ಗಣರಾಜ್ಯೋತ್ಸವ ಹಿಂಸಾಚಾರ: ದೀಪ್ ಸಿಧು ಮತ್ತು ಇತರರ ವಿರುದ್ಧದ ಆರೋಪಪಟ್ಟಿ ಪರಿಗಣಿಸಿದ ಕೋರ್ಟ್

ಗಣರಾಜ್ಯೋತ್ಸವ ದಿನದಂದು ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ದಿಲ್ಲಿ ಅಪರಾಧ ದಳ ಪೊಲೀಸರು ಸಲ್ಲಿಸಿದ್ದ ಪೂರಕ ಆರೋಪಪಟ್ಟಿಯನ್ನು ಪರಿಗಣನೆಗೆ ತೆಗೆದುಕೊಂಡಿರುವ ಮ್ಯಾಜಿಸ್ಟ್ರೇಟ್, ಆರೋಪಿಗಳ ಹಾಜರಾತಿಗೆ ಸಮನ್ಸ್ ನೀಡಿದೆ.

ಗಣರಾಜ್ಯೋತ್ಸವ ಹಿಂಸಾಚಾರ: ದೀಪ್ ಸಿಧು ಮತ್ತು ಇತರರ ವಿರುದ್ಧದ ಆರೋಪಪಟ್ಟಿ ಪರಿಗಣಿಸಿದ ಕೋರ್ಟ್
Linkup
ಹೊಸದಿಲ್ಲಿ: ಗಣರಾಜ್ಯ ದಿನದಂದು ನಡೆದ ಹಿಂಸಾಚಾರ ಪ್ರಕರಣದಲ್ಲಿ ನಟ, ಕಾರ್ಯಕರ್ತ ಹಾಗೂ ಇತರರ ವಿರುದ್ಧ ಸಲ್ಲಿಸಲಾಗಿರುವ ಪೂರಕ ಆರೋಪಪಟ್ಟಿಯನ್ನು ದಿಲ್ಲಿಯ ನ್ಯಾಯಾಲಯವೊಂದು ಶನಿವಾರ ಪರಿಗಣನೆಗೆ ತೆಗೆದುಕೊಂಡಿದೆ. ಜೂನ್ 29ರಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಎಲ್ಲ ಆರೋಪಿಗಳೂ ಹಾಜರಾಗಬೇಕು ಎಂದು ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಗಜೇಂದ್ರ ಸಿಂಗ್ ನಗರ್ ಅವರು ಸಮನ್ ನೀಡಿದ್ದಾರೆ. ಇನ್ನೂ ನ್ಯಾಯಾಂಗ ಬಂಧನದಲ್ಲಿ ಇರುವ ಮಣಿಂದರ್ ಸಿಂಗ್ ಮತ್ತು ಖೇಮ್‌ಪ್ರೀತ್ ಸಿಂಗ್ ವಿರುದ್ಧ ಪ್ರೊಡಕ್ಷನ್ ವಾರಂಟ್ ಹೊರಡಿಸಲಾಗಿದೆ. ಪೊಲೀಸರು ದೀಪ್ ಸಿಧು ಹಾಗೂ ಇತರೆ ಆರೋಪಿಗಳ ವಿರುದ್ಧ ಜೂನ್ 17ರಂದು ಪೂರಕ ಸಲ್ಲಿಸಿದ್ದರು. ಗಲಭೆಯಲ್ಲಿ ತೀವ್ರವಾಗಿ ಗಾಯಗೊಂಡ ಪ್ರತ್ಯಕ್ಷದರ್ಶಿಗಳು ಅಥವಾ ಯಾರಿಂದ ಶಸ್ತ್ರಾಸ್ತ್ರಗಳನ್ನು ಕಸಿದುಕೊಳ್ಳಲಾಗಿತ್ತೋ ಅವರ ಹೆಸರುಗಳನ್ನು ತನಿಖಾಧಿಕಾರಿ ನಮೂದಿಸಿದ್ದಾರೆ. ಪ್ರಕರಣದ ತನಿಖೆ ಕೈಗೆತ್ತಿಕೊಂಡಿದ್ದ ಪೊಲೀಸ್ ಅಪರಾಧ ದಳವು, ಘಟನೆ ನಡೆದು ಸುಮಾರು ನಾಲ್ಕು ತಿಂಗಳ ನಂತರ ಮೇ 17ರಂದು ದೀಪ್ ಸಿಧು ಹಾಗೂ ಇತರೆ 15 ಮಂದಿ ವಿರುದ್ಧ 3,224 ಪುಟಗಳ ಮೊದಲ ಆರೋಪಪಟ್ಟಿ ಸಲ್ಲಿಸಿತ್ತು. ವಿರುದ್ಧ ರೈತರು ಜನವರಿ 26ರಂದು ನಡೆಸಿದ್ದ ಟ್ರ್ಯಾಕ್ಟರ್ ಮೆರವಣಿಗೆಯು ಕೆಂಪುಕೋಟೆಗೆ ಮುತ್ತಿಗೆ ಹಾಕುವ ವೇಳೆ ಹಿಂಸಾಚಾರಕ್ಕೆ ತಿರುಗಿತ್ತು.