ಚಲನಚಿತ್ರ ನಿರ್ದೇಶಕರ ಸಂಘದ ವಿವಾದ; ಟೇಶಿ ವೆಂಕಟೇಶ್ ವಿರುದ್ಧ ಗುಡುಗಿದ ಸಿನಿಮಾ ನಿರ್ದೇಶಕರು!

'ನಿರ್ದೇಶಕಿ ರೂಪಾ ಅಯ್ಯರ್‌ ಶ್ರೀವತ್ಸ ಅವರ ವಿರುದ್ಧ ಕಾನೂನು ಹೋರಾಟ ಮಾಡುತ್ತೇನೆ' ಎಂದಿದ್ದ ನಿರ್ದೇಶಕರ ಸಂಘದ ಅಧ್ಯಕ್ಷ ಟೇಶಿ ವೆಂಕಟೇಶ್‌ ವಿರುದ್ಧ ಸಿನಿಮಾ ನಿರ್ದೇಶಕರು ಗುಡುಗಿದ್ದಾರೆ. ನಿರ್ದೇಶಕರ ಸಂಘದಲ್ಲೀಗ ವಿವಾದವೇ ಶುರುವಾಗಿದೆ.

ಚಲನಚಿತ್ರ ನಿರ್ದೇಶಕರ ಸಂಘದ ವಿವಾದ; ಟೇಶಿ ವೆಂಕಟೇಶ್ ವಿರುದ್ಧ ಗುಡುಗಿದ ಸಿನಿಮಾ ನಿರ್ದೇಶಕರು!
Linkup
ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘದ ಅಧ್ಯಕ್ಷ ಟೇಶಿ ವೆಂಕಟೇಶ್‌ ಅವರು ನಿರ್ದೇಶಕಿ ರೂಪಾ ಅಯ್ಯರ್‌, ಮಳವಳ್ಳಿ ಸಾಯಿಕೃಷ್ಣ, ನಾಗೇಂದ್ರ ಅರಸ್‌, ಸುನೀಲ್‌ ಪುರಾಣಿಕ್‌ ಮೇಲೆ ಮಾಡಿರುವ ಆರೋಪಕ್ಕೆ ಕೆಲವು ನಿರ್ದೇಶಕರು ಪ್ರತ್ಯುತ್ತರ ನೀಡಿದ್ದಾರೆ. ಮಾಡಿದ್ದರು. ಈ ಕುರಿತು ಗುರುವಾರ ಸುದ್ದಿಗೋಷ್ಠಿ ನಡೆಸಿರುವ ಅವರು ಇದೀಗ ವೆಂಕಟೇಶ್‌ ವಿರುದ್ಧವೇ ಪ್ರತಿ ಆರೋಪ ಮಾಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಿರ್ದೇಶಕ ನಾಗೇಂದ್ರ ಅರಸ್‌, 'ಸರ್ಕಾರ ನಿರ್ದೇಶಕರಿಗೆ ಏನೂ ನೀಡಿಲ್ಲ ಎಂದು ಟೇಶಿ ವೆಂಕಟೇಶ್‌ ಹೇಳಿದ್ದಾರೆ. ಆದರೆ ಕಳೆದ ವರ್ಷ 3 ಸಾವಿರ ರೂಪಾಯಿಯ ರಿಲಯನ್ಸ್‌ ಕೂಪನ್‌ಗಳನ್ನು ಚಲನಚಿತ್ರ ಅಕಾಡೆಮಿಯಿಂದ ನೀಡಲಾಗಿದೆ. 950 ಮಂದಿ ಸದಸ್ಯರಿಗೆ ಈ ಸೌಲಭ್ಯ ಸಿಕ್ಕಿದೆ. ರೂಪ ಅಯ್ಯರ್‌ ಸರ್ಕಾರದ ಜತೆಗೆ ಸಂಪರ್ಕ ಸಾಧಿಸಿ ಎಲ್ಲರಿಗೂ ಲಸಿಕೆ ಹಾಕಿಸುತ್ತಿದ್ದಾರೆ ಮತ್ತು ರೇಷನ್‌ ಕಿಟ್‌ ಕೊಡಿಸಿದ್ದಾರೆ. ಈಗಲೂ ಸಂಘದ ಉಧ್ಯಾಕ್ಷರಾಗಿ ಅವರು ಸಂಘದ ಸದಸ್ಯರಿಗೆ ಹಲವು ಯೋಜನೆಗಳು ತಲುಪುವಂತೆ ಮಾಡಿದ್ದಾರೆ. ಆಯುಷ್ಮಾನ್‌ ಕಾರ್ಡ್‌ ಮಾಡಿಸಿಕೊಟ್ಟಿದ್ದಾರೆ. ಇಂತಹವರ ಮೇಲೆ ಟೇಶಿ ಸುಮ್ಮನೆ ಆರೋಪ ಮಾಡುತ್ತಿದ್ದಾರೆ. ಇದೆಲ್ಲವೂ ಸುಳ್ಳು' ಎಂದಿದ್ದಾರೆ. 'ರೈಟ್ಸ್‌ ಮಾರಾಟವಾಗದ ಸಿನಿಮಾಗಳನ್ನು ಮಾರಾಟ ಮಾಡಿ ಕೊಡುತ್ತೇವೆ ಎಂದು ಟೇಶಿ ವೆಂಕಟೇಶ್‌ ಹಣ ಪಡೆದಿದ್ದಾರೆ. ಫಿಲಂ ಬಜಾರ್‌ ಎಂಬ ಫೋರಂ ಮಾಡಿ ಅಲ್ಲಿ ಎ ಸರ್ಟಿಫಿಕೇಟ್‌ ಮತ್ತು ಡಬ್ಬಿಂಗ್‌ ಸಿನಿಮಾ ಕೊಳ್ಳುವವರನ್ನು ಕರೆತಂದಿದ್ದರು. ಒಬ್ಬೊಬ್ಬರ ಬಳಿ 50 ಸಾವಿರಕ್ಕೂ ಹೆಚ್ಚಿನ ಹಣ ಪಡೆದಿದ್ದು, ಒಟ್ಟು 30 ಲಕ್ಷ ರೂಪಾಯಿ ಹಣ ಕಲೆಕ್ಟ್ ಮಾಡಿದ್ದಾರೆ. ನಿರ್ದೇಶಕರ ಸಂಘದ ಹೆಸರು ಹೇಳಿಕೊಂಡು ಮೋಸ ಮಾಡಿದ್ದಾರೆ. ಅವರಿಗೆ ನೋಟಿಸ್‌ ನೀಡಲು ಅವರ ಅಡ್ರೆಸ್‌ ಸಹ ಇಲ್ಲ' ಎಂದು ನಿರ್ದೇಶಕ ಜೆ ಜೆ ಶ್ರೀನಿವಾಸ್‌ ಈ ಸಂದರ್ಭದಲ್ಲಿ ಹೇಳಿದ್ದಾರೆ. 'ಟೇಶಿ ವೆಂಕಟೇಶ್‌ ಮಾಡಿರುವ ಆರೋಪಗಳೆಲ್ಲವೂ ಶುದ್ಧ ಸುಳ್ಳು. ಇದರಲ್ಲಿ ಯಾವುದೆ ಹುರುಳಿಲ್ಲ. ಅವರು ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ. ಎರಡು ಸಾವಿರಕ್ಕೂ ಹೆಚ್ಚು ಸದಸ್ಯರಿರುವ ಸಂಘದಲ್ಲಿ ಕೇವಲ ಎಂಬತ್ತು ಜನರ ಮೀಟಿಂಗ್ ಮೂಲಕ ಹೊಸ ಪದಾಧಿಕಾರಿಗಳ ಘೋಷಣೆ ಒಪ್ಪಲಾರದ್ದು. ಚುನಾವಣೆ ಆಗದೇ ಹೇಗೆ ಅಧ್ಯಕ್ಷರ ಆಯ್ಕೆ ಆಯಿತು' ಎಂದು ಮಳವಳ್ಳಿ ಸಾಯಿಕೃಷ್ಣ ಸುದ್ದಿಗೋಷ್ಠಿಯಲ್ಲಿಹೇಳಿದ್ದಾರೆ.