ಕೇರಳದ ಮೊದಲ ಕಂದಾಯ ಸಚಿವೆ, ಹಿರಿಯ ನಾಯಕಿ ಗೌರಿ ಅಮ್ಮ ನಿಧನ

ಕೇರಳದ ಮೊದಲ ಕಮ್ಯುನಿಸ್ಟ್ ಸರ್ಕಾರದಲ್ಲಿ ಪ್ರಪ್ರಥಮ ಕಂದಾಯ ಸಚಿವೆಯಾಗಿ ಭೂ ಸುಧಾರಣೆ ಮಸೂದೆ ಜಾರಿಗೆ ತಂದಿದ್ದ ಜೆಎಸ್ಎಸ್ ಪಕ್ಷದ ನಾಯಕಿ ಗೌರಿ ಅಮ್ಮಾ ಮಂಗಳವಾರ ವಯೋಸಹಜ ಕಾಯಿಲೆಗಳಿಂದಾಗಿ ನಿಧನರಾದರು.

ಕೇರಳದ ಮೊದಲ ಕಂದಾಯ ಸಚಿವೆ, ಹಿರಿಯ ನಾಯಕಿ ಗೌರಿ ಅಮ್ಮ ನಿಧನ
Linkup
ತಿರುವನಂತಪುರಂ: ಕೇರಳದ ಪ್ರಥಮ ಕಂದಾಯ ಸಚಿವೆ ಮತ್ತು ಜೆಎಸ್ಎಸ್ ನಾಯಕಿ ಕೆಆರ್ ತಿರುವನಂತಪುರಂನ ಆಸ್ಪತ್ರೆಯಲ್ಲಿ ಮಂಗಳವಾರ ನಿಧನರಾದರು. ಕೆಲವು ದಿನಗಳ ಹಿಂದಷ್ಟೇ 102ನೇ ಜನ್ಮದಿನ ಆಚರಿಸಿಕೊಂಡಿದ್ದ ಅವರು, ವಯೋಸಹಜ ಕಾಯಿಲೆಗಳಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಜನಾಧಿಪತ್ಯ ಸಂರಕ್ಷಣಾ ಸಮಿತಿಯ (ಜೆಎಸ್ಎಸ್) ರಾಜ್ಯ ಪ್ರಧಾನ ಕಾರ್ಯದರ್ಶಿ ಸ್ಥಾನದಿಂದ ಇತ್ತೀಚೆಗಷ್ಟೇ ಅವವರು ಕೆಳಗಿಳಿದಿದ್ದರು. 1994ರಲ್ಲಿ ಪಕ್ಷ ಸ್ಥಾಪನೆಯಾದ ಸಂದರ್ಭದಿಂದಲೂ ಅವರು ಈ ಹುದ್ದೆಯಲ್ಲಿದ್ದರು. 1994ರಲ್ಲಿ ಗೌರಿ ಅವರನ್ನು ಉಚ್ಚಾಟನೆ ಮಾಡಿದ ಬಳಿಕ ಜೆಎಸ್ಎಸ್ ಪಕ್ಷ ಸ್ಥಾಪಿಸಲಾಗಿತ್ತು. ಕೇರಳದಲ್ಲಿ ಇಎಂಎಸ್ ನಂಬೂದರಿಪಾಡ್ ನೇತೃತ್ವದಲ್ಲಿ ಮೊದಲ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ಕಂದಾಯ ಸಚಿವರಾಗಿ ಕೆಲಸ ಮಾಡಿದ್ದರು. 1957ರಲ್ಲಿ ಅವರು ಕ್ರಾಂತಿಕಾರಕ ಭೂ ಸುಧಾರಣಾ ಮಸೂದೆಯನ್ನು ಪರಿಚಯಿಸಿದ್ದರು. 1957, 1967, 1980 ಮತ್ತು 1987ರಲ್ಲಿ ಸಿಪಿಎಂ ಸರ್ಕಾರ ಅಧಿಕಾರದಲ್ಲಿದ್ದಾಗ ಅವರು ಸಚಿವೆಯಾಗಿದ್ದರು. 2001-2006ರವರೆಗೂ ಕಾಂಗ್ರೆಸ್ ನೇತೃತ್ವದ ಸರ್ಕಾರದಲ್ಲಿಯೂ ಕೃಷಿ ಸಚಿವೆಯಾಗಿದ್ದರು. 1987ರಲ್ಲಿ ಮಹಿಳಾ ಆಯೋಗ ಮಸೂದೆಯ ಕರಡು ರೂಪಿಸಿ ಮಂಡಿಸುವುದರಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ರಾಜಕಾರಣದಲ್ಲಿ ಅತಿ ದೀರ್ಘಾವಧಿ ಸೇವೆ ಸಲ್ಲಿಸಿದವರಲ್ಲಿ ಒಬ್ಬರಾದ ಅವರು, ಮಹಿಳೆಯರಿಗೆ ರಾಜಕೀಯ ಸ್ಥಾನಮಾನಗಳು ಸಿಗುವುದು ಕಷ್ಟಕರವಾಗಿದ್ದ ಸಮಯದಲ್ಲಿ, ಚಕ್ಕ ವಯಸ್ಸಿನಲ್ಲಿಯೇ ರಾಜಕೀಯ ಪ್ರವೇಶಿಸಿದ್ದರು. ಅಳಪ್ಪುಳ ಜಿಲ್ಲೆಯ ಚೆರ್ತಲಾದಲ್ಲಿ ಜನಿಸಿದ ಗೌರಿ ಅಮ್ಮ, ಅನೇಕ ಚಳವಳಿಗಳಲ್ಲಿ ಭಾಗವಹಿಸಿ ಜೈಲು ಸೇರಿದ್ದರು. 1952 ಮತ್ತು 1954ರಲ್ಲಿ ಭಾರಿ ಬಹುಮತದೊಂದಿಗೆ ತಿರವಂಕೂರು ಕೌನ್ಸಿಲ್‌ಗೆ ಆಯ್ಕೆಯಾಗಿದ್ದರು.