ಲಂಬಾಣಿ ಹುಡುಗಿ ಪಾತ್ರಕ್ಕಾಗಿ 20 ಕೆಜಿ ತೂಕದ ಉಡುಪು ಧರಿಸಿದ ನಟಿ ಶುಭಾ ಪೂಂಜಾ

ಬಿಗ್ ಬಾಸ್ ನಂತರ ಸಿನಿಮಾ ಕೆಲಸಗಳಿಗೆ ಮರಳಿರುವ ನಟಿ ಶುಭಾ ಪೂಂಜಾ 'ಅಂಬುಜ' ಸಿನಿಮಾದಲ್ಲಿ ಥೇಟ್‌ ಲಂಬಾಣಿ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಪಾತ್ರದ ಕಾಸ್ಟ್ಯೂಮ್‌ ಕೂಡ ಅತ್ಯಂತ ವಿಶೇಷವಾಗಿದೆ.

ಲಂಬಾಣಿ ಹುಡುಗಿ ಪಾತ್ರಕ್ಕಾಗಿ 20 ಕೆಜಿ ತೂಕದ ಉಡುಪು ಧರಿಸಿದ ನಟಿ ಶುಭಾ ಪೂಂಜಾ
Linkup
ಪದ್ಮಾ ಶಿವಮೊಗ್ಗ ಬಿಗ್‌ ಬಾಸ್‌ ಮನೆಯಿಂದ ಬಂದ ನಂತರ ನಟಿಸುತ್ತಿರುವ ಹೊಸ ಚಿತ್ರ ''ದಲ್ಲಿ ಅವರ ಪಾತ್ರ ಅತ್ಯಂತ ವಿಭಿನ್ನವಾಗಿದೆ. ಶ್ರೀನಿ ಹನುಮಂತರಾಜು ನಿರ್ದೇಶನ ಮಾಡುತ್ತಿರುವ ಈ ಮಹಿಳಾ ಪ್ರಧಾನ ಚಿತ್ರದಲ್ಲಿ ಶುಭಾ ಎರಡು ಶೇಡ್‌ನ ಪಾತ್ರದಲ್ಲಿದ್ದಾರೆ. ಅವರನ್ನು ಲಂಬಾಣಿ ಹುಡುಗಿಯಾಗಿ ಮತ್ತು ಪತ್ರಕರ್ತೆಯಾಗಿ ಈ ಸಿನಿಮಾದಲ್ಲಿ ನೋಡಬಹುದಾಗಿದೆ. ಈ ಸೈಕಲಾಜಿಕಲ್‌ ಹಾರರ್‌ ಥ್ರಿಲ್ಲರ್‌ ಸಿನಿಮಾದ ಫಸ್ಟ್‌ ಲುಕ್‌ ಇಂದು ರಿವೀಲ್‌ ಆಗಲಿದೆ. ಈ ಲುಕ್‌ನಲ್ಲಿ ಶುಭಾ ಪೂಂಜಾ ಅವರು ಲಂಬಾಣಿಗಳ ಸಾಂಪ್ರದಾಯಿಕ ಉಡುಗೆಯಲ್ಲಿದ್ದಾರೆ. ಕುಸುರಿ ಕಲೆಗೆ ಹೆಸರಾದ ಲಂಬಾಣಿಗಳು ತಮ್ಮ ತಾಂಡಾದಲ್ಲಿ ಸತತ ನಾಲ್ಕು ತಿಂಗಳ ಕಾಲ ಈ ವಿಶೇಷ ಉಡುಪನ್ನು ಸಿದ್ಧಪಡಿಸಿದ್ದಾರೆ. 'ಗದಗ ಜಿಲ್ಲೆಯ ಲಂಬಾಣಿಗಳು ಈ ಉಡುಪನ್ನು ತಯಾರಿಸಿದ್ದಾರೆ. ಇದರ ತೂಕ 20 ಕೆ.ಜಿ ಇದೆ. ಆಭರಣಗಳು, ಕುಸುರಿ ಕೆಲಸ ಇತ್ಯಾದಿಗಳನ್ನು ಬಹಳ ವಿಶೇಷವಾಗಿ ಮಾಡಲಾಗಿದೆ' ಎಂದಿದ್ದಾರೆ ಶ್ರೀನಿ. 'ರಾಯಚೂರಿನಲ್ಲಿ ನಡೆದ ಘಟನೆಯೊಂದನ್ನು ನಿರ್ಮಾಪಕ ಕಾಶೀನಾಥ್‌ ಮಡಿವಾಳರ್‌ ನಮಗೆ ಹೇಳಿದರು. ಅವರ ಊರಿನ ಸಮೀಪ ಈ ಘಟನೆ ನಡೆದಿತ್ತು. ಕಥೆ ಅವರೇ ಬರೆದಿದ್ದಾರೆ. ಸಮಾಜ ಮುಂದುವರಿಯುತ್ತಿದ್ದರೂ ಮುಗ್ಧ ಬಡಮಕ್ಕಳನ್ನು ಹೇಗೆ ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ, ವಿಜ್ಞಾನ ಬೆಳೆದರೂ ಅಜ್ಞಾನ ಇದ್ದೇ ಇದೆ ಎನ್ನುವುದನ್ನು ಈ ಸಿನಿಮಾದಲ್ಲಿ ತೋರಿಸುತ್ತಿದ್ದೇವೆ. ಈ ಹಿಂದಿನ ನನ್ನ ಸಿನಿಮಾದಲ್ಲಿ ಶುಭಾ ಪೂಂಜಾ ನಟಿಸಿದ್ದರು. ಅವರಿಗೆ ಈ ಪಾತ್ರ ಚೆನ್ನಾಗಿ ಹೊಂದುತ್ತದೆ ಎನ್ನಿಸಿ ಆಯ್ಕೆ ಮಾಡಿಕೊಂಡೆವು' ಎಂದಿದ್ದಾರೆ ಅವರು. ಕಾಮಿಡಿ ರಿಯಾಲಿಟಿ ಶೋನ ನಟರಾದ ಗೋವಿಂದೇ ಗೌಡ, ಪ್ರಿಯಾಂಕಾ ಕಾಮತ್‌ ಮತ್ತಿತರರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಬೆಂಗಳೂರು, ಗದಗದ ಲಂಬಾಣಿ ತಾಂಡಾ ಮತ್ತು ಚಿಕ್ಕಮಗಳೂರಿನಲ್ಲಿ ಇದರ ಚಿತ್ರೀಕರಣ ನಡೆಯಲಿದೆ. ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ಪ್ರಸನ್ನ ಕುಮಾರ್‌ ಸಂಗೀತ ಸಂಯೋಜನೆಯಲ್ಲಿ ಈಗಾಗಲೇ ರೆಕಾರ್ಡಿಂಗ್‌ ಮಾಡಲಾಗಿದೆ. ಅನನ್ಯಾ ಭಟ್‌, ಅನುರಾಧಾ ಭಟ್‌, ರಾಜೇಶ್‌ ಕೃಷ್ಣನ್‌, ಎಂ.ಡಿ. ಪಲ್ಲವಿ ಹಾಡಿದ್ದಾರೆ. ಇನ್ನು, ಕನ್ನಡ ಸೀಸನ್ 8ರಲ್ಲಿ ಹೋಗಿಬಂದಿದ್ದ ಶುಭಾ, ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ. ಫಿನಾಲೆಗೆ ಇನ್ನು ಒಂದು ವಾರ ಇದೆ ಎನ್ನುವಾಗ ದೊಡ್ಮನೆಯಿಂದ ಅವರು ಹೊರಬಂದಿದ್ದರು. ಆಟದ ವಿಚಾರಕ್ಕೆ ಬಂದರೆ ಶುಭಾ ಪೂಂಜಾ ಇತರ ಸ್ಪರ್ಧಿಗಳಿಗೆ ಹೋಲಿಕೆ ಮಾಡಿದಾಗ ವೀಕ್ ಇದ್ದರು. ಮನರಂಜನೆ ವಿಚಾರದಲ್ಲಿ ಶುಭಾ ಪೂಂಜಾ ತರಲೆ, ಕೀಟಲೆ ಮಾಡುತ್ತ, ಮುದ್ದುಮುದ್ದಾಗಿ ಮಾತನಾಡುತ್ತಿದ್ದರು. ಅದು ಎಲ್ಲರಿಗೂ ಇಷ್ಟವಾಗಿತ್ತು. ಶೋನಿಂದ ಹೊರಬಂದ ಬಳಿಕ ಪ್ರಿಯಕರ ಸುಮಂತ್ ಜೊತೆಗೆ ಗೋವಾಕ್ಕೆ ಹೋಗಿದ್ದರು.