ಅಮೆರಿಕ ಮೊದಲು: ಭಾರತಕ್ಕೆ ಲಸಿಕೆ ಕಚ್ಚಾ ವಸ್ತು ರಫ್ತು ನಿಷೇಧಕ್ಕೆ ಬೈಡನ್ ಸರಕಾರದ ಸಮರ್ಥನೆ!
ಅಮೆರಿಕ ಮೊದಲು: ಭಾರತಕ್ಕೆ ಲಸಿಕೆ ಕಚ್ಚಾ ವಸ್ತು ರಫ್ತು ನಿಷೇಧಕ್ಕೆ ಬೈಡನ್ ಸರಕಾರದ ಸಮರ್ಥನೆ!
ಪುಣೆಯ ಸೀರಂ ಇನ್ಸ್ಟಿಟ್ಯೂಟ್ ಸೇರಿದಂತೆ ಹಲವು ಸಂಸ್ಥೆಗಳು ಕೋವಿಡ್ ಲಸಿಕೆಯ ಕಚ್ಚಾ ವಸ್ತುಗಳ ರಫ್ತಿಗೆ ಒತ್ತಾಯಿಸಿವೆ. ಹೀಗಿದ್ದರೂ, ಪ್ರಯೋಜನವಾಗಿಲ್ಲ. ''ಅಮೆರಿಕವು ಮೊದಲು ತನ್ನ ಜನತೆಯ ಆರೋಗ್ಯ ರಕ್ಷಣೆಗೆ ಬದ್ಧವಾಗಿದೆ. ಎರಡನೆಯದಾಗಿ ಜಗತ್ತಿನ ಬೇರಾವುದೇ ದೇಶಕ್ಕಿಂತ ಮಿಗಿಲಾಗಿ ಅಮೆರಿಕನ್ನರು ಕೋವಿಡ್-19 ಹೊಡೆತಕ್ಕೆ ಸಿಲುಕಿದ್ದಾರೆ. 5.5 ಲಕ್ಷಕ್ಕೂ ಹೆಚ್ಚು ಮಂದಿ ಅಸುನೀಗಿದ್ದಾರೆ'' ಎಂದು ಅಧ್ಯಕ್ಷ ಬೈಡನ್ ಸರಕಾರ ತಿಳಿಸಿದೆ.
ಹೊಸದಿಲ್ಲಿ: ಕೋವಿಡ್ ಲಸಿಕೆಯ ಕಚ್ಚಾ ವಸ್ತುಗಳ ರಫ್ತಿಗೆ ತಾನು ವಿಧಿಸಿರುವ ನಿಷೇಧ ವನ್ನು ಸಮರ್ಥಿಸಿಕೊಂಡಿದೆ. ಅಮೆರಿಕನ್ನರ ಆರೋಗ್ಯ ರಕ್ಷ ಣೆಯೇ ಬೈಡೆನ್ ಸರಕಾರದ ಮೊದಲ ಆದ್ಯತೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ. ಭಾರತದ ವೈದ್ಯಕೀಯ ವಲಯ ಈಗಾಗಲೇ ಅಮೆರಿಕಕ್ಕೆ ರಫ್ತು ಮೇಲಿನ ನಿಷೇಧವನ್ನು ತೆರವುಗೊಳಿಸಲು ಮನವಿ ಮಾಡಿದೆ.
ಪುಣೆಯ ಸೀರಂ ಇನ್ಸ್ಟಿಟ್ಯೂಟ್ ಸೇರಿದಂತೆ ಹಲವು ಸಂಸ್ಥೆಗಳು ಬೈಡೆನ್ ಸರಕಾರಕ್ಕೆ ಒತ್ತಾಯಿಸಿವೆ. ಹೀಗಿದ್ದರೂ, ಪ್ರಯೋಜನವಾಗಿಲ್ಲ. ''ಅಮೆರಿಕವು ಮೊದಲು ತನ್ನ ಜನತೆಯ ಆರೋಗ್ಯ ರಕ್ಷಣೆಗೆ ಬದ್ಧವಾಗಿದೆ. ಎರಡನೆಯದಾಗಿ ಜಗತ್ತಿನ ಬೇರಾವುದೇ ದೇಶಕ್ಕಿಂತ ಮಿಗಿಲಾಗಿ ಅಮೆರಿಕನ್ನರು ಕೋವಿಡ್-19 ಹೊಡೆತಕ್ಕೆ ಸಿಲುಕಿದ್ದಾರೆ. 5.5 ಲಕ್ಷಕ್ಕೂ ಹೆಚ್ಚು ಮಂದಿ ಅಸುನೀಗಿದ್ದಾರೆ'' ಎಂದು ಅಧಿಕಾರಿಗಳು ಹೇಳಿದ್ದಾರೆ.
ಜಗತ್ತಿನ ಯಾವುದೇ ದೇಶದಲ್ಲಿ ಕೋವಿಡ್-19 ಬಿಕ್ಕಟ್ಟು ಇದ್ದರೆ ಎಲ್ಲಿಗೆ ಬೇಕಾದರೂ ಹರಡಬಹುದು. ಆದರೆ ಅಮೆರಿಕದಲ್ಲಿಇದರ ತೀವ್ರತೆ ವ್ಯಾಪಕವಾಗಿದೆ. ವೈರಸ್ ರೂಪಾಂತರವೂ ಆಗಬಹುದು. ಗಡಿ ದಾಟಿಯೂ ಇದರ ಸಮಸ್ಯೆ ಉಲ್ಬಣಿಸಬಹುದು. ಹೀಗಾಗಿ ಇತರ ರಾಷ್ಟ್ರಗಳಿಗೂ ಅಮೆರಿಕ ಸಹಕರಿಸಲಿದೆ. ಆದರೆ ಮೊದಲ ಆದ್ಯತೆ ಅಮೆರಿಕನ್ನರಿಗೆ ಸಿಗಲಿದೆ ಎಂದು ಸಮರ್ಥಿಸಿದ್ದಾರೆ.
ಅಮೆರಿಕದ ಕಂಪನಿಗಳು ಕೋವಿಡ್-19 ಲಸಿಕೆ ಉತ್ಪಾದನೆಗೆ ಬೇಕಾಗುವ ಕಚ್ಚಾ ವಸ್ತುಗಳ ರಫ್ತು ಮಾಡದಂತೆ ಕಳೆದ ಫೆಬ್ರವರಿಯಲ್ಲಿ ಬೈಡೆನ್ ನಿಷೇಧಿಸಿದ್ದಾರೆ. ಪರಿಣಾಮ ಭಾರತದಲ್ಲಿನ ಲಸಿಕೆ ಉತ್ಪಾದಕ ಕಂಪನಿಗಳಿಗೆ ಭಾರಿ ಸಮಸ್ಯೆಯಾಗಿದೆ.