಬ್ಯಾಟಿಂಗ್ ಮಾಡಿದರೆ, ಉಳಿದ ಪಕ್ಷಗಳು ಆರ್‌ಎಸ್‌ಎಸ್‌ನ್ನು ದೂಷಿಸುತ್ತಿವೆ. ಹೀಗಾಗಿ ನವರಸನಾಯ ಜಗ್ಗೇಶ್ ಅವರು ಆರ್‌ಎಸ್‌ಎಸ್ ಕುರಿತಂತೆ ಸಾಲು ಸಾಲು ಟ್ವೀಟ್ ಮಾಡಿದ್ದಾರೆ. ಆ ಮೂಲಕ ಅವರ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಆರ್‌ಎಸ್‌ಎಸ್ ಬಗ್ಗೆ ಜಗ್ಗೇಶ್ ಹೇಳಿದ್ದೇನು? ನಾನು ಕಂಡ ಜಾತಿ ಧರ್ಮ ಮೀರಿದ ಮಾತೃಹೃದಯಿ ಸಂಘಟನೆ, ಕೊರೊನಾ ಸಂದರ್ಭವಾಗಲಿ, ನೆರೆಬಂದ ಸಂದರ್ಭವಾಗಲಿ ರಾಷ್ಟ್ರಕ್ಕೆ ಸಂಕಷ್ಟ ಬಂದಾಗ ಆಗಲಿ, ವಿದ್ಯೆ ದಾನಕ್ಕಾಗಲಿ, ಅನ್ನದ ಮಾರ್ಗಕ್ಕಾಗಲಿ ಶಿಸ್ತಿನ ಸೈನ್ಯ ಇಂಥ ಸ್ವಾರ್ಥ ಜಗದಲ್ಲಿ ನಿಸ್ವಾರ್ಥಸೇವೆ ಮಾಡುವ ಮಾತೃಹೃದಯಿ ಸಂಸ್ಥೆ ಎಂದರೆ ಅದು ಒಂದೇ ಆ ಸಂಸ್ಥೆಯ ಸಂಪರ್ಕ ದೊರಕಿದರೆ ಅಂಥವರು ತಮಗರಿಯದೆ ಸಾತ್ವಿಕನಾಗಿ ಸ್ವಾರ್ಥಬಿಟ್ಟು ಸಮಾಜಕ್ಕೆ ಹೆಗಲುಕೊಡುವ ಕರ್ಮಯೋಗಿ ಆಗುತ್ತಾನೆ. ದೂರನಿಂತು ಬೆಟ್ಟ ನೋಡುವರಿಗು ಆ ಬೆಟ್ಟ ಏರಿದವರಿಗು ವಿವರಣೆಗೆ ವ್ಯತ್ಯಾಸವುಂಟು! ನೋಡುಗರಿಗಿಂತ ಅದರ ಸಾಂಗತ್ಯ ಇರುವವರ ಸಂಖ್ಯೆ ಹೆಚ್ಚು ಕಾರಣ ಅದರ ಮಾತೃರೂಪ ಹಾಗು ಸರ್ವಸಂಗ ಪರಿತ್ಯಾಗಿಗಳು ಕಟ್ಟಿದ ನಿಸ್ವಾರ್ಥ ಸಂಘವಿದು.. ಆ ಸಂಘದಲ್ಲಿ ಅದರ ಸಿದ್ಧಾಂತ ಅಪ್ಪಿ ಜೀವಿಸುವವರು ವಿಧ್ಯಾವಂತರು ರಾಷ್ಟ್ರಪ್ರೇಮಿಗಳು, ಆತ್ಮಸಾಕ್ಷಾತ್ಕಾರ ಆದ ಶ್ವೇತವರ್ಣ ಸನ್ಯಾಸಿಗಳು.. ಅವರಿಗೆ ದೇಶವೆ ಮನೆ ದೇಶವಾಸಿಗಳೆ ಬಂಧುಗಳು. ಅವರ ನಿಸ್ವಾರ್ಥ ಸಮಾಜಸೇವೆಯೇ ದೇವರ ಪೂಜೆ..ಆ ಸಂಘದ ಬಗ್ಗೆ ಮಾತಾಡುವ ಮುನ್ನ ಅದರ ನಿಸ್ವಾರ್ಥಗುಣ ಅರಿಯಿರಿ ರಾಷ್ಟ್ರೀಯ ಶಿಕ್ಷಣ ನೀತಿ ನರೇಂದ್ರ ಮೋದಿ ಸರ್ಕಾರ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತಂದಿದ್ದು, ರಾಜ್ಯ ಬಹುಗೇಗ ಅದನ್ನು ಕಾರ್ನಟಕದಲ್ಲಿ ಅಳವಡಿಸಿಕೊಳ್ಳಲು ತಯಾರಿ ನಡೆಸುತ್ತಿದೆ. ಈ ಕುರಿತು ಸಿಎಂ ಬಸವರಾಜ್ ಬೊಮ್ಮಾಯಿ ಮಾತನಾಡಿದ್ದು, "ರಾಷ್ಟ್ರೀಯತೆಯನ್ನು ಪ್ರತಿಪಾದಿಸುವ ರಾಷ್ಟ್ರ ನಿರ್ಮಾಣಕ್ಕೆ ಆರ್‌ಎಸ್‌ಎಸ್‌ ಬದ್ಧವಾಗಿದೆ. ನೂತನ ಶಿಕ್ಷಣ ನೀತಿಯು ಭವಿಷ್ಯದಲ್ಲಿ ಉತ್ತಮ ರಾಷ್ಟ್ರ ನಿರ್ಮಾಣಕ್ಕೆ ಬುನಾದಿಯಾಗಲಿದೆ. ಯುವಕರ ಭವಿಷ್ಯಕ್ಕೂ ಒಳ್ಳೆಯದಿದೆ" ಎಂದು ಹೇಳಿದ್ದಾರೆ. ಆರ್‌ಎಸ್‌ಎಸ್ ದೂಷಿಸಿದ ವಿಪಕ್ಷಗಳು ಈಗ ವಿಪಕ್ಷಗಳು ಆರ್‌ಎಸ್‌ಸ್‌ನ್ನು ದೂಷಿಸುತ್ತಿವೆ. ಆರ್‌ಎಸ್‌ಎಸ್‌ನವರದ್ದು ತಾಲಿಬಾನ್ ಸಂಸ್ಕೃತಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಟೀಕೆ ಮಾಡಿದ್ದಾರೆ. ಅದಕ್ಕೆ ಅವರು ಇನ್ನೊಂದಿಷ್ಟು ಸ್ಪಷ್ಟನೆ ನೀಡಿದ್ದು, "ಆರ್‌ಎಸ್‌ಎಸ್‌ನವರು ರಾಕ್ಷಸಿ ಪ್ರವೃತ್ತಿ, ಮನುಷ್ಯತ್ವ ಇಲ್ಲದಿರುವವರು" ಎಂದಿದ್ದಾರೆ. ಇದಕ್ಕೆ ಉತ್ತರ ನೀಡಿರುವ ಗೃಹ ಸಚಿವ ಆರಗ ಜ್ಞಾನೇಂದ್ರ, "ಆರ್‌ಎಸ್‌ಎಸ್ ದೇಶಕ್ಕಾಗಿ ಏನು ಕೆಲಸ ಮಾಡುತ್ತಿದೆ? ಹೇಗೆ ಕೆಲಸ ಮಾಡುತ್ತಿದೆ ಎಂದು ಎಲ್ಲರಿಗೂ ಗೊತ್ತಿದೆ" ಎಂದಿದ್ದಾರೆ. "ನರೇಂದ್ರ ಮೋದಿ, ಶಾ, ಆರ್‌ಎಸ್‌ಎಸ್‌ ಕುತಂತ್ರದಿಂದ ನಾನು ಸೋತಿದ್ದೇನೆ"ಎಂದು ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿದ್ದಾರೆ. ನರೇಂದ್ರ ಮೋದಿ, ಅಮಿತ್ ಶಾ, ಆರ್‌ಎಸ್‌ಎಸ್ ಅವರ ಕುತಂತ್ರದಿಂದ ನಾನು ಸೋತಿದ್ದೇನೆ. ವಿನಃ ಕಲಬುರಗಿ ಜನ ನನಗೆ ಸೋಲಿಸಿಲ್ಲ ಎಂದು ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿದ್ದಾರೆ. ಮಾಜಿ ಮುಖ್ಯಮಂತ್ರಿ ಅವರು ಆರ್‌ಎಸ್‌ಎಸ್ ಮೇಲೆ ಒಂದಾದ ಮೇಲೆ ಒಂದತಂತೆ ಆರೋಪ ಮಾಡುತ್ತಿದ್ದಾರೆ.