'ಅಮರ ಪ್ರೇಮಿ ಅರುಣ್' ಸಿನಿಮಾದಲ್ಲಿ 'ಪದ್ಮಶ್ರೀ' ಪುರಸ್ಕೃತೆ ಮಂಜಮ್ಮ ಜೋಗತಿ ನಟನೆ

ಒಲವು ಸಿನಿಮಾ ಸಂಸ್ಥೆಯು ನಿರ್ಮಿಸುತ್ತಿರುವ 'ಅಮರ ಪ್ರೇಮಿ ಅರುಣ್' ಸಿನಿಮಾದಲ್ಲಿ ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷರಾಗಿರುವ 'ಪದ್ಮಶ್ರೀ' ಪುರಸ್ಕೃತೆ ಮಂಜಮ್ಮ ಜೋಗತಿ ಅವರು ಒಂದು ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆ ಕುರಿತು ಇಲ್ಲಿದೆ ಮಾಹಿತಿ.

'ಅಮರ ಪ್ರೇಮಿ ಅರುಣ್' ಸಿನಿಮಾದಲ್ಲಿ 'ಪದ್ಮಶ್ರೀ' ಪುರಸ್ಕೃತೆ ಮಂಜಮ್ಮ ಜೋಗತಿ ನಟನೆ
Linkup
ಒಲವು ಸಿನಿಮಾ ಸಂಸ್ಥೆಯು ನಿರ್ಮಿಸುತ್ತಿರುವ '' ಸಿನಿಮಾದ ಮೊದಲ ಸುತ್ತಿನ ಚಿತ್ರೀಕರಣವನ್ನು ಬಳ್ಳಾರಿ ನಗರದಲ್ಲಿ ಮುಗಿಸಲಾಗಿದ್ದು, ಈಗ ಮತ್ತೆ ಬಳ್ಳಾರಿಯಲ್ಲಿಯೇ ನಡೆಯಲಿರುವ ಎರಡನೇ ಹಂತದ ಚಿತ್ರೀಕರಣಕ್ಕೆ ತಂಡ ತಯಾರಾಗುತ್ತಿದೆ. ವಿಶೇಷವೆಂದರೆ, ಈ ಸಿನಿಮಾದಲ್ಲಿ ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷರಾಗಿರುವ 'ಪದ್ಮಶ್ರೀ' ಪುರಸ್ಕೃತೆ ಜೋಗತಿ ಮಂಜಮ್ಮ ಅವರು ಒಂದು ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗೆಯೇ ಖ್ಯಾತ ರಂಗಕರ್ಮಿ ಹುಲಿಗೆಪ್ಪ ಕಟ್ಟಿಮನಿ ಅವರು ಕೂಡ 'ಅಮರ ಪ್ರೇಮಿ ಅರುಣ್' ಬಳಗದಲ್ಲಿದ್ಧಾರೆ. ಚಿತ್ರದಲ್ಲಿ ಜೋಗತಿ ಮಂಜಮ್ಮ ಅವರ ಪಾತ್ರ ಯಾವ ರೀತಿಯದ್ದು ಎಂಬ ಬಗ್ಗೆ ಮಾಹಿತಿ ಹೊರಬಿದ್ದಿಲ್ಲ. ಬಳ್ಳಾರಿ ನಗರದ ಪ್ರಮುಖ ಜಾಗಗಳಲ್ಲಿ ನಾಯಕ ಹರಿಶರ್ವಾ, ನಾಯಕಿ ದೀಪಿಕಾ ಆರಾಧ್ಯ ಸೇರಿದಂತೆ ಧರ್ಮಣ್ಣ, ಭೂಮಿಕಾ ಭಟ್, ಮಹೇಶ್ ಬಂಗ್, ಬಲರಾಜ್ವಾಡಿ, ರೋಹಿಣಿ, ವಿಜಯಲಕ್ಷ್ಮಿ ಮುಂತಾದ ಕಲಾವಿದರು ನಟಿಸಿರುವ ದೃಶ್ಯಗಳ ಚಿತ್ರೀಕರಣ ಮಾಡಲಾಗಿದೆ. ಈ ಚಿತ್ರಕ್ಕೆ ಪ್ರವೀಣ್ ಕುಮಾರ್. ಜಿ ಅವರ ರಚನೆ-ನಿರ್ದೇಶನವಿದೆ. ಪ್ರವೀಣ್ ಎಸ್ ಅವರ ಛಾಯಾಗ್ರಹಣ, ನಿರಂಜನ್ ದೇವರ ಮನೆಯವರ ಸಂಕಲನ, ಮಂಡ್ಯ ಮಂಜು ಅವರ ಕಾರ್ಯಕಾರಿ ನಿರ್ಮಾಣವಿದೆ. ಕಿರಣ್ ರವೀಂದ್ರನಾಥ್ ಅವರ ಸಂಗೀತ ಸಂಯೋಜನೆಯ ಹಾಡುಗಳಿಗೆ ಜಯಂತ ಕಾಯ್ಕಿಣಿ ಮತ್ತು ಅವರ ಸಾಹಿತ್ಯ ಬರೆದಿದ್ದಾರೆ. ಸುಧೀಂದ್ರ ವೆಂಕಟೇಶ್ ಅವರ ಮಾಧ್ಯಮ ಸಂಪರ್ಕವಿದೆ. 'ಇದು ಬಳ್ಳಾರಿ ಜಿಲ್ಲೆಯಲ್ಲಿ ನಡೆಯುವ ಕಥೆ.‌ ಹಾಗಾಗಿ ನಮ್ಮ ಚಿತ್ರದ ಎಲ್ಲಾ ಕಲಾವಿದರು ಆ ಪ್ರಾಂತ್ಯದ ಭಾಷೆಯನ್ನು ಅಭ್ಯಾಸ ಮಾಡುತ್ತಿದ್ದಾರೆ. ಬಳ್ಳಾರಿಯ ಪ್ರಾದೇಶಿಕತೆ ತೋರಿಸುತ್ತಾ, ಪ್ರೇಮಕಥೆ ಹೇಳುವ ಒಂದು ಪ್ರಯತ್ನ ಇದು. ರೊಮ್ಯಾಂಟಿಕ್ ಕಾಮಿಡಿ ಜಾನರ್‌ನ ಚಿತ್ರ ಅನ್ನಬಹುದು. ಯುಗಾದಿ ಹಬ್ಬದ ಆದ ಮೇಲೆ ಚಿತ್ರೀಕರಣ ಆರಂಭವಾಗಲಿದೆ' ಎಂದು ನಿರ್ದೇಶಕ ಪ್ರವೀಣ್ ಕುಮಾರ್ ಹೇಳುತ್ತಾರೆ. ಪ್ರವೀಣ್ ಕುಮಾರ್ ಅವರ ಸ್ನೇಹಿತರು ಹಾಗೂ ಸಂಬಂಧಿಕರು ಸೇರಿ ಒಲವು ಸಿನಿಮಾ ಎಂಬ ಪ್ರೊಡಕ್ಷನ್ಸ್ ಮೂಲಕ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ.‌ ಕನ್ನಡ ಚಿತ್ರರಂಗ ಕಂಡ ಹೆಸರಾಂತ ನಿರ್ದೇಶಕರಾದ ಗಿರೀಶ್ ಕಾಸರವಳ್ಳಿ, ಬಿ.ಸುರೇಶ, ಎಂ.ಕೆ.ಸುಬ್ರಹ್ಮಣ್ಯ, ಯೋಗರಾಜ್ ಭಟ್, ಅಭಯಸಿಂಹ ಹಾಗೂ ಮಹೇಶ್ ರಾವ್ ಅವರ ಬಳಿ ಪ್ರವೀಣ್ ಕುಮಾರ್ ಕೆಲಸ ಮಾಡಿದ್ದಾರೆ. ಇದೀಗ ಮೊದಲ ಬಾರಿಗೆ ನಿರ್ದೇಶಕರಾಗಿದ್ದಾರೆ.