‘ಈ ರೂಮರ್ ನಿಜವಲ್ಲ’ ಅಂತ್ಹೇಳಿ ಕಡೆಗೂ ಗಾಸಿಪ್‌ವೊಂದರ ಬಗ್ಗೆ ಸ್ಪಷ್ಟನೆ ನೀಡಿದ ಸಮಂತಾ!

ನಟಿ ಸಮಂತಾ ಅವರ ವೈಯಕ್ತಿಕ ವಿಚಾರಗಳ ಬಗ್ಗೆ ಕಳೆದ ಕೆಲವು ದಿನಗಳಿಂದ ತೆಲುಗು ಸಿನಿ ಅಂಗಳದಲ್ಲಿ ನೂರೆಂಟು ವದಂತಿಗಳು ಹರಿದಾಡುತ್ತಿವೆ. ಇದೀಗ ತಮ್ಮ ಬಗ್ಗೆ ಕೇಳಿಬಂದ ಗಾಳಿಸುದ್ದಿಯೊಂದರ ಕುರಿತು ನಟಿ ಸಮಂತಾ ಸ್ಪಷ್ಟನೆ ನೀಡಿದ್ದಾರೆ.

‘ಈ ರೂಮರ್ ನಿಜವಲ್ಲ’ ಅಂತ್ಹೇಳಿ ಕಡೆಗೂ ಗಾಸಿಪ್‌ವೊಂದರ ಬಗ್ಗೆ ಸ್ಪಷ್ಟನೆ ನೀಡಿದ ಸಮಂತಾ!
Linkup
ನಟಿ.. ಪತ್ನಿ.. ನಾಗಾರ್ಜುನ ಸೊಸೆ ಬಗ್ಗೆ ಕೇಳಿಬರುತ್ತಿರುವ ಗಾಸಿಪ್‌ಗಳು ಒಂದೆರಡಲ್ಲ. ಅದರಲ್ಲೂ ನಟಿ ಅವರ ವೈಯಕ್ತಿಕ ವಿಚಾರಗಳ ಬಗ್ಗೆ ಕಳೆದ ಕೆಲವು ದಿನಗಳಿಂದ ತೆಲುಗು ಸಿನಿ ಅಂಗಳದಲ್ಲಿ ನೂರೆಂಟು ವದಂತಿಗಳು ಹರಿದಾಡುತ್ತಿವೆ. ಇದೀಗ ತಮ್ಮ ಬಗ್ಗೆ ಕೇಳಿಬಂದ ಗಾಳಿಸುದ್ದಿಯೊಂದರ ಕುರಿತು ನಟಿ ಸಮಂತಾ ಸ್ಪಷ್ಟನೆ ನೀಡಿದ್ದಾರೆ. ಮುಂಬೈಗೆ ಶಿಫ್ಟ್ ಆಗ್ತಾರಾ ನಟಿ ಸಮಂತಾ? ನಟಿ ಸಮಂತಾ ಇತ್ತೀಚೆಗಷ್ಟೇ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಮಾನಿಗಳ ಜೊತೆಗೆ ಮಾತಿಗಿಳಿದಿದ್ದರು. ಅಭಿಮಾನಿಗಳು ಕೇಳಿದ ಪ್ರಶ್ನೆಗಳಿಗೆ ನಟಿ ಸಮಂತಾ ಉತ್ತರಗಳನ್ನು ಕೊಟ್ಟರು. ಈ ವೇಳೆ ಅಭಿಮಾನಿಯೊಬ್ಬರು ‘’ನೀವು ಮುಂಬೈಗೆ ಶಿಫ್ಟ್ ಆಗ್ತಿದ್ದೀರಂತೆ.. ಹೌದಾ?’’ ಎಂದು ಸಮಂತಾಗೆ ಪ್ರಶ್ನೆ ಮಾಡಿದರು. ವದಂತಿಗೆ ಸ್ಪಷ್ಟನೆ ಕೊಟ್ಟ ನಟಿ ಸಮಂತಾ ‘’ಈ ವದಂತಿ ಹೇಗೆ ಮತ್ತು ಎಲ್ಲಿಂದ ಶುರುವಾಯ್ತು ಅನ್ನೋದು ನನಗೆ ಗೊತ್ತಿಲ್ಲ. ಆದರೆ, ಇತರೆ ನೂರಾರು ರೂಮರ್ಸ್‌ನಂತೆಯೇ ಇದು ಕೂಡ ಸುಳ್ಳು. ಹೈದರಾಬಾದ್‌ ನನ್ನ ಮನೆ. ನಾನು ಯಾವಾಗಲೂ ಇರೋದು ಅಲ್ಲೇ. ಹೈದರಾಬಾದ್‌ ನನಗೆ ಎಲ್ಲವನ್ನೂ ನೀಡಿದೆ. ಹೀಗಾಗಿ, ನಾನು ಖುಷಿಯಾಗಿ ಹೈದರಾಬಾದ್‌ನಲ್ಲೇ ಇರುತ್ತೇನೆ’’ ಎಂದು ನಟಿ ಸಮಂತಾ ಹೇಳಿದರು. ಆ ಮೂಲಕ ‘’ಹೈದರಾಬಾದ್ ಬಿಟ್ಟು ನಟಿ ಸಮಂತಾ ಮುಂಬೈನಲ್ಲಿ ಸೆಟಲ್ ಆಗ್ತಾರೆ’’ ಎಂಬ ಗಾಸಿಪ್‌ಗೆ ಸಮಂತಾ ಫುಲ್ ಸ್ಪಾಟ್ ಇಟ್ಟಿದ್ದಾರೆ. ಬೇರೆ ಮನೆ ಬಗ್ಗೆ ಗುಸುಗುಸು ‘’ಸಮಂತಾ ಮತ್ತು ನಾಗ ಚೈತನ್ಯ ಮಧ್ಯೆ ಎಲ್ಲವೂ ಸರಿಯಿಲ್ಲ. ಸದ್ಯದಲ್ಲೇ ಇಬ್ಬರು ವಿಚ್ಛೇದನ ಪಡೆಯಲಿದ್ದಾರೆ. ಈಗಾಗಲೇ ನಾಗ ಚೈತನ್ಯ ಮತ್ತು ಸಮಂತಾ ಬೇರೆ ಬೇರೆ ಮನೆಯಲ್ಲಿ ವಾಸಿಸುತ್ತಿದ್ದಾರೆ. ವೆಬ್ ಸೀರೀಸ್ ಮೂಲಕ ಉತ್ತರ ಭಾರತದಲ್ಲೂ ಸಮಂತಾ ಜನಪ್ರಿಯತೆ ಹೆಚ್ಚಾಗಿದೆ. ಹೀಗಾಗಿ ಹೈದರಾಬಾದ್‌ನಿಂದ ಮುಂಬೈಗೆ ಸಮಂತಾ ಶಿಫ್ಟ್ ಆಗಲಿದ್ದಾರೆ. ಮುಂಬೈನಲ್ಲಿ ಮನೆಯೊಂದಕ್ಕಾಗಿ ಹುಡುಕಾಡುತ್ತಿದ್ದಾರೆ. ಬಾಲಿವುಡ್ ಪ್ರಾಜೆಕ್ಟ್‌ಗಳ ಬಗ್ಗೆ ಸಮಂತಾ ಗಮನ ಹರಿಸಲಿದ್ದಾರೆ’’ ಎಂಬ ವದಂತಿ ಇತ್ತೀಚೆಗಷ್ಟೇ ಕೇಳಿಬಂದಿತ್ತು. ಇದೀಗ, ‘’ಇದು ಸುಳ್ಳು’’ ಅಂತ ಹೇಳುವ ಮೂಲಕ ನಟಿ ಸಮಂತಾ ಗಾಸಿಪ್ ಪಂಡಿತರ ಬಾಯಿಗೆ ಬೀಗ ಜಡಿದಿದ್ದಾರೆ. ನಾಗ ಚೈತನ್ಯ ಬಗ್ಗೆ ತುಟಿ ಎರಡು ಮಾಡದ ನಟಿ ಸಮಂತಾ ಅಭಿಮಾನಿಗಳ ಜೊತೆಗೆ ಪ್ರಶ್ನೋತ್ತರ ಕಾರ್ಯಕ್ರಮ ನಡೆಸಿದ ಸಮಂತಾ ‘’ನಾಗ ಚೈತನ್ಯ’’ ಬಗ್ಗೆ ಮಾತ್ರ ತುಟಿಕ್ ಪಿಟಿಕ್ ಎಂದಿಲ್ಲ. ಇನ್ನೂ ವಿಚ್ಛೇದನದ ಗಾಸಿಪ್ ಬಗ್ಗೆ ಉತ್ತರಿಸುವ ಗೋಜಿಗೂ ಸಮಂತಾ ಹೋಗಲಿಲ್ಲ. ಅಕ್ಟೋಬರ್ 7ರಂದು ಗಾಸಿಪ್‌ಗೆ ಫುಲ್ ಸ್ಟಾಪ್? 2017ರ ಅಕ್ಟೋಬರ್ 7 ರಂದು ಗೋವಾದಲ್ಲಿ ನಟಿ ಸಮಂತಾ ಹಾಗೂ ನಾಗ ಚೈತನ್ಯ ವೈವಾಹಿಕ ಬದುಕಿಗೆ ನಾಂದಿ ಹಾಡಿದ್ದರು. ಈ ವರ್ಷದ ಅಕ್ಟೋಬರ್ 7 ರಂದು ಸಮಂತಾ ಹಾಗೂ ನಾಗ ಚೈತನ್ಯ ದಂಪತಿ ತಮ್ಮ ನಾಲ್ಕನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳಬೇಕು. ಆದರೆ, ಅವತ್ತೇ ತಮ್ಮ ವಿಚ್ಛೇದನದ ವಿಚಾರವನ್ನು ಸಮಂತಾ ಮತ್ತು ನಾಗ ಚೈತನ್ಯ ಘೋಷಿಸಲಿದ್ದಾರೆ ಎಂಬ ಮಾತುಗಳು ಕೂಡ ತೆಲುಗು ಸಿನಿ ಅಂಗಳದಲ್ಲಿ ಕೇಳಿಬರುತ್ತಿವೆ. ಹಾಗಾದ್ರೆ, ಅಕ್ಟೋಬರ್ 7 ರಂದು ಸಮಂತಾ ಮತ್ತು ನಾಗ ಚೈತನ್ಯ ದೂರಾಗುವ ಮಾತನ್ನಾಡುತ್ತಾರಾ? ಇಲ್ಲ, ಗಾಸಿಪ್‌ಗಳಿಗೆ ಪೂರ್ಣ ವಿರಾಮ ಇಡುತ್ತಾರಾ? ಕಾದು ನೋಡೋಣ