ಕೋವಿಶೀಲ್ಡ್‌ ಲಸಿಕೆ ಎಫೆಕ್ಟ್..! ಅಪಘಾತದಿಂದ ಹಾಸಿಗೆ ಹಿಡಿದಿದ್ದ ವ್ಯಕ್ತಿ ನಡೆದಾಡಲು ಆರಂಭಿಸಿದ..!

ಕೊರೊನಾ ನಿರೋಧಕ ಲಸಿಕಾ ಅಭಿಯಾನದ ಅಂಗವಾಗಿ ಕೆಲ ದಿನಗಳ ಹಿಂದೆ ಮುಂಡಾ ಅವರಿಗೆ ಕೋವಿಶೀಲ್ಡ್‌ ಲಸಿಕೆಯ ಮೊದಲ ಡೋಸ್ ನೀಡಲಾಯ್ತು. ಮೊದಲ ಡೋಸ್ ಪಡೆದ ಕೆಲ ದಿನಗಳಲ್ಲೇ ಮುಂಡಾ ಅವರು ಎಲ್ಲರಂತಾಗಿದ್ದಾರೆ..!

ಕೋವಿಶೀಲ್ಡ್‌ ಲಸಿಕೆ ಎಫೆಕ್ಟ್..! ಅಪಘಾತದಿಂದ ಹಾಸಿಗೆ ಹಿಡಿದಿದ್ದ ವ್ಯಕ್ತಿ ನಡೆದಾಡಲು ಆರಂಭಿಸಿದ..!
Linkup
ಬೊಕಾರೋ (): ಜಾರ್ಖಂಡ್ ರಾಜ್ಯದಲ್ಲಿ ಪವಾಡ ನಡೆದಿದೆ..! ಹೌದು..! ಇದನ್ನು ವೈದ್ಯಕೀಯ ರಂಗದ ಪವಾಡ ಅಂದ್ರೆ ಅಚ್ಚರಿಯೇನಲ್ಲ..! ಏಕೆಂದರೆ, ಇನ್ನೇನು ನನ್ನ ಜೀವನವೇ ಮುಗಿದೇ ಹೋಯ್ತು, ಹಾಸಿಗೆಯಿಂದ ಮೇಲೆ ಏಳೋಕೆ ಸಾಧ್ಯವೇ ಇಲ್ಲ ಎಂದುಕೊಂಡಿದ್ದ ವ್ಯಕ್ತಿಯೊಬ್ಬ, ಇದೀಗ ಎಲ್ಲರಂತೆ ಸರಾಗವಾಗಿ ಓಡಾಟ ನಡೆಸುವಂತಾಗಿದ್ದಾನೆ..! ಇದಕ್ಕೆಲ್ಲಾ ಕಾರಣವಾಗಿದ್ದು ಕೊರೊನಾ ನಿರೋಧಕ ..! ಇದು ಆಶ್ಚರ್ಯವಾದ್ರೂ ಸತ್ಯ..! ಜಾರ್ಖಂಡ್‌ನ ಬೊಕಾರೋ ಜಿಲ್ಲೆಯ ಕುಗ್ರಾಮವೊಂದರ ನಿವಾಸಿಯಾಗಿರುವ ದುಲರ್‌ಚಂದ್ ಮುಂಡಾ 5 ವರ್ಷಗಳ ಹಿಂದೆ ಅಪಘಾತಕ್ಕೆ ತುತ್ತಾಗಿದ್ದರು. ಅವರ ಬೆನ್ನು ಮೂಳೆಗೆ ಪೆಟ್ಟಾಗಿತ್ತು. ಹೀಗಾಗಿ, ಅವರು ಕಳೆದ 5 ವರ್ಷಗಳಿಂದ ಹಾಸಿಗೆ ಹಿಡಿದಿದ್ದರು. ಹಾಸಿಗೆಯಿಂದ ಮೇಲೆ ಏಳಲಾಗದ ಪರಿಸ್ಥಿತಿಯಲ್ಲಿ ಮುಂಡಾ ಅವರಿದ್ದರು. ಮಾತನಾಡಲೂ ಕಷ್ಟಪಡುತ್ತಿದ್ದರು. ಇದೀಗ ಮುಂಡಾ ಅವರಿಗೆ 55 ವರ್ಷ ವಯಸ್ಸು. ಕೊರೊನಾ ನಿರೋಧಕ ಲಸಿಕಾ ಅಭಿಯಾನದ ಅಂಗವಾಗಿ ಕೆಲ ದಿನಗಳ ಹಿಂದೆ ಮುಂಡಾ ಅವರಿಗೆ ಕೋವಿಶೀಲ್ಡ್‌ ಲಸಿಕೆಯ ನೀಡಲಾಯ್ತು. ಮೊದಲ ಡೋಸ್ ಪಡೆದ ಕೆಲ ದಿನಗಳಲ್ಲೇ ಮುಂಡಾ ಅವರು ಎಲ್ಲರಂತಾಗಿದ್ದಾರೆ..! ಹಾಸಿಗೆಯಿಂದ ಎದ್ದು ನಿಂತು ಎಲ್ಲರಂತೆ ನಡೆದಾಡುತ್ತಿದ್ದಾರೆ. ಸ್ಪಷ್ಟವಾಗಿ ಮಾತನಾಡಲು ಆರಂಭಿಸಿದ್ದಾರೆ. ಇದು ಲಸಿಕೆಯ ಅಡ್ಡ ಪರಿಣಾಮವಾದ್ರೂ, ಮುಂಡಾ ಅವರ ಪಾಲಿಗೆ ಉತ್ತಮ ಪರಿಣಾಮವಾಗಿ ಪರಿವರ್ತನೆಯಾಗಿದೆ..! ಜನವರಿ ನಾಲ್ಕರಂದು ಮುಂಡಾ ಅವರ ಗ್ರಾಮಕ್ಕೆ ಬಂದಿದ್ದ ಅಂಗನವಾಡಿ ಕಾರ್ಯಕರ್ತರು, ಕೋವಿಶೀಲ್ಡ್‌ ಲಸಿಕೆಯ ಮೊದಲ ಡೋಸ್ ನೀಡಿದ್ದರು. ಅದಾದ ಮಾರನೇ ದಿನವೇ ಮುಂಡಾ ಅವರು ಹಾಸಿಗೆಯಿಂದ ಎದ್ದು ನಡೆದಾಡಿದರಲ್ಲದೆ, ಸ್ಪಷ್ಟವಾಗಿ ಮಾತನಾಡತೊಡಗಿದರು..! ಇದನ್ನು ಕಂಡು ಕುಟುಂಬಸ್ಥರು ಸಂತಸಪಟ್ಟರು. ಕೂಡಲೇ ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಮಾಹಿತಿ ನೀಡಿದರು. ಇದೀಗ ಬೊಕಾರೋ ಜಿಲ್ಲೆಯ ಸಿವಿಲ್ ಆಸ್ಪತ್ರೆ ಸರ್ಜನ್ ಈ ವಿಚಾರದ ಬಗ್ಗೆ ಸಮಗ್ರ ತನಿಖೆ ನಡೆಸಲು ಮುಂದಾಗಿದ್ದಾರೆ. ಪವಾಡಸದೃಶವಾಗಿ ಗುಣಮುಖ ಆಗಿರುವ ಮುಂಡಾ ಅವರ ಆರೋಗ್ಯ ಸ್ಥಿತಿ ಹಾಗೂ ಲಸಿಕೆ ಪಡೆದ ಬಳಿಕ ಅವರ ದೇಹದಲ್ಲಿ ಆಗಿರುವ ಬದಲಾವಣೆಗಳ ಕುರಿತು ತನಿಖೆ ನಡೆಸಲು ವೈದ್ಯಕೀಯ ತಂಡವೊಂದನ್ನು ರಚನೆ ಮಾಡಲಾಗಿದ್ದು, ಈ ತಂಡದಲ್ಲಿ ಮೂವರು ತಜ್ಞ ವೈದ್ಯರಿದ್ಧಾರೆ ಎಂದು ಡಾ. ಕರ್ಕೆಟ್ಟಾ ಅವರು ತಿಳಿಸಿದ್ಧಾರೆ. ಜಾರ್ಖಂಡ್‌ ರಾಜ್ಯದ ಬೊಕಾರೋ ಜಿಲ್ಲೆಯ ಜಿಲ್ಲಾ ಕೇಂದ್ರದಿಂದ ಬರೋಬ್ಬರಿ 50 ಕಿ. ಮೀ. ದೂರದಲ್ಲಿ ಇರುವ ಸಲಾಗಡಿಯಾ ಎಂಬ ಹಳ್ಳಿಯಲ್ಲಿ ಮುಂಡಾ ಅವರು ನೆಲೆಸಿದ್ದು, ಇದು ಕುಗ್ರಾಮವಾಗಿದೆ. ಆಧುನಿಕ ಸೌಲಭ್ಯಗಳಿಲ್ಲದ ಹಾಗೂ ಅನಕ್ಷರಸ್ಥರೇ ತುಂಬಿರುವ ಗ್ರಾಮ ಇದಾಗಿದ್ದು, ಇದೀಗ ಮುಂಡಾ ಅವರು ಪವಾಡ ಸದೃಶ ರೀತಿಯಲ್ಲಿ ಆರೋಗ್ಯ ಸುಧಾರಣೆ ಕಂಡಿರೋದನ್ನು ಜನರು ದೇವರ ಪವಾಡ ಎಂದು ಭಾವಿಸಿ ಪೂಜೆ, ಪ್ರಾರ್ಥನೆಯಲ್ಲಿ ತೊಡಗಿದ್ದಾರೆ. ಒಟ್ಟಿನಲ್ಲಿ ಕೊರೊನಾ ಲಸಿಕೆಯಿಂದ ಆದ ಅಡ್ಡ ಪರಿಣಾಮ, ಮುಂಡಾ ಅವರ ಆರೋಗ್ಯಕ್ಕೆ ಉತ್ತಮ ಪರಿಣಾಮವಾಗಿ ಬದಲಾಗಿದೆ..!