'ಗುರುಗಳಿಗೆ ಕಿಚ್ಚನ ನಮನ': ಶಿಕ್ಷಕರಿಗೆ ಗೌರವಧನ ನೀಡಲು ಮುಂದಾದ ಸುದೀಪ್

ಕೋವಿಡ್-19 ಎರಡನೇ ಅಲೆ ಮತ್ತು ಲಾಕ್‌ಡೌನ್‌ನಿಂದಾಗಿ ಅನೇಕ ಶಿಕ್ಷಕರು ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಅಂತಹ ಶಿಕ್ಷಕರಿಗೆ ನೆರವಾಗಲು ಸುದೀಪ್ ಮನಸ್ಸು ಮಾಡಿದ್ದಾರೆ.

'ಗುರುಗಳಿಗೆ ಕಿಚ್ಚನ ನಮನ': ಶಿಕ್ಷಕರಿಗೆ ಗೌರವಧನ ನೀಡಲು ಮುಂದಾದ ಸುದೀಪ್
Linkup
ಕೊರೊನಾ ವೈರಸ್ ಸೋಂಕಿನ ಎರಡನೇ ಅಲೆ ಹಾಗೂ ಲಾಕ್‌ಡೌನ್‌ನಿಂದಾಗಿ ಎಷ್ಟೋ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಾಡಲು ಕೆಲಸವಿಲ್ಲದೆ, ಕೈಯಲ್ಲಿ ಕಾಸಿಲ್ಲದೆ ಹಸಿವಿನಿಂದ ಒದ್ದಾಡುತ್ತಿದ್ದಾರೆ. ಅಂಥವರಿಗೆ ತಮ್ಮ ಚಾರಿಟೇಬಲ್ ಸೊಸೈಟಿ ಮೂಲಕ ಸಹಾಯ ಮಾಡುತ್ತಿದ್ದಾರೆ. 'ಕಿಚ್ಚನ ಕೈತುತ್ತು' ಕಾರ್ಯಕ್ರಮದಡಿಯಲ್ಲಿ ಅಗತ್ಯವಿರುವ ಮನೆ ಮನೆಗೆ ತೆರಳಿ ಕಿಚ್ಚ ಸುದೀಪ್ ತಂಡ ಆಹಾರ ನೀಡುವ ಕೆಲಸದಲ್ಲಿ ನಿರತವಾಗಿದೆ. ಲಾಕ್‌ಡೌನ್‌ನಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಕನ್ನಡ ಚಿತ್ರರಂಗದ ಹಿರಿಯ ಕಲಾವಿದರಿಗೂ ಕಿಚ್ಚ ಸುದೀಪ್ ತಂಡ ಆಹಾರ ನೀಡಿದ್ದರು. ಮಂಗಳಮುಖಿಯರಿಗೂ ಸುದೀಪ್ ತಂಡ ದಿನಸಿ ಕಿಟ್ ಹಾಗೂ ಆಹಾರವನ್ನು ಒದಗಿಸಿದ್ದರು. ಸಂಕಷ್ಟದ ಸಮಯದಲ್ಲಿ ಅನೇಕರಿಗೆ ಸಹಾಯ ಮಾಡುತ್ತ, ಮಾನವೀಯ ಕೆಲಸಗಳನ್ನು ಮಾಡುತ್ತಿರುವ ಕಿಚ್ಚ ಸುದೀಪ್ ಇದೀಗ ಗುರುಗಳಿಗೆ ನಮನ ಸಲ್ಲಿಸಲು ಮುಂದಾಗಿದ್ದಾರೆ. 'ಗುರುಗಳಿಗೆ ಕಿಚ್ಚನ ನಮನ' ಕಾರ್ಯಕ್ರಮದಡಿಯಲ್ಲಿ ತಮ್ಮ ಚಾರಿಟೇಬಲ್ ಸೊಸೈಟಿ ಮುಖಾಂತರ ಶಿಕ್ಷಕರಿಗೆ ಗೌರವಧನ ನೀಡಲು ಸುದೀಪ್ ನಿರ್ಧರಿಸಿದ್ದಾರೆ. ಕೋವಿಡ್-19 ಎರಡನೇ ಅಲೆ ಮತ್ತು ಲಾಕ್‌ಡೌನ್‌ನಿಂದಾಗಿ ಅನೇಕ ಶಿಕ್ಷಕರು ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಅಂತಹ ಶಿಕ್ಷಕರಿಗೆ ನೆರವಾಗಲು ಸುದೀಪ್ ಮನಸ್ಸು ಮಾಡಿದ್ದಾರೆ. 'ಗುರುಗಳಿಗೆ ಕಿಚ್ಚನ ನಮನ' ಕಾರ್ಯಕ್ರಮದ ಮೊದಲ ಹಂತವಾಗಿ ಕಷ್ಟದಲ್ಲಿರುವ 50 ಜನ ಶಿಕ್ಷಕರಿಗೆ ಕಿಚ್ಚ ಸುದೀಪ್ ಚಾರಿಟೇಬಲ್ ಸೊಸೈಟಿ ತಲಾ ಎರಡು ಸಾವಿರ ರೂಪಾಯಿ ಗೌರವಧನ ನೀಡಲಿದೆ. ಕಿಚ್ಚ ಸುದೀಪ್ ಮತ್ತು ಅವರ ತಂಡದ ಈ ಕಾರ್ಯಗಳಿಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.