ಪ್ರಶಾಂತ್‌ ಕಿಶೋರ್‌ - ಗಾಂಧಿಗಳ ನಡುವೆ ಮನಸ್ತಾಪ? ಟ್ಟೀಟ್‌ನಲ್ಲಿ ಕಾಂಗ್ರೆಸ್‌ ಕೆಣಕಿದ ಚುನಾವಣಾ ಚಾಣಕ್ಯ

ಬಹಳ ಹಳೆಯ ಪಕ್ಷ (ಕಾಂಗ್ರೆಸ್‌)ದ ಸಾಂಸ್ಥಿಕ ದೌರ್ಬಲ್ಯ ಮತ್ತು ಆಳವಾಗಿ ಬೇರು ಬಿಟ್ಟಿರುವ ಸಮಸ್ಯೆಗಳಿಗೆ ತಕ್ಷಣದ ಪರಿಹಾರ ಸಾದ್ಯವಿಲ್ಲ ಎಂದು ಪ್ರಶಾಂತ್‌ ಕಿಶೋರ್‌ ಟ್ಟೀಟ್‌ ಮಾಡಿದ್ದು, ಕಾಂಗ್ರೆಸ್‌ ಹಾಗೂ ಅದರ ಬೆಂಬಲಿಗರಿಗೆ ಎಚ್ಚರಿಕೆ ನೀಡಿದ್ದಾರೆ.

ಪ್ರಶಾಂತ್‌ ಕಿಶೋರ್‌ - ಗಾಂಧಿಗಳ ನಡುವೆ ಮನಸ್ತಾಪ? ಟ್ಟೀಟ್‌ನಲ್ಲಿ ಕಾಂಗ್ರೆಸ್‌ ಕೆಣಕಿದ ಚುನಾವಣಾ ಚಾಣಕ್ಯ
Linkup
ಹೊಸದಿಲ್ಲಿ: ಬಹಳ ಹಳೆಯ ಪಕ್ಷದಲ್ಲಿ ಆಳವಾಗಿ ಬೇರೂರಿರುವ ಸಮಸ್ಯೆಗಳಿಗೆ ತಕ್ಷಣದಲ್ಲಿ ಪರಿಹಾರ ಕಂಡುಕೊಳ್ಳುವುದು ಸಾಧ್ಯವಿಲ್ಲ ಎಂದು ಚುನಾವಣಾ ರಣತಂತ್ರ ನಿಪುಣ ಹೇಳಿದ್ದಾರೆ. ಅನ್ನು ಉದ್ದೇಶಿಸಿಯೇ ಅವರು ಶುಕ್ರವಾರ ಈ ರೀತಿಯ ಟ್ವೀಟ್‌ ಮಾಡಿದ್ದಾರೆ ಎನ್ನಲಾಗಿದ್ದು, ಇದು ಗಾಂಧಿ ಕುಟುಂಬ ಮತ್ತು ಪ್ರಶಾಂತ್‌ ಕಿಶೋರ್‌ ನಡುವಿನ ಸಂಬಂಧ ಹಳಸಿದೆ ಎನ್ನುವುದನ್ನು ಸೂಚಿಸುತ್ತದೆ ಎಂದು ವಿಶ್ಲೇಷಿಸಲಾಗುತ್ತಿದೆ. ''ಲಖೀಮ್‌ಪುರ ಖೇರಿ ಘಟನೆ ಹಿನ್ನೆಲೆಯಲ್ಲಿ ಪ್ರತಿಪಕ್ಷಗಳ ನೇತೃತ್ವ ವಹಿಸಿರುವ ಬಹಳ ಹಳೆಯ ಪಕ್ಷದ ಸಮಸ್ಯೆಗಳಿಗೆ ತಕ್ಷಣದ ಪರಿಹಾರ ದೊರೆತು ಪಕ್ಷ ಪುನಶ್ಚೇತನಗೊಳ್ಳುತ್ತದೆ ಎಂದುಕೊಂಡಿದ್ದವರಿಗೆ ಬಹಳ ನಿರಾಸೆಯಾಗಿದೆ. ದುರದೃಷ್ಟವೆಂದರೆ, ಬಹಳ ಹಳೆಯ ಪಕ್ಷದ ಸಾಂಸ್ಥಿಕ ದೌರ್ಬಲ್ಯ ಮತ್ತು ಆಳವಾಗಿ ಬೇರು ಬಿಟ್ಟಿರುವ ಸಮಸ್ಯೆಗಳಿಗೆ ತಕ್ಷಣದ ಪರಿಹಾರ ಸಾಧ್ಯವಿಲ್ಲ,'' ಎಂದು ಪ್ರಶಾಂತ್‌ ಕಿಶೋರ್‌ ಟ್ವೀಟ್‌ ಮಾಡಿದ್ದಾರೆ. ಅ. 3ರಂದು ಲಖೀಮ್‌ಪುರ ಖೇರಿ ಘಟನೆ ನಡೆಯುತ್ತಿದ್ದಂತೆಯೇ ರಾಹುಲ್‌ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಸಂತ್ರಸ್ತ ಕುಟುಂಬಗಳನ್ನು ಭೇಟಿ ಮಾಡಡಲು ದೌಡಾಯಿಸಿದ್ದರು. ಪ್ರಶಾಂತ್‌ ಕಿಶೋರ್‌ ಕೆಲ ದಿನಗಳ ಹಿಂದೆ ಕಾಂಗ್ರೆಸ್‌ ಮುಖಂಡರಾದ ರಾಹುಲ್‌ ಗಾಂಧಿ, ಪ್ರಿಯಾಂಕಾ ವಾದ್ರಾ ಅವರನ್ನು ಭೇಟಿ ಮಾಡಿದ್ದರು. ಹೀಗಾಗಿ ಅವರು ಕಾಂಗ್ರೆಸ್‌ ಸೇರುತ್ತಾರೆ ಎಂಬ ವದಂತಿ ದಟ್ಟವಾಗಿ ಹರಡಿತ್ತು. ವೀರಪ್ಪ ಮೊಯಿಲಿಯಂತಹ ನಾಯಕರು ಪ್ರಶಾಂತ್‌ ಪಕ್ಷ ಸೇರ್ಪಡೆ ಸ್ವಾಗತಿಸಿದ್ದರು. ಪಕ್ಷದ ಪುನಶ್ಚೇತನ ನಿಟ್ಟಿನಲ್ಲಿ ತಮಗೆ ಮುಕ್ತ ಸ್ವಾತಂತ್ರ್ಯ ನೀಡಬೇಕೆಂಬ ಪ್ರಶಾಂತ್‌ ಕಿಶೋರ್‌ ಬೇಡಿಕೆಯನ್ನು ಗಾಂಧಿ ಕುಟುಂಬ ಒಪ್ಪದ ಕಾರಣ ಕಾಂಗ್ರೆಸ್‌ ಸೇರ್ಪಡೆ ವಿಚಾರವನ್ನು ಪ್ರಶಾಂತ್‌ ಕೈ ಬಿಟ್ಟರು ಎಂದು ಹೇಳಲಾಗಿದೆ. ಭೂಪೇಶ್‌ ಬಘೇಲ್‌ ವ್ಯಂಗ್ಯಪ್ರಶಾಂತ್‌ ಕಿಶೋರ್‌ ಟ್ವೀಟ್‌ಗೆ ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್‌ ಬಘೇಲ್‌ ಟ್ವೀಟ್‌ ಮೂಲಕವೇ ಉತ್ತರ ನೀಡಿದ್ದಾರೆ. ''ತಮಗೆ ಒಂದೂ ಸ್ಥಾನ ಗೆಲ್ಲಲು ಸಾಧ್ಯವಾಗದೇ ಕಾಂಗ್ರೆಸ್‌ ನಾಯಕರಿಗೆ ಬಲೆ ಬೀಸಿ ರಾಷ್ಟ್ರೀಯ ಪರ್ಯಾಯವಾಗಲು ಬಯಸಿರುವವರಿಗೆ ನಿಜಕ್ಕೂ ನಿರಾಸೆಯಾಗಿದೆ. ದುರದೃಷ್ಟವೆಂದರೆ, ರಾಷ್ಟ್ರೀಯ ಪರ್ಯಾಯವಾಗಲು ದೃಢವಾದ ಪ್ರಯತ್ನ ಬೇಕು ಹಾಗೂ ಸಮಾಜದಲ್ಲಿ ಆಳವಾಗಿ ಬೇರು ಬಿಡಬೇಕು. ಅದಿಲ್ಲದೇ ತಕ್ಷಣದಲ್ಲಿ ರಾಷ್ಟ್ರೀಯ ಪರ್ಯಾಯವಾಗಲು ಯಾವುದೇ ಪರಿಹಾರ ಇಲ್ಲ,'' ಎಂದು ಬಘೇಲ್‌ ಅವರು ಪ್ರಶಾಂತ್‌ ಧಾಟಿಯಲ್ಲೇ ಛೇಡಿಸಿದ್ದಾರೆ.