'KGF-2' ಖಳನಾಯಕ 'ಅಧೀರ'ನ ಹೊಸ ಪೋಸ್ಟರ್‌ ರಿಲೀಸ್; ಫ್ಯಾನ್ಸ್‌ಗೆ ಥ್ರಿಲ್ ನೀಡಿದ ಸಂಜು!

'ಕೆಜಿಎಫ್: ಚಾಪ್ಟರ್ 2' ಚಿತ್ರದಲ್ಲಿ ಸಂಜಯ್ ದತ್ ನಟಿಸಲಿದ್ದಾರೆ ಎಂದಾಗಲೇ ಫ್ಯಾನ್ಸ್ ಥ್ರಿಲ್ ಆಗಿದ್ದರು. ಕಳೆದ ವರ್ಷ ರಿಲೀಸ್ ಆಗಿದ್ದ ಅವರ ಅಧೀರ ಪಾತ್ರದ ಒಂದು ಫೋಸ್ಟರ್ ಸಖತ್ ವೈರಲ್ ಆಗಿತ್ತು. ಇದೀಗ ಮತ್ತೊಂದು ಪೋಸ್ಟರ್ ರಿಲೀಸ್ ಆಗಿದೆ.

'KGF-2' ಖಳನಾಯಕ 'ಅಧೀರ'ನ ಹೊಸ ಪೋಸ್ಟರ್‌ ರಿಲೀಸ್; ಫ್ಯಾನ್ಸ್‌ಗೆ ಥ್ರಿಲ್ ನೀಡಿದ ಸಂಜು!
Linkup
ಯಶ್ ನಟನೆಯ 'ಕೆಜಿಎಫ್ ಚಾಪ್ಟರ್-2' ಚಿತ್ರದಲ್ಲಿ ಬಾಲಿವುಡ್‌ ನಟ ಸಂಜಯ್ ದತ್ 'ಅಧೀರ' ಅನ್ನೋ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಈಗಾಗಲೇ ಆ ಪಾತ್ರದ ಬಗ್ಗೆ ದೊಡ್ಡ ಕ್ರೇಜ್ ಹುಟ್ಟಿಕೊಂಡಿದೆ. ಈ ಹಿಂದೆ ರಿಲೀಸ್ ಮಾಡಿದ್ದ ಒಂದು ಪೋಸ್ಟರ್ 'ಅಧೀರ' ಪಾತ್ರ ಎಂಥ ಪವರ್ ಫುಲ್ ಪಾತ್ರ ಅನ್ನೋದರ ಬಗ್ಗೆ ಸುಳಿವು ನೀಡಿತ್ತು. ಅಂದಹಾಗೆ, ಇಂದು (ಜು.29) ಅವರ ಹುಟ್ಟುಹಬ್ಬ. ಆ ಹಿನ್ನೆಲೆಯಲ್ಲಿ 'ಅಧೀರ' ಪಾತ್ರದ ಮತ್ತೊಂದು ಖಡಕ್ ಪೋಸ್ಟರ್ ಅನ್ನು ಚಿತ್ರತಂಡ ರಿಲೀಸ್ ಮಾಡಿದೆ. 'ಯುದ್ಧ ಇರುವುದು ಪ್ರಗತಿಗಾಗಿ..' ಎಂದ ಅಧೀರ! ರಿಲೀಸ್ ಆಗಿರುವ ಫೋಸ್ಟರ್ ಸಖತ್ ರಗಡ್ ಆಗಿದ್ದು, ಸಿನಿಪ್ರಿಯರಿಗೆ ಸಖತ್ ಇಷ್ಟವಾಗಿದೆ. ಪೋಸ್ಟರ್ ಅನ್ನು ಶೇರ್ ಮಾಡಿಕೊಂಡಿರುವ ನಿರ್ದೇಶಕ ಪ್ರಶಾಂತ್ ನೀಲ್, 'ಯುದ್ಧ ಇರುವುದು ಪ್ರಗತಿಗಾಗಿ. ನನ್ನ ಈ ಮಾತನ್ನು ರಣಹದ್ದುಗಳು ಕೂಡ ಒಪ್ಪಿಕೊಳ್ಳುತ್ತವೆ..' ಎಂದು ಬರೆದುಕೊಂಡಿದ್ದಾರೆ. ಜೊತೆಗೆ 'ಕೆಜಿಎಫ್' ತಂಡವು ಸಂಜಯ್‌ಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದೆ. ಥ್ಯಾಂಕ್ಯೂ ಎಂದ ಸಂಜಯ್ಹುಟ್ಟುಹಬ್ಬಕ್ಕೆ ವಿಶೇಷ ಪೋಸ್ಟರ್ ರಿಲೀಸ್ ಮಾಡಿದ್ದಕ್ಕೆ ಖುಷಿಯಾದ ನಟ ಸಂಜಯ್‌ ದತ್, ಇಡೀ ತಂಡಕ್ಕೆ ಧನ್ಯವಾದಗಳನ್ನು ತಿಳಿಸಿದ್ದಾರೆ. 'ನನಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದ ಎಲ್ಲರಿಗೂ ಧನ್ಯವಾದಗಳು. '' ಚಿತ್ರದಲ್ಲಿ ಕೆಲಸ ಮಾಡಿದ್ದು ಅದ್ಭುತ ಅನುಭವ ನೀಡಿದೆ. ನೀವೆಲ್ಲರೂ ಈ ಸಿನಿಮಾಗಾಗಿ ಬಹಳ ಸಮಯದಿಂದ ಕಾಯುತ್ತಿದ್ದೀರಿ ಎಂದು ನನಗೆ ಗೊತ್ತಿದೆ ಮತ್ತು ಆ ಕಾಯುವಿಕೆಗೆ ಒಂದು ಅರ್ಥ ಸಿಗಲಿದೆ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ' ಎಂದಿದ್ದಾರೆ ಅವರು. ಇನ್ನು, ಸಂಜುಗೆ ಅನಾರೋಗ್ಯದ ಕಾರಣದಿಂದ ಕಳೆದ ವರ್ಷ ಕೆಜಿಎಫ್ 2 ಶೂಟಿಂಗ್ ಮುಗಿಯುವುದು ತಡವಾಗಿತ್ತು. ಅವರು ಗುಣಮುಖರಾದ ಬಳಿಕ ಡಿಸೆಂಬರ್‌ನಲ್ಲಿ ಅವರ ಪಾಲಿನ ದೃಶ್ಯಗಳ ಚಿತ್ರೀಕರಣವನ್ನು ಅವರು ಮುಗಿಸಿಕೊಟ್ಟಿದ್ದರು. ತೆರೆಮೇಲೆ ಯಶ್ ಮತ್ತು ಅಧೀರ ಕಾದಾಡುವ ದೃಶ್ಯಗಳನ್ನು ನೋಡುವುದಕ್ಕೆ ಸಿನಿಪ್ರಿಯರು ಕಾತರದಿಂದ ಕಾದಿದ್ದಾರೆ. ವಿಜಯ್ ಕಿರಗಂದೂರು ನಿರ್ಮಾಣದ ಈ ಸಿನಿಮಾಕ್ಕೆ ರವಿ ಬಸ್ರೂರ್ ಸಂಗೀತ ನೀರ್ದೇಶನ ಮಾಡಿದ್ದಾರೆ. ಯಶ್‌ಗೆ ನಾಯಕಿಯಾಗಿ ಶ್ರೀನಿಧಿ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ಬಾಲಿವುಡ್ ನಟಿ ರವೀನಾ ಟಂಡನ್, ರಮೀಕಾ ಸೇನ್ ಎಂಬ ಪ್ರಧಾನ ಮಂತ್ರಿ ಪಾತ್ರದಲ್ಲಿ ನಟಿಸಿದ್ದಾರೆ.