ಬನ್ನೇರುಘಟ್ಟದಲ್ಲಿ ಹೊಸ ಆಕರ್ಷಣೆ..! ಇನ್ನೆರಡು ತಿಂಗಳಲ್ಲಿ ಚಿರತೆ ಸಫಾರಿ ಆರಂಭ..!

ಉದ್ಯಾನದ ಕರಡಿ ಸಫಾರಿ ಬಳಿ ಚಿರತೆ ಸಫಾರಿ ಸಿದ್ಧವಾಗುತ್ತಿದೆ. ಸುಮಾರು 50 ಎಕರೆ ಜಾಗದಲ್ಲಿ 3 ಕೋಟಿ ರೂ. ವೆಚ್ಚದಲ್ಲಿ ಚಿರತೆ ಸಫಾರಿ ನಿರ್ಮಾಣ ಮಾಡಲಾಗುತ್ತಿದೆ. ಉದ್ಯಾನ ವನದಲ್ಲಿರುವ ಚಿರತೆಗಳನ್ನು ಹಾಗೂ ಇಲ್ಲೇ ಹುಟ್ಟಿರುವ ಮರಿಗಳನ್ನು ಸಫಾರಿಯಲ್ಲಿ ಬಿಡಲಾಗುವುದು

ಬನ್ನೇರುಘಟ್ಟದಲ್ಲಿ ಹೊಸ ಆಕರ್ಷಣೆ..! ಇನ್ನೆರಡು ತಿಂಗಳಲ್ಲಿ ಚಿರತೆ ಸಫಾರಿ ಆರಂಭ..!
Linkup
ಬನ್ನೇರುಘಟ್ಟ (): ಬನ್ನೇರು ಘಟ್ಟದಲ್ಲಿ ಇನ್ನೆರಡು ತಿಂಗಳಲ್ಲಿ ಚಿರತೆ ಆರಂಭವಾಗುವ ನಿರೀಕ್ಷೆ ಇದೆ. ಉದ್ಯಾನ ವನದ ಸಫಾರಿ ವಿಭಾಗದಲ್ಲಿ ಸದ್ಯ ಹುಲಿ, ಸಿಂಹ, ಆನೆ, ಕರಡಿಗಳನ್ನು ಮಾತ್ರ ನೋಡಬಹುದಾಗಿದೆ. ಸಫಾರಿ ಹೊಸ ಆಕರ್ಷಣೆಯಾಗಿ ಸೇರ್ಪಡೆಯಾಗಲಿದೆ. ಚಿರತೆ ಸಫಾರಿಗಾಗಿ ಮೂರು ವರ್ಷಗಳಿಂದ ಕೆಲಸ ನಡೆಯುತ್ತಿದ್ದು, ಶೇ.80ರಷ್ಟು ಕಾಮಗಾರಿ ಮುಗಿದಿದೆ. ಕಾಮಗಾರಿ ಪೂರ್ಣಗೊಂಡ ಬಳಿಕ ಪ್ರಾಯೋಗಿಕವಾಗಿ ಒಂದಷ್ಟು ದಿನ ಸಫಾರಿಯಲ್ಲಿ ವಾಹನಗಳನ್ನು ಕಳುಹಿಸಿ ಪರಿಶೀಲನೆ ನಡೆಸಲಾಗುವುದು. ತೊಡಕುಗಳು ಕಂಡು ಬಂದಲ್ಲಿ ಸರಿಪಡಿಸಿ ಬಳಿಕ ಪ್ರವಾಸಿಗರಿಗೆ ವೀಕ್ಷಣೆಗೆ ಅನುವು ಮಾಡಿಕೊಡಲು ಉದ್ದೇಶಿಸಲಾಗಿದೆ. 'ಉದ್ಯಾನದ ಕರಡಿ ಸಫಾರಿ ಬಳಿ ಚಿರತೆ ಸಫಾರಿ ಸಿದ್ಧವಾಗುತ್ತಿದೆ. ಸುಮಾರು 50 ಎಕರೆ ಜಾಗದಲ್ಲಿ 3 ಕೋಟಿ ರೂ. ವೆಚ್ಚದಲ್ಲಿ ಚಿರತೆ ಸಫಾರಿ ನಿರ್ಮಾಣ ಮಾಡಲಾಗುತ್ತಿದೆ. ಉದ್ಯಾನ ವನದಲ್ಲಿರುವ ಚಿರತೆಗಳನ್ನು ಹಾಗೂ ಇಲ್ಲೇ ಹುಟ್ಟಿರುವ ಮರಿಗಳನ್ನು ಸಫಾರಿಯಲ್ಲಿ ಬಿಡಲಾಗುವುದು' ಎಂದು ಬನ್ನೇರು ಘಟ್ಟ ಜೈವಿಕ ಉದ್ಯಾನ ವನದ ಕಾರ್ಯ ನಿರ್ವಾಹಕ ಅಧಿಕಾರಿ ವನಶ್ರೀ ವಿಪಿನ್‌ ಸಿಂಗ್‌ ತಿಳಿಸಿದರು. 'ಚಿರತೆ ಸಫಾರಿ ಕಾಮಗಾರಿ ನಡೆಯುತ್ತಿದೆ. ಚೈನ್‌ ಮೆಷ್‌ ಕೆಲಸ ಆಗಿದೆ. ರಸ್ತೆ ಕೆಲಸಗಳು ನಡೆಯುತ್ತಿವೆ. ಚಿರತೆ ಮರ ಏರಿ ಅಲ್ಲಿಂದ ಹೊರಗೆ ಜಿಗಿಯುವ ಸಾಧ್ಯತೆಯೂ ಇರುವುದರಿಂದ ಮೆಶ್‌ನ ಮೇಲ್ಬಾಗದಲ್ಲಿ ತಗಡಿನ ಶೀಟ್‌ ಅಳವಡಿಸಲಾಗಿದೆ. ಇದರಿಂದ ಚಿರತೆ ಹೊರ ಬರುವ ಸಾಧ್ಯತೆ ಇಲ್ಲ. ಪ್ರವಾಸಿಗರ ಸುರಕ್ಷತೆಗೆ ಆದ್ಯತೆ ಕೊಡಲಾಗಿದೆ' ಎಂದು ಬನ್ನೇರುಘಟ್ಟ ಜೈವಿಕ ಉದ್ಯಾನದ ಕಾರ್ಯ ನಿರ್ವಾಹಕ ಅಧಿಕಾರಿ ವನಶ್ರೀ ವಿಪಿನ್‌ ಸಿಂಗ್‌ ತಿಳಿಸಿದ್ದಾರೆ. 'ಚಿರತೆ ಸಫಾರಿ ಸಿದ್ಧಗೊಳ್ಳುತ್ತಿರುವುದು ಸಂತಸದ ವಿಷಯ. ಚಿರತೆ ಸಫಾರಿ ಆರಂಭವಾದ ಬಳಿಕ ಮತ್ತೊಮ್ಮೆ ಬರಲು ಉದ್ದೇಶಿಸಿದ್ದೇನೆ. ಚಿರತೆಗಳು ಸ್ವಚ್ಛಂದವಾಗಿ ಓಡಾಡಿಕೊಂಡಿರುವುದನ್ನು ನೋಡಲು ಕಾತರನಾಗಿದ್ದೇನೆ' ಎಂದು ಪ್ರವಾಸಿಗ ಆನಂದ್ ಸಂತಸ ವ್ಯಕ್ತಪಡಿಸಿದ್ದಾರೆ. ನ್ಯಾಷನಲ್ ಪಾರ್ಕ್ ವೈಶಿಷ್ಠ್ಯತೆ: ರಾಷ್ಟ್ರೀಯ ಉದ್ಯಾನ ವನವು ಬೆಂಗಳೂರಿನಿಂದ 22 ಕಿ. ಮೀ ದೂರದಲ್ಲಿದೆ. ಶ್ರೀಮಂತ ನೈಸರ್ಗಿಕ ತಾಣವಾದ ಇದು, 25 ಸಾವಿರ ಎಕರೆ ಪ್ರದೇಶದಲ್ಲಿ ಹರಡಿಕೊಂಡಿದೆ. ಗುಡ್ಡಗಾಡು ಆವೃತ ಪ್ರದೇಶವಾದ ಕಾರಣ, ಪ್ರಾಣಿಗಳು ನೈಸರ್ಗಿಕವಾಗಿ ಓಡಾಟ ನಡೆಸಲು, ಜೀವಿಸಲು ಸೂಕ್ತವಾದ ವಾತಾವರಣ ಕಲ್ಪಿಸಿದೆ. ಅಷ್ಟೇ ಅಲ್ಲ, ಪ್ರವಾಸಿಗರನ್ನೂ ಆಕರ್ಷಿಸುತ್ತಿದೆ. ಬನ್ನೇರು ಘಟ್ಟದಲ್ಲಿ ಹುಲಿ ಹಾಗೂ ಸಿಂಹಧಾಮ ಇದೆ. ಕೆಎಸ್‌ಟಿಡಿಸಿಯು ಇದರ ನಿರ್ವಹಣೆ ಮಾಡುತ್ತಿದೆ. ಈ ಉದ್ಯಾನದ ಹುಲಿ ಸಂರಕ್ಷಣಾ ಕೇಂದ್ರವು ಕೇಂದ್ರ ಅರಣ್ಯ ಇಲಾಖೆಯಿಂದಲೂ ಗುರುತಿಸಲ್ಪಟ್ಟಿದೆ. ಸಮುದ್ರ ಮಟ್ಟದಿಂದ ಸುಮಾರು ಸರಾಸರಿ 1500 ಮೀಟರ್ ಎತ್ತರದಲ್ಲಿ ಇರುವ ಈ ಪ್ರದೇಶವು ಹಿತಕರ ವಾತಾವರಣ ಹೊಂದಿದೆ. ಸೆಪ್ಟೆಂಬರ್ ತಿಂಗಳಲ್ಲಿ ಪ್ರವಾಸಿಗರು ಇಲ್ಲಿಗೆ ಹೆಚ್ಚಾಗಿ ಆಗಮಿಸುತ್ತಾರೆ. ಮಂಗಳವಾರ ಹೊರತುಪಡಿಸಿ ವಾರದ ಎಲ್ಲಾ ದಿನವೂ ಉದ್ಯಾನ ತೆರೆದಿರುತ್ತದೆ.