ಅಂಬೇಡ್ಕರ್ ಸಂಸ್ಕೃತವನ್ನು ರಾಷ್ಟ್ರ ಭಾಷೆಯನ್ನಾಗಿ ನೋಡಲು ಬಯಸಿದ್ದರು: ಸಿಜೆಐ!

ಸಂವಿಧಾನ ಶಿಲ್ಪಿ ಬಾಬಾಸಾಹೇಬ್ ಅಂಬೇಡ್ಕರ್ ಸಂಸ್ಕೃತ ಭಾಷೆಯನ್ನು, ರಾಷ್ಟ್ರ ಭಾಷೆಯನ್ನಾಗಿ ಪರಿಗಣಿಸುವಂತೆ ಸಂವಿಧಾನ ರಚನಾ ಸಭೆಗೆ ಸಲಹೆ ನೀಡಿದ್ದರು ಎಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್‌ಎ ಬೊಬ್ಡೆ ಅಭಿಪ್ರಾಯಪಟ್ಟಿದ್ದಾರೆ.

ಅಂಬೇಡ್ಕರ್ ಸಂಸ್ಕೃತವನ್ನು ರಾಷ್ಟ್ರ ಭಾಷೆಯನ್ನಾಗಿ ನೋಡಲು ಬಯಸಿದ್ದರು: ಸಿಜೆಐ!
Linkup
ಹೊಸದಿಲ್ಲಿ: ಸಂವಿಧಾನ ಶಿಲ್ಪಿ ಬಾಬಾಸಾಹೇಬ್ ಅಂಬೇಡ್ಕರ್ ಭಾಷೆಯನ್ನು, ರಾಷ್ಟ್ರ ಭಾಷೆಯನ್ನಾಗಿ ಪರಿಗಣಿಸುವಂತೆ ಸಂವಿಧಾನ ರಚನಾ ಸಭೆಗೆ ಸಲಹೆ ನೀಡಿದ್ದರು ಎಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಅಭಿಪ್ರಾಯಪಟ್ಟಿದ್ದಾರೆ. ನಿನ್ನೆ(ಏ.14-ಬುಧವಾರ)ನಾಗ್ಪುರದಲ್ಲಿರುವ ಮಹಾರಾಷ್ಟ್ರ ಕಾನೂನು ವಿಶ್ವವಿಶ್ವವಿದ್ಯಾಲಯದ ಆಡಳಿತ ಕಚೇರಿ ಉದ್ಘಾಟನಾ ಸಮಾರಂಭ ಉದ್ದೇಶಿಸಿ ಮಾತನಾಡಿದ ಸಿಜೆಐ ಎಸ್‌ಎ ಬೊಬ್ಡೆ, ಅವರಿಗೆ ಸಂಸ್ಕೃತ ಭಾಷೆ ಮೇಲೆ ವಿಶೇಷ ಒಲವಿತ್ತು ಎಂದು ಹೇಳಿದ್ದಾರೆ. ಸಂಸ್ಕೃತವನ್ನು ರಾಷ್ಟ್ರ ಭಾಷೆಯನ್ನಾಗಿ ಪರಿಗಣಿಸುವಂತೆ ಕೋರಿ ಅಂಬೇಡ್ಕರ್ ವಿಜ್ಞಾನಪನಾ ಪತ್ರವನ್ನು ರಚಿಸಿದ್ದರು. ಇದಕ್ಕೆ ಸ್ವತಃ ಅಂಬೇಡ್ಕರ್ ಮತ್ತು ಕೆಲವು ಮುಸ್ಲಿಂ ಮೌಲ್ವಿಗಳು ಹಾಗೂ ಹಿಂದೂ ಪಂಡಿತರು ಸಹಿ ಮಾಡಿದ್ದರು. ಆದರೆ ಈ ಪ್ರಸ್ತಾವನೆ ಸಂವಿಧಾನ ರಚನಾ ಸಭೆಯಲ್ಲಿ ಮಂಡನೆಯಾಗಲಿಲ್ಲವೇಕೆ ಎಂಬುದು ತಮಗೆ ತಿಳಿದಿಲ್ಲ ಎಂದು ಬೊಬ್ಡೆ ನುಡಿದಿದ್ದಾರೆ. ದಕ್ಷಿಣ ಭಾರತದಲ್ಲಿ ಹಿಂದಿ ಹೇರಿಕೆಗೆ ಹಾಗೂ ಉತ್ತರ ಭಾರತದಲ್ಲ ಇತಮಿಳು ಹೇರಿಕೆಗೆ ಭಾರೀ ವಿರೋಧವಿದೆ. ಆದರೆ ಎರಡೂ ಭಾಗಗಳಲ್ಲಿ ಸಂಸ್ಕೃತವನ್ನು ಗೌರವದಿಂದ ಕಾಣಲಾಗುತ್ತದೆ. ಇದೇ ಕಾರಣಕ್ಕೆ ಸಂಸ್ಕೃತ ರಾಷ್ಟ್ರ ಭಾಷೆಯಾಗಿದ್ದರೆ ನಮಗೆ ಬಾಷಾ ಗೊಂದಲಗಳು ಎದುರಾಗುತ್ತಿರಲಿಲ್ಲ ಎಂದು ಬೊಬ್ಡೆ ಅಭಿಪ್ರಾಯಪಟ್ಟರು. ಭಾರತದ ನ್ಯಾಯಶಾಸ್ತ್ರ ಪಶ್ಚಿಮದ ಅರಿಸ್ಟಾಟಲ್ ಮತ್ತು ಇತರ ತತ್ವಜ್ಞಾನಿಗಳು ನೀಡಿದ ಕಾನೂನುಶಾಸ್ತ್ರಗಳಿಗಿಂತ ಯಾವುದರಲ್ಲೂ ಕಡಿಮೆಯಿಲ್ಲ. ನಾವು ಪುರಾತನ ಭಾರತೀಯ ತತ್ವಶಾಸ್ತ್ರಜ್ಞರ ಕೊಡುಗೆಯಬನ್ನು ಮರೆಯಬಾರದು ಎಂದು ಬೊಬ್ಡೆ ಇದೇ ವೇಳೆ ಮನವಿ ಮಾಡಿದರು. ವಿವಿಡಯೋ ಕಾನ್ಫರೆನ್ಸ್‌ನಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ, ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು. ಇದೇ ಏ.24ರಂದು ಎಸ್‌ಎ ಬೊಬ್ಡೆ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಹುದ್ದೆಯಿಂದ ನಿವೃತ್ತಿಯಾಗಲಿದ್ದು, ಎನ್‌ವಿ ರಮಣ ಅವರು ನೂತನ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.