ಕಾರ್ಮಿಕರೆ ಗುಳೆ ಹೋಗದಿರಿ! ರಾಜ್ಯಗಳೇ ಲಾಕ್‌ಡೌನ್‌ ಹೇರದಿರಿ! ಮೋದಿ ಹೇಳಿದ 5 ಅಂಶಗಳಿವು!

ಕೊರೊನಾ ಮಹಾಮಾರಿ ದೇಶದಲ್ಲಿ ಆತಂಕದ ಅಲೆ ಎಬ್ಬಿಸಿದೆ. ನಿಮ್ಮ ಮನೆಯ ಸದಸ್ಯನಾಗಿ ನಾನು ನಿಮ್ಮ ದುಃಖವನ್ನು ಹಂಚಿಕೊಳ್ಳುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ಸಾಂತ್ವನ ಹೇಳಿದರು.

ಕಾರ್ಮಿಕರೆ ಗುಳೆ ಹೋಗದಿರಿ! ರಾಜ್ಯಗಳೇ ಲಾಕ್‌ಡೌನ್‌ ಹೇರದಿರಿ! ಮೋದಿ ಹೇಳಿದ 5 ಅಂಶಗಳಿವು!
Linkup
ಹೊಸದಿಲ್ಲಿ: ಕೊರೊನಾ ಮಹಾಮಾರಿ ದೇಶದಲ್ಲಿ ಆತಂಕದ ಅಲೆ ಎಬ್ಬಿಸಿದೆ. ನಿಮ್ಮ ಮನೆಯ ಸದಸ್ಯನಾಗಿ ನಾನು ನಿಮ್ಮ ದುಃಖವನ್ನು ಹಂಚಿಕೊಳ್ಳುತ್ತೇನೆ ಎಂದು ಪ್ರಧಾನಿ ದೇಶದ ಜನತೆಗೆ ಸಾಂತ್ವನ ಹೇಳಿದರು. ಮಂಗಳವಾರ ರಾತ್ರಿ 8:45ಕ್ಕೆ ಸರಿಯಾಗಿ ದೇಶವನ್ನುದ್ದೇಶಿಸಿ ಮಾತನಾಡಿದ ನರೇಂದ್ರ ಮೋದಿ, ಕೊರೊನಾ ವಿರುದ್ಧ ಹೋರಾಡಲು ದೇಶದ ಜನತೆಗೆ ಧೈರ್ಯ ತುಂಬಿದರು. ಕೋವಿಡ್‌-19 ನಿಯಂತ್ರಣಕ್ಕೆ ಕೇಂದ್ರ ಸರಕಾರ ಯಾವೆಲ್ಲ ಕ್ರಮಗಳನ್ನು ತೆಗೆದುಕೊಂಡಿದೆ ಎಂಬ ಕುರಿತು ದೇಶದ ಜನತೆಗೆ ತಿಳಿಸಿದರು. ಜತೆಗೆ ರಾಜ್ಯ ಸರಕಾರಗಳು ಹಾಗೂ ದೇಶದ ಜನತೆಗೆ ಮಹತ್ವದ ಸಲಹೆಗಳನ್ನು ನೀಡಿದರು. ಪ್ರಧಾನಿ ಮೋದಿ ಅವರ ಭಾಷಣದ 5 ಪ್ರಮುಖ ಅಂಶಗಳು ಹೀಗಿವೆ. 1)ಲಾಕ್‌ಡೌನ್‌ ಕಟ್ಟಕಡೆಯ ಅಸ್ತ್ರವಾಗಲಿ ಯಾವ ಕಾರಣಕ್ಕೂ ಲಾಕ್‌ಡೌನ್‌ ಹೇರಬೇಡಿ ಎಂದು ಪ್ರಧಾನಿ ಮೋದಿ ರಾಜ್ಯಗಳಿಗೆ ಕರೆ ನೀಡಿದರು. ಮೈಕ್ರೋ ಕಂಟೇನ್ಮೆಂಟ್‌ಗೆ ರಾಜ್ಯಗಳಿಗೆ ಸಲಹೆ ಕೊಟ್ಟರು. ಇಂದಿನ ಪರಿಸ್ಥಿತಿಯಲ್ಲಿ ದೇಶವನ್ನು ಲಾಕ್‌ಡೌನ್‌ನಿಂದ ಪಾರು ಮಾಡಿ. ಲಾಕ್‌ಡೌನ್‌ ಏನಿದ್ದರೂ ಕಟ್ಟಕಡೆಯ ಅಸ್ತ್ರವಾಗಬೇಕು. ಯಾವ ಕಾರಣಕ್ಕೂ ಲಾಕ್‌ಡೌನ್‌ ಜಾರಿಗೆ ಅವಕಾಶ ಮಾಡಿಕೊಡಬೇಡಿ ಎಂದು ದೇಶದ ಜನತೆಗೆ ಮನವಿ ಮಾಡಿಕೊಂಡಿದ್ದಾರೆ. 2) ಕಾರ್ಮಿಕರು ಗುಳೆ ಹೋಗಬೇಡಿ ದೇಶದ ಜನತೆಯ ಪ್ರಾಣ ಉಳಿಸುವುದಷ್ಟೇ ನಮ್ಮ ಗುರಿ. ರಾಜ್ಯಗಳ ಜತೆ ಕೈಜೋಡಿಸಿ ತ್ವರಿತ ಗತಿಯಲ್ಲಿ ಲಸಿಕೆ ಪೂರೈಸುತ್ತಿದ್ದೇವೆ. ದಯಮಾಡಿ ಕಾರ್ಮಿಕರು ಗುಳೆ ಹೋಗಬೇಡಿ. ದೇಶದಲ್ಲೇ ಎಲ್ಲೇ ಇದ್ದರೂ ಅಲ್ಲೇ ಲಸಿಕೆ ಪಡೆಯಿರಿ. ಕೊರೊನಾ ಮಹಾಮಾರಿಯನ್ನು ನಾವು ಹಿಮ್ಮೆಟ್ಟಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಶ್ರಮಿಕ ವರ್ಗಕ್ಕೆ ಮನವಿ ಮಾಡಿಕೊಂಡರು. 3) ಆಕ್ಸಿಜನ್‌ ಉತ್ಪಾದನೆ ಹೆಚ್ಚಿಸಿದ್ದೇವೆ ದೇಶದಲ್ಲಿ ಆಕ್ಸಿಜನ್‌ ಕೊರತೆ ಎದುರಿಸುತ್ತಿದ್ದೇವೆ. ಆಕ್ಸಿಜನ್‌ ಉತ್ಪಾದನೆ ಮತ್ತು ಪೂರೈಕೆ ಹೆಚ್ಚು ಶ್ರಮವಹಿಸುತ್ತಿದ್ದೇವೆ. ದೇಶದಲ್ಲಿ ಕೊರೊನ ವ್ಯಾಕ್ಸಿನ್‌ ಉತ್ಪಾದನೆ ಹೆಚ್ಚಳ ಮಾಡಿದ್ದೇವೆ. ಎಂತಹ ಸಂದರ್ಭದಲ್ಲೂ ಧೈರ್ಯ ಕಳೆದುಕೊಳ್ಳಬಾರದು ಎಂದು ದೇಶದ ಜನತೆಗೆ ಧೈರ್ಯ ತುಂಬಿದರು. 4) ಲಸಿಕೆ ಉತ್ಫಾದನೆಯಲ್ಲೂ ಹೆಚ್ಚಳ ವಿಜ್ಞಾನಿಗಳಿಂದ ಅಲ್ಪಾವಧಿಯಲ್ಲಿ ಲಸಿಕೆ ಅಭಿವೃದ್ಧಿ ಮಾಡಲಾಗಿದೆ. ದೇಶದಲ್ಲಿ ಪ್ರಸ್ತುತ ಎರಡು ದೇಶೀಯ ಲಸಿಕೆಗಳನ್ನು ಬಳಸಲಾಗುತ್ತಿದೆ. ಲಸಿಕೆ ಉತ್ಪಾದನೆ ಹೆಚ್ಚಳಕ್ಕೆ ಎಲ್ಲ ಫಾರ್ಮಸಿಗಳ ಜತೆ ಚರ್ಚೆ ನಡೆಸಲಾಗಿದೆ. ಲಸಿಕೆ ಹೆಚ್ಚಳ ಜತೆಗೆ ಆಸ್ಪತ್ರೆಗಳಲ್ಲಿ ಬೆಡ್‌ ಕೊರತೆ ನೀಗಿಸಲು ಕ್ರಮ ಕೈಗೊಳ್ಳಲಾಗಿದೆ. ಭಾರತದಲ್ಲಿ ಅತಿ ಕಡಿಮೆ ದರದಲ್ಲಿ ಲಸಿಕೆ ಲಭ್ಯವಾಗುತ್ತಿದೆ. ಸರಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಲಸಿಕೆ ಲಭ್ಯವಿದೆ. ಅಲ್ಲದೆ ಭಾರತದ ಲಸಿಕೆ ಇಡೀ ವಿಶ್ವದಲ್ಲಿ ಮಾನ್ಯತೆ ಪಡೆದಿದೆ ಎಂದು ಹೇಳಿದರು. 5) ಯುವಕರಿಗೆ ಕರೆ ಕೊರೊನಾ ನಿಯಂತ್ರಣಕ್ಕೆ ಯುವಕರು ಕೈಜೋಡಿಸಬೇಕು. ಸಣ್ಣ ಸಣ್ಣ ತಂಡ ಮಾಡಿಕೊಂಡು ಕೊರನಾ ನಿರ್ಮೂಲನೆಗೆ ಮುಂದಾಗಬೇಕು ಎಂದು ದೇಶದ ಯುವ ಜನತೆಗೆ ಕರೆ ನೀಡಿದ್ದಾರೆ.