ಮೊದಲ ಮುಖಾಮುಖಿ 'ಕ್ವಾಡ್' ಸಮ್ಮೇಳನ: ಅಮೆರಿಕಕ್ಕೆ ತೆರಳಿದ್ದಾರೆ ಪ್ರಧಾನಿ ಮೋದಿ

ನಾಲ್ಕು ದೇಶಗಳ ನಾಯಕರ ಮೊದಲ ಖುದ್ದು 'ಕ್ವಾಡ್' ಸಮ್ಮೇಳನ ಸೆಪ್ಟೆಂಬರ್ 24ರಂದು ನಡೆಯಲಿದೆ. ಅಮೆರಿಕ ಅಧ್ಯಕ್ಷ ಜೋ ಬೈಡನ್ ಸಭೆಯ ಆತಿಥ್ಯ ವಹಿಸಲಿದ್ದು, ಪ್ರಧಾನಿ ನರೇಂದ್ರ ಮೋದಿ ವಾಷಿಂಗ್ಟನ್‌ಗೆ ತೆರಳಲಿದ್ದಾರೆ.

ಮೊದಲ ಮುಖಾಮುಖಿ 'ಕ್ವಾಡ್' ಸಮ್ಮೇಳನ: ಅಮೆರಿಕಕ್ಕೆ ತೆರಳಿದ್ದಾರೆ ಪ್ರಧಾನಿ ಮೋದಿ
Linkup
ಹೊಸದಿಲ್ಲಿ: 'ಕ್ವಾಡ್' ದೇಶಗಳಾದ , ಆಸ್ಟ್ರೇಲಿಯಾ, ಮತ್ತು ಜಪಾನ್‌ಗಳ ಮೊದಲ ಮುಖತಃ ಸಮ್ಮೇಳನದಲ್ಲಿ ಭಾಗವಹಿಸಲು ಪ್ರಧಾನಿ ಅವರು ಅಮೆರಿಕಕ್ಕೆ ತೆರಳಲಿದ್ದಾರೆ. ಮುಂದಿನ ವಾರ ನಡೆಯಲಿರುವ ಈ ಸಮ್ಮೇಳನದ ಅಧ್ಯಕ್ಷತೆಯನ್ನು ಅಮೆರಿಕ ಅಧ್ಯಕ್ಷ ಜೋ ಬೈಡನ್ ವಹಿಸಲಿದ್ದಾರೆ ಎಂದು ಕೇಂದ್ರ ಸರ್ಕಾರ ಖಚಿತಪಡಿಸಿದೆ. ಸೆಪ್ಟೆಂಬರ್ 24ರಂದು ವಾಷಿಂಗ್ಟನ್‌ನಲ್ಲಿ ಕ್ವಾಡ್ ದೇಶಗಳು ಮೊದಲ ಬಾರಿಗೆ ಖುದ್ದು ಮುಖಾಮುಖಿಯಾಗಲಿವೆ. ಪ್ರಧಾನಿ ನರೇಂದ್ರ ಮೋದಿ, ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್, ಜಪಾನ್ ಪ್ರಧಾನಿ ಯೊಶಿಹಿದೆ ಸುಗಾ ಮತ್ತು ಅಮೆರಿಕ ಅಧ್ಯಕ್ಷ ಜೋ ಬೈಡನ್ ಈ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ. ಮಾರ್ಚ್ 12ರಂದು ನಡೆದ ಮೊದಲ ಆನ್‌ಲೈನ್ ಸಭೆಯ ಬಳಿಕದ ಪ್ರಗತಿಗಳ ಪರಾಮರ್ಶೆಯನ್ನು ನಾಯಕರು ನಡೆಸಲಿದ್ದು, ಸಾಮಾನ್ಯ ಹಿತಾಸಕ್ತಿಗಳ ಕುರಿತಾದ ಪ್ರಾದೇಶಿಕ ವಿಚಾರಗಳ ಬಗ್ಗೆ ಚರ್ಚಿಸಲಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಹೇಳಿಕೆ ತಿಳಿಸಿದೆ. 'ಕೋವಿಡ್ 19 ಸಾಂಕ್ರಾಮಿಕವನ್ನು ನಿಯಂತ್ರಿಸುವ ಪ್ರಸ್ತುತದ ಪ್ರಯತ್ನಗಳ ಭಾಗವಾಗಿ, ಅವರು ಮಾರ್ಚ್ ತಿಂಗಳಲ್ಲಿ ಘೋಷಿಸಲಾದ ಕ್ವಾಡ್ ಲಸಿಕೆ ಯೋಜನೆಯನ್ನು ಪರಾಮರ್ಶಿಸಲಿದ್ದಾರೆ' ಎಂದು ಅದು ಹೇಳಿದೆ. 'ಗಂಭೀರ ಹಾಗೂ ಹೊಸ ತಂತ್ರಜ್ಞಾನಗಳು, ಸಂಪರ್ಕ ಮತ್ತು ಮೂಲಸೌಕರ್ಯ, ಸೈಬರ್ ಭದ್ರತೆ, ಸಾಗರ ಭದ್ರತೆ, ಮಾನವೀಯ ನೆರವು/ವಿಪತ್ತು ಪರಿಹಾರ, ಹವಾಮಾನ ವೈಪರೀತ್ಯ ಮತ್ತು ಶಿಕ್ಷಣದಂತಹ ಸಮಕಾಲೀನ ಜಾಗತಿಕ ವಿಚಾರಗಳ ಬಗ್ಗೆ ಕೂಡ ಅವರು ಅಭಿಪ್ರಾಯ ವಿನಿಮಯ ಮಾಡಿಕೊಳ್ಳಲಿದ್ದಾರೆ. ಈ ಸಮ್ಮೇಳನವು ನಾಯಕರ ನಡುವೆ ಮಾತುಕತೆ ಹಾಗೂ ಸಂವಾದಕ್ಕೆ ಮೌಲ್ಯಯುತ ಅವಕಾಶ ನೀಡಲಿದೆ. ಮುಕ್ತ, ತೆರೆದ ಹಾಗೂ ಒಳಗೊಳ್ಳುವ ಪ್ರದೇಶದ ಕುರಿತಾದ ತಮ್ಮ ದೃಷ್ಟಿಕೋನಗಳನ್ನು ಹಂಚಿಕೊಳ್ಳಲಿದ್ದಾರೆ' ಎಂದು ತಿಳಿಸಿದೆ. ಅಫ್ಘಾನಿಸ್ತಾನದಲ್ಲಿ ಆತಂಕದ ನಡುವೆ ಸೇನಾಪಡೆಗಳನ್ನು ಹಿಂದಕ್ಕೆ ಪಡೆದುಕೊಳ್ಳುವ ಮೂಲಕ ಅರಾಜಕತೆಗೆ ಕಾರಣವಾದ ಜೋ ಬೈಡನ್ ಅವರ ವರ್ಚಸ್ಸು ಕುಂದಿರುವ ಸಂದರ್ಭದಲ್ಲಿ ಈ ಸಭೆ ಆಯೋಜಿಸಲಾಗಿದೆ. ಅಫ್ಘಾನಿಸ್ತಾನದಲ್ಲಿನ ಪರಿಸ್ಥಿತಿ ಹಾಗೂ ಅದು ಜಾಗತಿಕವಾಗಿ ಮುಖ್ಯವಾಗಿ ಭಾರತದ ಮೇಲೆ ಬೀರಲಿರುವ ಪರಿಣಾಮ, ಅಪಾಯಗಳ ಬಗ್ಗೆ ಪ್ರಮುಖವಾಗಿ ಚರ್ಚೆ ನಡೆಯುವ ನಿರೀಕ್ಷೆಯಿದೆ. '21ನೇ ಶತಮಾನದ ಸವಾಲುಗಳನ್ನು ಬಹು ದೇಶೀಯ ಸಂಯೋಜನೆ ಮೂಲಕ ಎದುರಿಸುವುದು ಸೇರಿದಂತೆ ಇಂಡೋ ಪೆಸಿಫಿಕ್‌ನಲ್ಲಿ ತೊಡಗಿಸಿಕೊಳ್ಳುವುದರ ಕುರಿತಾದ ಬೈಡನ್-ಹ್ಯಾರಿಸ್ ಆಡಳಿತದ ಆದ್ಯತೆಯನ್ನು ಕ್ವಾಡ್ ನಾಯಕರಿಗೆ ಆತಿಥ್ಯ ನೀಡುವುದು ಬಿಂಬಿಸುತ್ತದೆ' ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಜೆನ್ ಸಾಕಿ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಪ್ರಧಾನಿ ಮೋದಿ ಭಾಷಣಕ್ವಾಡ್ ಸಮ್ಮೇಳನದ ಮರುದಿನ, ಸೆಪ್ಟೆಂಬರ್ 25ರಂದು ಪ್ರಧಾನಿ ನರೇಂದ್ರ ಮೋದಿ ಅವರು ನ್ಯೂಯಾರ್ಕ್‌ನಲ್ಲಿ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಾತನಾಡಲಿದ್ದಾರೆ. 'ಕೋವಿಡ್ 19ರಿಂದ ಚೇತರಿಸಿಕೊಳ್ಳುವ ಭರವಸೆಯೊಂದಿಗೆ ಸ್ಥಿತಿಸ್ಥಾಪಕತ್ವ ಸ್ಥಾಪಿಸುವುದು, ಸುಸ್ಥಿರತೆ ಮರು ನಿರ್ಮಾಣ, ಗ್ರಹದ ಅಗತ್ಯಗಳಿಗೆ ಸ್ಪಂದಿಸುವುದು, ಜನರ ಹಕ್ಕುಗಳನ್ನು ಗೌರವಿಸುವುದು, ಮತ್ತು ವಿಶ್ವಸಂಸ್ಥೆಯ ಪುನಶ್ಚೇತನ' - ಇದು ಈ ವರ್ಷದ ಸಾಮಾನ್ಯ ಚರ್ಚೆಯ ವಿಷಯವಾಗಿದೆ.