ಕಳೆದ ಚುನಾವಣೆಯಲ್ಲಿ ಅಧಿಕಾರ ಕಳೆದುಕೊಳ್ಳಲು ಕಾರಣ ಏನೆಂದು ತಿಳಿಸಿದ ಸಿದ್ದರಾಮಯ್ಯ

ತಾವು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ 4.5 ಕೋಟಿ ಜನರಿಗೆ ಉಚಿತ ಅಕ್ಕಿ ವಿತರಣೆ ಮಾಡಿದ್ದರೂ, ಅದರ ಬಗ್ಗೆ ಸರಿಯಾಗಿ ಮನವರಿಕೆ ಮಾಡದೆ ಇರುವುದರಿಂದ ಕಾಂಗ್ರೆಸ್ ಅಧಿಕಾರದಿಂದ ವಂಚಿತವಾಗಬೇಕಾಯಿತು ಎಂದು ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಕಳೆದ ಚುನಾವಣೆಯಲ್ಲಿ ಅಧಿಕಾರ ಕಳೆದುಕೊಳ್ಳಲು ಕಾರಣ ಏನೆಂದು ತಿಳಿಸಿದ ಸಿದ್ದರಾಮಯ್ಯ
Linkup
ಬೆಂಗಳೂರು: 'ಕಾಂಗ್ರೆಸ್‌ ಸರಕಾರ ಅಧಿಕಾರದಲ್ಲಿದ್ದ ಅವಧಿಯಲ್ಲಿ4.5ಕೋಟಿ ಜನರಿಗೆ ನೀಡಿದ ಉಚಿತ ಅಕ್ಕಿ ವಿತರಣೆ ಯೋಜನೆಯನ್ನು ಜನರಿಗೆ ತಿಳಿಸದ ಹಿನ್ನೆಲೆ ಪಕ್ಷ ಅಧಿಕಾರದಿಂದ ವಂಚಿತವಾಗಬೇಕಾಯಿತೆಂದು ವಿಪಕ್ಷ ನಾಯಕ ಬೇಸರ ವ್ಯಕ್ತಪಡಿಸಿದರು. ದೇವನಹಳ್ಳಿಯಲ್ಲಿ ಭಾನುವಾರ ನಡೆದ ಗಾಂಧಿ ನಡಿಗೆ ಕಾರ್ಯಕ್ರಮದಲ್ಲಿ ಮಾತನಾಡಿ.''ಚಿಕ್ಕಬಳ್ಳಾಪುರ, ಕಾಂಗ್ರೆಸ್‌ ಕಾರ್ಯಕರ್ತರು ಅಂದಿನ ನಮ್ಮ ಸರಕಾರದ ಯೋಜನೆಗಳ ಬಗ್ಗೆ ಮನೆಮನೆಗೆ ಮುಟ್ಟಿಸಲಿಲ್ಲ. ಇನ್ನು ನರೇಂದ್ರ ಮೋದಿ ಮಾಡಿರುವುದನ್ನು ಎಲ್ಲಿ ಹೇಳುತ್ತೀರಾ,'' ಎಂದು ಕ್ಲಾಸ್‌ ತೆಗೆದುಕೊಂಡರು. ಮಹಿಳಾ ವಿರೋಧಿ ಮಾತೆತ್ತಿದರೆ ಬಿಜೆಪಿಗರೆಲ್ಲಾ ವೀರ ಸಾವರ್ಕರ್‌ ಹೆಸರು ಕೂಗುತ್ತಾರೆ. ಆದರೆ, ಅದೇ ಸಾವರ್ಕರ್‌ ಬ್ರಿಟಿಷರ ವಿರುದ್ಧ ಹೋರಾಡುವುದಿಲ್ಲವೆಂದು ಮುಚ್ಚಳಿಕೆ ಬರೆದುಕೊಟ್ಟರು. ಬಿಜೆಪಿ ಸರಕಾರ ಮಹಿಳೆಯರು, ಯುವಕರ ವಿರೋಧಿಯಾಗಿದೆ. ಬಿಜೆಪಿ ಮುಖಂಡ ಅನಂತಕುಮಾರ್‌ ಹೆಗಡೆ ಸಂವಿಧಾನ ಬದಲಾವಣೆ ಮಾತಾಡಿದರೂ ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಸಂವಿಧಾನ ಉಳಿವಿಗಾಗಿ ಕಾಂಗ್ರೆಸ್‌ ಮಾತ್ರ ಕಾರ್ಯನಿರ್ವಹಿಸುತ್ತಿದೆ,''ಎಂದರು. 'ದೇಶದ ಜನರಿಗೆ ಮೋದಿಯೆಂಬ ಭ್ರಮೆ ಹುಟ್ಟುಹಾಕಿದರು. ಇಂದಿಗೂ ಅಚ್ಛೇ ದಿನ್‌ ಬಂದಿಲ್ಲ. ಮೋದಿ 2 ಕೋಟಿ ಉದ್ಯೋಗ ಸೃಷ್ಟಿಸುತ್ತೇನೆಂದರು. ಉದ್ಯೋಗ ಕೇಳುವ ಯುವಕರಿಗೆ ಮೋದಿ ಪಕೋಡ ಮಾರಾಟ ಮಾಡಲು ಹೇಳುತ್ತಿದ್ದಾರೆ. ಆದರೆ, ಪ್ರಸ್ತುತ ಎಣ್ಣೆ ದರ 200ರೂ. ತಲುಪಿ ಪಕೋಡ ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ,'' ಎಂದು ವ್ಯಂಗ್ಯವಾಡಿದರು. ಸೆಲ್ಫಿಗೆ ಮುಗಿಬಿದ್ದ ಮಹಿಳಾಮಣಿಗಳು ವೇದಿಕೆ ಮೇಲೆ ಸಿದ್ದರಾಮಯ್ಯನವರ ಆಗಮನವಾಗುತ್ತಿದ್ದಂತೆ ಮಹಿಳಾ ಕಾರ್ಯಕರ್ತರು ಸೆಲ್ಫಿಗೆ ಮುಗಿಬಿದ್ದರು. ಸಿದ್ದರಾಮಯ್ಯನವರ ಹಿಂಬದಿ ನಿಂತು ಫೋಟೋಗಳಿಗೆ ಫೋಸ್‌ ನೀಡುತ್ತಿದ್ದರು. ಕಾರ್ಯಕರ್ತರನ್ನು ವೇದಿಕೆಯಿಂದ ಕೆಳಗಿಳಿಸಲು ಉಳಿದ ಮುಖಂಡರು ಹರಸಾಹಸ ಪಟ್ಟರು. ದಿಲ್ಲಿಗೆ ಹೈಕಮಾಂಡ್‌ ಭೇಟಿ ಹಿನ್ನೆಲೆಯಲ್ಲಿಗಾಂಧಿ ನಡಿಗೆ ಕಾರ್ಯಕ್ರಮದಲ್ಲಿಪಾಲ್ಗೊಳ್ಳದೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ದಿಲ್ಲಿಗೆ ಪ್ರಯಾಣ ಬೆಳೆಸಿದ್ದಾರೆ. ಬಿಜೆಪಿ ಅಧಿಕಾರವಧಿಯಲ್ಲಿ ವಸತಿ ಯೋಜನೆಗಳನ್ನೇ ನೀಡಿಲ್ಲ. ಆದರೆ, ಕಾಂಗ್ರೆಸ್‌ ಅಧಿಕಾರದಲ್ಲಿದ್ದಾಗ 15 ಲಕ್ಷ ಮನೆಗಳನ್ನು ನಿರ್ಮಾಣ ಮಾಡಿಕೊಡಲಾಗಿದೆ. ಜತೆಗೆ, ಜನವಿರೋಧಿ, ರೈತ ವಿರೋಧಿ ಕಾಯ್ದೆಗಳನ್ನು ಹೇರುತ್ತಿರುವ ಬಿಜೆಪಿ ಸರಕಾರದ ವಿರುದ್ಧ ನಡೆಯುತ್ತಿರುವ ರೈತರ ಬಂದ್‌ಗೆ ಸಂಪೂರ್ಣ ಬೆಂಬಲವಿದೆಯೆಂದು ಡಿಕೆ ಶಿವಕುಮಾರ್ ಹೇಳಿದರು. ಕಾರ್ಯಕ್ರಮದಲ್ಲಿ ಮಾಜಿ ಸಿಎಂ ವೀರಪ್ಪ ಮೊಯ್ಲಿ, ಮಾಜಿ ಸಚಿವ ರಾಮಲಿಂಗಾರೆಡ್ಡಿ, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್‌ ಸೇರಿದಂತೆ ಮತ್ತಿತರ ಮುಖಂಡರು ಉಪಸ್ಥಿತರಿದ್ದರು.