ಡೆಲ್ಟಾ ಪ್ಲಸ್‌ ವೈರಸ್‌ಗೂ ಲಸಿಕೆ ಪರಿಣಾಮಕಾರಿಯೇ? ಸಂಶೋಧನೆಗೆ ಮುಂದಾದ ಐಸಿಎಂಆರ್‌

ಡೆಲ್ಟಾ ಪ್ಲಸ್‌ ರೂಪಾಂತರಿಗೂ ಸದ್ಯ ದೇಶದಲ್ಲಿ ಬಳಸುತ್ತಿರುವ ಕೊರೊನಾ ನಿರೋಧಕ ಲಸಿಕೆಗಳು ಪರಿಣಾಮಕಾರಿಯೇ ಎಂಬ ಕುರಿತು ಅಧ್ಯಯನ ನಡೆಸಲು ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ ಮುಂದಾಗಿದೆ.

ಡೆಲ್ಟಾ ಪ್ಲಸ್‌ ವೈರಸ್‌ಗೂ ಲಸಿಕೆ ಪರಿಣಾಮಕಾರಿಯೇ? ಸಂಶೋಧನೆಗೆ ಮುಂದಾದ ಐಸಿಎಂಆರ್‌
Linkup
ಪುಣೆ: ದೇಶಾದ್ಯಂತ ಮೂರನೇ ಅಲೆ ಭೀತಿ ಹುಟ್ಟಿಸಿರುವ ಡೆಲ್ಟಾ ಪ್ಲಸ್‌ ರೂಪಾಂತರಿಗೂ ಸದ್ಯ ದೇಶದಲ್ಲಿ ಬಳಸುತ್ತಿರುವ ಕೊರೊನಾ ನಿರೋಧಕ ಲಸಿಕೆಗಳು ಪರಿಣಾಮಕಾರಿಯೇ ಎಂಬ ಕುರಿತು ಅಧ್ಯಯನ ನಡೆಸಲು ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ (ಐಸಿಎಂಆರ್‌) ಹಾಗೂ ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ವೈರಾಲಜಿ (ಎನ್‌ಐವಿ) ಮುಂದಾಗಿವೆ. ಕರ್ನಾಟಕ, ಕೇರಳ, ಮಧ್ಯಪ್ರದೇಶ, ಮಹಾರಾಷ್ಟ್ರ ಸೇರಿ ಹಲವು ರಾಜ್ಯಗಳಲ್ಲಿ ಡೆಲ್ಟಾ ಪ್ಲಸ್‌ ರೂಪಾಂತರಿ ಕಾಣಿಸಿಕೊಂಡಿದ್ದು, ಇದೇ ವೈರಾಣು ಮೂರನೇ ಅಲೆಯನ್ನು ಸೃಷ್ಟಿಸಬಹುದು ಎಂಬ ಆತಂಕ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಸದ್ಯ ದೇಶದಲ್ಲಿರುವ ಲಸಿಕೆಗಳು ಹೊಸ ರೂಪಾಂತರಿಯನ್ನು ತಡೆಯಬಹುದೇ ಎಂಬ ಕುರಿತು ಅಧ್ಯಯನಕ್ಕೆ ನಿರ್ಧರಿಸಲಾಗಿದೆ. ''ದೇಶದಲ್ಲಿ ಎರಡನೇ ಅಲೆಗೆ ಕಾರಣವಾದ ಡೆಲ್ಟಾ ರೂಪಾಂತರಿಗೆ ಈಗಿರುವ ಲಸಿಕೆಗಳು ಪರಿಣಾಮಕಾರಿ ಎಂಬುದು ಸಾಬೀತಾಗಿದೆ. ಅದೇ ರೀತಿ, ಡೆಲ್ಟಾ ಪ್ಲಸ್‌ಗೂ ಪರಿಣಾಮಕಾರಿಯಾಗುವ ಸಾಧ್ಯತೆ ಹೆಚ್ಚಿದೆ. ಹಾಗಾಗಿ ಈ ಕುರಿತು ಶೀಘ್ರದಲ್ಲೇ ಅಧ್ಯಯನ ಆರಂಭಿಸಲಾಗುತ್ತದೆ,'' ಎಂದು ಎನ್‌ಐವಿಯ ಹಿರಿಯ ವಿಜ್ಞಾನಿ ಡಾ.ಪ್ರಜ್ಞಾ ಯಾದವ್‌ ತಿಳಿಸಿದ್ದಾರೆ. ದೇಶದಲ್ಲಿ ಸದ್ಯ ಕೊವ್ಯಾಕ್ಸಿನ್‌, ಕೋವಿಶೀಲ್ಡ್‌ ಹಾಗೂ ಸ್ಪುಟ್ನಿಕ್‌ ಲಸಿಕೆಗಳನ್ನು ಬಳಸಲಾಗುತ್ತಿದೆ. ಹಂಚಿಕೆ ಪಾರದರ್ಶಕ: ಕೇಂದ್ರದ ಸ್ಪಷ್ಟನೆ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಪಾರದರ್ಶಕವಾಗಿ ಲಸಿಕೆ ಹಂಚಿಕೆ ಮಾಡಲಾಗಿದೆ,'' ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸ್ಪಷ್ಟಪಡಿಸಿದೆ. ಲಸಿಕೆ ಹಂಚಿಕೆಯಲ್ಲಿಪಾರದರ್ಶಕತೆ ಇಲ್ಲಎಂಬ ವರದಿಗಳನ್ನು ಸಚಿವಾಲಯ ಅಲ್ಲಗಳೆದಿದ್ದು, ''ಸಂಪೂರ್ಣ ಪಾರದರ್ಶಕವಾಗಿ ಎಲ್ಲರಾಜ್ಯಗಳಿಗೆ ಜನಸಂಖ್ಯೆ, ಸಕ್ರಿಯ ಸೋಂಕಿತರು, ಲಸಿಕೆ ಸದ್ಬಳಕೆ, ವ್ಯರ್ಥ ಮಾಡುವ ಪ್ರಮಾಣ ಆಧರಿಸಿ ನೀಡಲಾಗಿದೆ. ಪಾರದರ್ಶಕತೆ ಇಲ್ಲಎಂಬ ವರದಿಗಳು ಆಧಾರ ರಹಿತವಾಗಿವೆ,'' ಎಂದು ತಿಳಿಸಿದೆ. ==