ಅಯೋಧ್ಯೆಯ ರಾಮನಿಗೆ ಬರೋಬ್ಬರಿ 400 ಕೆ.ಜಿ ತೂಕದ ಬೀಗ : 30 ಕೆ.ಜಿಯ ಕೀ

2020 ರಲ್ಲಿ, ಅಯೋಧ್ಯೆಯಲ್ಲಿ ಶ್ರೀ ರಾಮ ಜನ್ಮಭೂಮಿ ಮಂದಿರ ನಿರ್ಮಾಣಕ್ಕೆ ಆಗಸ್ಟ್ 5 ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಶಂಕುಸ್ಥಾಪನೆ ಮಾಡಿದರು, ನಂತರ ರಾಮ ಮಂದಿರ ನಿರ್ಮಾಣ ಕಾರ್ಯವು ವೇಗವಾಗಿ ಪ್ರಾರಂಭವಾಯಿತು. ಈ ನಡುವೆ ದಂಪತಿಯೊಂದು ರಾಮನಿಗೆ ಬರೋಬ್ಬರಿ 400 ಕೆ.ಜಿ ತೂಕದ ಬೀಗ ತಯಾರಿಸಿದ್ದಾರೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಅಯೋಧ್ಯೆಯ ರಾಮನಿಗೆ ಬರೋಬ್ಬರಿ 400 ಕೆ.ಜಿ ತೂಕದ ಬೀಗ : 30 ಕೆ.ಜಿಯ ಕೀ
Linkup
ಬೆಂಗಳೂರು: ಅಯೋಧ್ಯೆಯ ಜನ್ಮಭೂಮಿ ಸ್ಥಳದಲ್ಲಿ ನಿರ್ಮಾಣವಾಗುತ್ತಿರುವ ಭವ್ಯ ರಾಮಮಂದಿರಕ್ಕೆ ಇದೀಗ ಬೃಹತ್‌ ಬೀಗವೊಂದು ಸಿದ್ಧವಾಗಿದೆ. ಉತ್ತರಪ್ರದೇಶದ ಆಲಿಘರ್‌ನ ಜಿಲ್ಲೆಯ ಸತ್ಯಪ್ರಕಾಶ ಮತ್ತು ರುಕ್ಮಿಣಿ ಶರ್ಮಾ ದಂಪತಿ 400 ಕೆ.ಜಿ ತೂಕದ ಬೀಗವೊಂದನ್ನು ಸಿದ್ಧಪಡಿಸಿದ್ದು, ಅಯೋಧ್ಯೆಯ ರಾಮಮಂದಿರಕ್ಕೆ ಅರ್ಪಣೆ ಮಾಡಲಿದ್ದಾರೆ. 10 ಅಡಿ ಉದ್ದದ ಈ ಬೀಗವನ್ನು ಸಿದ್ಧಪಡಿಸಲು ಈ ದಂಪತಿ ಸುಮಾರು 6 ತಿಂಗಳ ಸಮಯ ತೆಗೆದುಕೊಂಡಿದ್ದಾರೆ. ಹಿತ್ತಾಳೆಯಿಂದ ಮಾಡಿರುವ ಈ ತುಕ್ಕು ಹಿಡಿಯದಿರಲೆಂದು ಅದಕ್ಕೆ ಉಕ್ಕಿನ ಲೇಪನವನ್ನೂ ಮಾಡಲಾಗಿದೆ. ಅಲ್ಲದೇ ಬೀಗವನ್ನು ತೆರೆಯಲು 30 ಕೆ.ಜಿಯ ಕೀಯನ್ನು ಕೂಡ ಈ ದಂಪತಿ ತಯಾರಿಸಿದ್ದಾರೆ. , ಶ್ರೀ ರಾಮ ಜನ್ಮಭೂಮಿ ಟ್ರಸ್ಟ್‌ನಿಂದ ರಾಮ ಮಂದಿರ ನಿರ್ಮಾಣ ಕಾರ್ಯಕ್ಕೆ ಸಂಬಂಧಿಸಿದಂತೆ ವಿಶೇಷ ವೀಡಿಯೋವನ್ನು ಬಿಡುಗಡೆ ಮಾಡಲಾಗಿದೆ. ಈ ವೀಡಿಯೋದಲ್ಲಿ, ಅಡಿಪಾಯದ ನಂತರ ನಿರ್ಮಾಣ ಕಾರ್ಯಕ್ಕೆ ಸಂಬಂಧಿಸಿದ ಪ್ರತಿಯೊಂದು ಕ್ಷಣವನ್ನು ಬಹಳ ಸುಲಭವಾಗಿ ಚಿತ್ರಿಸಲಾಗಿದೆ. ಶ್ರೀರಾಮ ಜನ್ಮಭೂಮಿ ಟ್ರಸ್ಟ್ ಬಿಡುಗಡೆ ಮಾಡಿರುವ ವಿಡಿಯೋವನ್ನು 3ಡಿ ರೂಪದಲ್ಲಿ ಮಾಡಲಾಗಿದೆ. ಇದರಿಂದ ಪ್ರೇಕ್ಷಕರು ರಾಮಮಂದಿರ ನಿರ್ಮಾಣ ಕಾರ್ಯಕ್ಕೆ ಸಂಬಂಧಿಸಿದ ಪ್ರತಿಯೊಂದು ವಿಷಯವನ್ನು ಉತ್ತಮ ರೀತಿಯಲ್ಲಿ ಅರ್ಥಮಾಡಿಕೊಳ್ಳಬಹುದು. ಟ್ರಸ್ಟ್ ಬಿಡುಗಡೆ ಮಾಡಿದ 5 ನಿಮಿಷಗಳ 3D ವೀಡಿಯೋದಲ್ಲಿ ದೇವಾಲಯವು ಸಂಪೂರ್ಣವಾಗಿ ಪೂರ್ಣಗೊಂಡ ನಂತರ ಹೇಗಿರುತ್ತದೆ, ಹೊರಭಾಗ ಮತ್ತು ಪ್ರತಿಯೊಂದು ಆಂತರಿಕ ಭಾಗವು ಹೇಗಿರುತ್ತದೆ ಎಂಬುದರ ಎಲ್ಲಾ ದೃಶ್ಯಗಳನ್ನು ತೋರಿಸುತ್ತದೆ. ಇದರೊಂದಿಗೆ, ದೇವಾಲಯದ ಒಳಗೆ ಗೋಡೆಗಳು, ಛಾವಣಿಗಳು ಮತ್ತು ಕಂಬಗಳ ಮೇಲಿನ ನಖಾಸಿ ಮತ್ತು ಕಲಾಕೃತಿಗಳನ್ನು ಸಹ ಬಹಳ ಸೌಂದರ್ಯದಿಂದ ತೋರಿಸಲಾಗಿದೆ.