![](https://vijaykarnataka.com/photo/83636344/photo-83636344.jpg)
ಹೊಸದಿಲ್ಲಿ: ಕೋವಿಡ್ ಶಿಷ್ಟಾಚಾರಗಳ ಉಲ್ಲಂಘನೆಯು ಮೂರನೇ ಅಲೆಯನ್ನು ಇನ್ನಷ್ಟು ಬೇಗನೆ ಬರುವಂತೆ ಮಾಡುತ್ತದೆಯಷ್ಟೇ ಎಂದು ಶುಕ್ರವಾರ ಹೇಳಿದೆ. ರಾಜಧಾನಿ ದಿಲ್ಲಿಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಹೇರಲಾಗಿದ್ದ ಲಾಕ್‌ಡೌನ್ ತೆರವುಗೊಳಿಸಿದ ಬೆನ್ನಲ್ಲೇ ಮಾರುಕಟ್ಟೆಗಳಲ್ಲಿ ನಿಯಮಗಳನ್ನು ಉಲ್ಲಂಘಿಸಿ ಜನಜಂಗುಳಿ ಸೇರುತ್ತಿರುವುದಕ್ಕೆ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.
ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು. ವ್ಯಾಪಾರಿಗಳಲ್ಲಿ ಸಂವೇದನೆ ಮೂಡಿಸಬೇಕು ಮತ್ತು ಎಲ್ಲ ಹಾಗೂ ವ್ಯಾಪಾರಿ ಸಂಘಟನೆಗಳೊಂದಿಗೆ ಈ ಸಂಬಂಧ ಸಭೆಗಳನ್ನು ನಡೆಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದೆ.
ಮೂರನೇ ಅಲೆಗೆ ನಾವು ಅನುಮತಿ ನೀಡಬಾರದು ಎಂದ ನ್ಯಾಯಮೂರ್ತಿಗಳಾದ ನವೀನ್ ಚಾವ್ಲಾ ಮತ್ತು ಆಶಾ ಮೆನನ್ ಅವರನ್ನು ಒಳಗೊಂಡ ರಜೆಕಾಲದ ನ್ಯಾಯಪೀಠ, ಈ ಬಗ್ಗೆ ಕೇಂದ್ರ ಹಾಗೂ ದಿಲ್ಲಿ ಸರ್ಕಾರಗಳು ಸ್ಥಿತಿಗತಿಯ ವರದಿ ಸಲ್ಲಿಸಬೇಕು ಎಂದು ನಿರ್ದೇಶಿಸಿದೆ.
ಮಾರುಕಟ್ಟೆಗಳಲ್ಲಿ ಬೀದಿ ವ್ಯಾಪಾರಿಗಳು ಶಿಷ್ಟಾಚಾರಗಳನ್ನು ಸರಿಯಾಗಿ ಪಾಲಿಸದಿರುವ ಬಗ್ಗೆ ಏಮ್ಸ್ ವೈದ್ಯರೊಬ್ಬರು ಹೈಕೋರ್ಟ್ ನ್ಯಾಯಮೂರ್ತಿಯೊಬ್ಬರಿಗೆ ಕಳುಹಿಸಿದ್ದ ಮಾರುಕಟ್ಟೆ ಚಿತ್ರಗಳನ್ನು ನ್ಯಾಯಪೀಠ ಗಂಭೀರವಾಗಿ ಪರಿಗಣಿಸಿದೆ.
'ನಾವು ಎರಡನೆಯ ಅಲೆಯಲ್ಲಿ ಭಾರಿ ದೊಡ್ಡ ಬೆಲೆ ತೆತ್ತಿದ್ದೇವೆ. ಎರಡನೆಯ ಅಲೆಯಲ್ಲಿ ನೇರವಾಗಿ ಅಥವಾ ಪರೋಕ್ಷವಾಗಿ ಸಂಕಷ್ಟ ಅನುಭವಿಸಿದ ಕುಟುಂಬ ಇದೆ ಎಂದು ಅನಿಸುತ್ತಿಲ್ಲ' ಎಂದು ಕೋರ್ಟ್, ಮೂರನೇ ಅಲೆಯ ಎಚ್ಚರಿಕೆ ನಡುವೆಯೂ ಜನರು ನಿರ್ಲಕ್ಷ್ಯ ವಹಿಸುತ್ತಿರುವುದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದೆ.
ರಾಜಧಾನಿಯಲ್ಲಿ ಪ್ರಕರಣಗಳ ಸಂಖ್ಯೆಯಲ್ಲಿ ತೀವ್ರ ಇಳಿಕೆಯಾದ ಹಿನ್ನೆಲೆಯಲ್ಲಿ, ಕೆಲವು ದಿನಗಳ ಹಿಂದಷ್ಟೇ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಪ್ರಕ್ರಿಯೆ ಆರಂಭಿಸಿದ್ದರು.