ಕೋವಿಡ್‌ 2ನೇ ಅಲೆ ನಡುವೆಯೂ ಕರೆನ್ಸಿ ಚಲಾವಣೆ 29 ಲಕ್ಷ ಕೋಟಿ ರೂ.ಗೆ ಏರಿಕೆ!

ದೇಶದಲ್ಲಿ ಚಲಾವಣೆಯಲ್ಲಿರುವ ಕರೆನ್ಸಿಗಳ ಮೌಲ್ಯ 29 ಲಕ್ಷ ಕೋಟಿ ರೂ.ಗಳಿಗೆ ಏರಿಕೆಯಾಗಿದೆ ಎಂದು ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾದ ವರದಿ ತಿಳಿಸಿದೆ. ಹಿಂದಿನ ವಾರಕ್ಕೆ ಹೋಲಿಸಿದರೆ 7,352 ಕೋಟಿ ರೂ.ಗೆ ಏರಿಕೆಯಾಗಿದೆ.

ಕೋವಿಡ್‌ 2ನೇ ಅಲೆ ನಡುವೆಯೂ ಕರೆನ್ಸಿ ಚಲಾವಣೆ 29 ಲಕ್ಷ ಕೋಟಿ ರೂ.ಗೆ ಏರಿಕೆ!
Linkup
ಹೊಸದಿಲ್ಲಿ: ದೇಶದಲ್ಲಿ ಚಲಾವಣೆಯಲ್ಲಿರುವ ಕರೆನ್ಸಿಗಳ ಮೌಲ್ಯ 29 ಲಕ್ಷ ಕೋಟಿ ರೂ.ಗಳಿಗೆ ಏರಿಕೆಯಾಗಿದೆ ಎಂದು ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾದ ವರದಿ ತಿಳಿಸಿದೆ. ಆರ್‌ಬಿಐ ಪ್ರಕಾರ 2021ರ ಏಪ್ರಿಲ್‌ 23ರ ವೇಳೆಗೆ ಚಲಾವಣೆಯಲ್ಲಿರುವ ಕರೆನ್ಸಿಗಳ ಒಟ್ಟು ಮೌಲ್ಯ 29,07,067 ಕೋಟಿ ರೂ.ಗಳಿಗೆ ವೃದ್ಧಿಸಿದೆ. ಇದಕ್ಕೂ ಹಿಂದಿನ ವಾರಕ್ಕೆ ಹೋಲಿಸಿದರೆ 7,352 ಕೋಟಿ ರೂ.ಗೆ ಏರಿಕೆಯಾಗಿದೆ. ಏಪ್ರಿಲ್‌ನ ಮೊದಲ 4 ವಾರಗಳಲ್ಲಿ ಜನತೆ 57,800 ಕೋಟಿ ರೂ. ಹಣವನ್ನು ಹಿಂತೆಗೆದುಕೊಂಡಿದ್ದರು. ಕೋವಿಡ್‌-19 ಬಿಕ್ಕಟ್ಟಿನ ನಂತರ ಜನತೆ ವ್ಯಾಪಕವಾಗಿ ನಗದು ಹಿಂತೆಗೆದುಕೊಳ್ಳುತ್ತಿರುವ ಪ್ರವೃತ್ತಿ ವಿಶ್ವಾದ್ಯಂತ ಕಂಡುಬರುತ್ತಿದೆ. ಸ್ವಾರಸ್ಯವೇನೆಂದರೆ, ಡಿಜಿಟಲ್‌ ಅಥವಾ ಆನ್‌ಲೈನ್‌ ಹಣಕಾಸು ವರ್ಗಾವಣೆಗಳೂ ಪ್ರತಿ ತಿಂಗಳು ಏರಿಕೆಯಾಗುತ್ತಿವೆ. ಯುಪಿಐ ಮೂಲಕ 2.3 ಶತಕೋಟಿ ವರ್ಗಾವಣೆಗಳು ನಡೆದಿವೆ. ಇದರ ಮೌಲ್ಯ 5 ಲಕ್ಷ ಕೋಟಿ ರೂ. ಡೆಬಿಟ್‌ ಕಾರ್ಡ್‌ ಬಳಕೆಯೂ ಹೆಚ್ಚಳವಾಗಿದೆ.