ಯುಎಎನ್‌ ಜತೆ ಆಧಾರ್‌ ಲಿಂಕ್‌ ಮಾಡಲು ಆಗಸ್ಟ್‌ 31 ಕಡೆಯ ದಿನ

ಇಪಿಎಫ್‌ಒ ನೀಡುವ ಯುಎಎನ್‌ ಮತ್ತು ಆಧಾರ್‌ ಜತೆ ಲಿಂಕ್‌ ಕಲ್ಪಿಸಲು 2021ರ ಆಗಸ್ಟ್‌ 31 ಕೊನೆಯ ದಿನವಾಗಿದೆ. ಲಿಂಕ್‌ ಕಲ್ಪಿಸುವುದು ಕಡ್ಡಾಯವಾಗಿದ್ದು, ಹೇಗೆ ಲಿಂಕ್‌ ಮಾಡುವುದು ಎನ್ನುವುದನ್ನು ಇಲ್ಲಿ ನೀಡಲಾಗಿದೆ.

ಯುಎಎನ್‌ ಜತೆ ಆಧಾರ್‌ ಲಿಂಕ್‌ ಮಾಡಲು ಆಗಸ್ಟ್‌ 31 ಕಡೆಯ ದಿನ
Linkup
ಹೊಸದಿಲ್ಲಿ: ಇಪಿಎಫ್‌ಒ ನೀಡುವ (ಸಾರ್ವತ್ರಿಕ ಖಾತೆ ಸಂಖ್ಯೆ) ಮತ್ತು ಜತೆ ಲಿಂಕ್‌ ಕಲ್ಪಿಸಲು 2021ರ ಆಗಸ್ಟ್‌ 31 ಕೊನೆಯ ದಿನವಾಗಿದೆ. ಲಿಂಕ್‌ ಕಲ್ಪಿಸುವುದು ಕಡ್ಡಾಯವಾಗಿದೆ. ತಪ್ಪಿದರೆ ಮುಂಬರುವ ದಿನಗಳಲ್ಲಿ ನಿಮ್ಮ ಕಂಪನಿಯು ಅಥವಾ ಉದ್ಯೋಗದಾತರು ಮಾಸಿಕ ನೀಡುವ ಪಾಲಿನ ಮೊತ್ತವು ಇಪಿಎಫ್‌ ಖಾತೆಗೆ ಜಮೆಯಾಗುವುದಿಲ್ಲ. ಸರಕಾರವು ಯುಎಎನ್‌ ಜತೆ ಆಧಾರ್‌ ಲಿಂಕ್‌ ಅನ್ನು ಕಡ್ಡಾಯಗೊಳಿಸಿರುವುದರಿಂದ ಉದ್ಯೋಗದಾತರಿಗೆ ಉದ್ಯೋಗಿಗಳ ರಿಟರ್ನ್‌ ಚಲನ್‌ (ಇಸಿಆರ್‌) ಭರ್ತಿಗೊಳಿಸಿ ಉದ್ಯೋಗಿಗಳ ಇಪಿಎಫ್‌ ಖಾತೆಗೆ ಹಣ ಠೇವಣಿ ಇಡಲು ಸಾಧ್ಯವಾಗುತ್ತದೆ. ಸಾಮಾಜಿಕ ಭದ್ರತೆ ಕಾಯಿದೆ 2020ರ 142ನೇ ನಿಯಮಾವಳಿಯ ಪ್ರಕಾರ, ಹಾಲಿ ಇಪಿಎಫ್‌ ಸದಸ್ಯರು ಆಧಾರ್‌ ಮೂಲಕ ತಮ್ಮ ಗುರುತನ್ನು ದೃಢಪಡಿಸಬೇಕಾಗುತ್ತದೆ. ನಂತರವಷ್ಟೇ ಪಿಂಚಣಿ, ಗ್ರಾಚ್ಯುಯಿಟಿ ಮತ್ತು ಇತರ ಸೌಲಭ್ಯಗಳನ್ನು ಇಪಿಎಫ್‌ನಿಂದ ತೆಗೆದುಕೊಳ್ಳಬಹುದು. ಸರಳವಾಗಿ ಹೇಳುವುದಿದ್ದರೆ, ಇನ್ನು ಮುಂದೆ ಇಪಿಎಫ್‌ ಯೋಜನೆಗೆ ಸೇರಲು ಮತ್ತು ಅದರಿಂದ ಹಣ ಹಿಂಪಡೆಯಲು ಆಧಾರ್‌ ಕಡ್ಡಾಯ. ಉದ್ಯೋಗದಾತರಿಗೂ ಯುಎಎನ್‌-ಆಧಾರ್‌ ಲಿಂಕ್‌ ಕಲ್ಪಿಸದಿದ್ದರೆ ಹಣ ಜಮೆ ಮಾಡಲು ಸಾಧ್ಯವಾಗುವುದಿಲ್ಲ. ಯುಎಎನ್‌-ಆಧಾರ್‌ ಲಿಂಕ್‌ ಪರಿಶೀಲನೆ ಹೇಗೆ? ಹೆಜ್ಜೆ-1: ಇಪಿಎಫ್‌ಒದ ವೆಬ್‌ಸೈಟ್‌ ಲಿಂಕ್‌ ಅನ್ನು ಕ್ಲಿಕ್ಕಿಸಿ: ಹೆಜ್ಜೆ-2: ಯುಎಎನ್‌ ಮತ್ತು ಪಾಸ್‌ ವರ್ಡ್‌ ಒತ್ತಿ ಲಾಗಿನ್‌ ಆಗಿ. ಹೆಜ್ಜೆ-3: ಲಾಗಿನ್‌ ಆದ ನಂತರ 'ಮ್ಯಾನೇಜ್‌' ಟ್ಯಾಬ್‌ ಅಡಿಯಲ್ಲಿರುವ 'ಕೆವೈಸಿ' ಆಯ್ಕೆಯನ್ನು ಒತ್ತಿ. ಸ್ಕ್ರೀನ್‌ನಲ್ಲಿ ವೆರಿಫೈಡ್‌ ಡಾಕ್ಯುಮೆಂಟ್‌ ಟ್ಯಾಬ್‌ನಲ್ಲಿ ಆಧಾರ್‌ ಸಂಖ್ಯೆ ಕಾಣಿಸುತ್ತಿದ್ದರೆ ಯುಎಎನ್‌-ಆಧಾರ್‌ ಲಿಂಕ್‌ ಆಗಿದೆ ಎಂದರ್ಥ. ವೆರಿಫೈಡ್‌ ಡಾಕ್ಯುಮೆಂಟ್ಸ್‌ ಟ್ಯಾಬ್‌ ಅಡಿಯಲ್ಲಿ ಆಧಾರ್‌ ಸಂಖ್ಯೆ ಕಾಣಿಸದಿದ್ದರೆ ನೀವು ಯುಎಎನ್‌ ಮತ್ತು ಆಧಾರ್‌ ಲಿಂಕ್‌ ಮಾಡಬೇಕಾಗುತ್ತದೆ. ಯುಎಎನ್‌-ಆಧಾರ್‌ ಲಿಂಕ್‌ ಮಾಡುವುದು ಹೇಗೆ? ಇಪಿಎಫ್‌ಒ ಸದಸ್ಯರ ಸೇವಾ ವೆಬ್‌ಪೋರ್ಟಲ್‌ ಮೂಲಕ, ಉಮಾಂಗ್‌ ಆ್ಯಪ್‌, ಇಪಿಎಫ್‌ಒ ಪೋರ್ಟಲ್‌ನಲ್ಲಿಇ-ಕೆವೈಸಿ ಮೂಲಕ ಯುಎಎನ್‌-ಆಧಾರ್‌ ಲಿಂಕ್‌ ಕಲ್ಪಿಸಬಹುದು. ಹೆಜ್ಜೆ1: ಇಪಿಎಫ್‌ಒ ಸದಸ್ಯರ ಸೇವಾ ವೆಬ್‌ಪೋರ್ಟಲ್‌ನ ಲಿಂಕ್‌ನಲ್ಲಿ ಲಾಗಿನ್‌ ಆಗಿ. ( ) ಹೆಜ್ಜೆ 2: ಕೆವೈಸಿ ಆಯ್ಕೆ ಒತ್ತಿ ಹೆಜ್ಜೆ 3: ಕೆವೈಸಿಗೆ ಸೇರಿಸಲು ಆಧಾರ್‌ ಆಯ್ಕೆ ಒತ್ತಿ ಹೆಜ್ಜೆ 4: ಆಧಾರ್‌ ಸಂಖ್ಯೆಯನ್ನು ನಮೂದಿಸಿ ಹೆಜ್ಜೆ 5: 'ಸೇವ್‌' ಬಟನ್‌ ಒತ್ತಿ. ಸೇವ್‌ ಆದ ನಂತರ 'ಪೆಂಡಿಂಗ್‌ ಕೆವೈಸಿ'ಯಲ್ಲಿ ಇರುತ್ತದೆ. ನಿಮ್ಮ ಉದ್ಯೋಗದಾತರು ಯುಎಎನ್‌-ಆಧಾರ್‌ ಲಿಂಕ್‌ಗೆ ಅನುಮೋದನೆ ನೀಡಬೇಕಾಗುತ್ತದೆ. ನಿಮ್ಮ ಉದ್ಯೋಗದಾತರು ಅಪ್ರೂವ್‌ ಮಾಡಿದ ನಂತರ ಇಪಿಎಫ್‌ಒ ಮೂಲಕ ಲಿಂಕಿಂಗ್‌ ಪ್ರಕ್ರಿಯೆ ಪೂರ್ಣವಾಗುತ್ತದೆ.