ಕ್ರಿಪ್ಟೋಕರೆನ್ಸಿ ನಾಶಪಡಿಸುವುದು ಅಸಾಧ್ಯ: ಸರಕಾರಗಳಿಗೆ ಟೆಸ್ಲಾ ಸಿಇಒ ಎಲಾನ್‌ ಮಸ್ಕ್‌ ಸಂದೇಶ

ಕ್ರಿಪ್ಟೋಕರೆನ್ಸಿ ಬೆಳವಣಿಗೆಯನ್ನು ನಿಧಾನಗೊಳಿಸಬಹುದೇ ಹೊರತು ಅವುಗಳನ್ನು ನಾಶಪಡಿಸಲು ಸಾಧ್ಯವಿಲ್ಲ ಎಂದು ಟೆಸ್ಲಾ ಸಿಇಒ ಎಲಾನ್‌ ಮಸ್ಕ್‌ ವಿಶ್ವದ ಎಲ್ಲ ಸರಕಾರಗಳಿಗೂ ಸಂದೇಶ ನೀಡಿದ್ದಾರೆ.

ಕ್ರಿಪ್ಟೋಕರೆನ್ಸಿ ನಾಶಪಡಿಸುವುದು ಅಸಾಧ್ಯ: ಸರಕಾರಗಳಿಗೆ ಟೆಸ್ಲಾ ಸಿಇಒ ಎಲಾನ್‌ ಮಸ್ಕ್‌ ಸಂದೇಶ
Linkup
ಹೊಸದಿಲ್ಲಿ: ಬೆಳವಣಿಗೆಯನ್ನು ನಿಧಾನಗೊಳಿಸಬಹುದೇ ಹೊರತು ಅವುಗಳನ್ನು ನಾಶಪಡಿಸಲು ಸಾಧ್ಯವಿಲ್ಲ ಎಂದು ಸಿಇಒ ಎಲಾನ್‌ ಮಸ್ಕ್‌ ವಿಶ್ವದ ಎಲ್ಲ ಸರಕಾರಗಳಿಗೂ ಸಂದೇಶ ನೀಡಿದ್ದಾರೆ. ಡಿಜಿಟಲ್ ಸ್ವತ್ತುಗಳನ್ನು ಈಗ ನಾಶಪಡಿಸಲು ಸಾಧ್ಯವಿಲ್ಲ. ಕ್ರಿಪ್ಟೋ ಕರೆನ್ಸಿಯ ವಿಸ್ತರಣೆಯನ್ನು ನಿಗ್ರಹಿಸುವುದೇ ನಿಮ್ಮ ಗುರಿಯಾಗಿದ್ದರೆ, ಕ್ರಿಪ್ಟೋ ವಲಯವನ್ನು ನಿಯಂತ್ರಿಸುವ ಬಗ್ಗೆ "ಏನೂ ಮಾಡಬೇಡಿ" ಎಂದು ಅಮೆರಿಕ ಸರಕಾರಕ್ಕೆ ಸಲಹೆ ನೀಡಿದ್ದಾರೆ. ಅಮೆರಿಕದ ಲಾಸ್ ಏಂಜಲೀಸ್‌ನ ಬೆವರ್ಲಿ ಹಿಲ್ಸ್‌ನಲ್ಲಿ ಆಯೋಜಿಸಿದ್ದ "ಕೋಡ್ 2021" ಸಮ್ಮೇಳನ 50 ವರ್ಷದ ಮಲ್ಟಿ-ಬಿಲಿಯನೇರ್ ತಿಳಿಸಿದ್ದಾರೆ. "ಕ್ರಿಪ್ಟೋಕರೆನ್ಸಿಗಳು ಆರ್ಥಿಕ ವ್ಯವಸ್ಥೆಯಲ್ಲಿ ಹೊಂದಿರುವ ಕೇಂದ್ರೀಕೃತ ಶಕ್ತಿಯನ್ನು ಕಡಿಮೆ ಮಾಡಲಿವೆ ಎಂದು ನಾನು ಭಾವಿಸುತ್ತೇನೆ. ಅವರೆ ಸರಕಾರಗಳು ಇದನ್ನ ಇಷ್ಟಪಡುವುದಿಲ್ಲ. ಆದರೆ ಕ್ರಿಪ್ಟೋಕರೆನ್ಸಿಗಳನ್ನು ನಾಶ ಮಾಡುವುದು ಸಾಧ್ಯವಿಲ್ಲ. ಆದರೆ ಅವಗಳ ತ್ವರಿತಗತಿಯ ಪ್ರಗತಿಯನ್ನು ನಿಧಾನಗೊಳಿಸಲು ಸಾಧ್ಯವಿದೆ ಎಂದು ಎಲಾನ್‌ ಮಸ್ಕ್ ಹೇಳಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ. ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾದ ಚೀನಾ ಕ್ರಿಪ್ಟೋಕರೆನ್ಸಿಗಳ ಮೇಲೆ ಪೂರ್ಣ ಪ್ರಮಾಣದ ನಿಷೇಧ ಹೇರಿದೆ. ಅಲ್ಲದೆ ಕ್ರಿಪ್ಟೋ ನಾಣ್ಯಗಳ ಮೈನಿಂಗ್‌ ಚಟುವಟಿಕೆಗಳನ್ನೂ ಸಂಪೂರ್ಣವಾಗಿ ಸ್ಥಗಿತಗೊಳಿಸಿದೆ. ಈ ಬೆನ್ನಲ್ಲೇ ಇಲಾನ್‌ ಮಸ್ಕ್‌ ಕ್ರಿಪ್ಟೋಕರೆನ್ಸಿ ಪರವಾಗಿ ಬ್ಯಾಟಿಂಗ್‌ ಮಾಡಿದ್ದಾರೆ. ಕ್ರಿಪ್ಟೋ ಕರೆನ್ಸಿ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳಬೇಡಿ ಎಂದು ಸರಕಾರಗಳಿಗೆ ಸಲಹೆ ನೀಡಿದ್ದಾರೆ. ಚೀನಾದ ನಿಷೇಧದ ನಂತರ, ಕ್ರಿಪ್ಟೋ ಮಾರುಕಟ್ಟೆ ತೀವ್ರ ಏರಿಳಿತ ಕಂಡಿದೆ, ಬಿಟ್ ಕಾಯಿನ್ ಮತ್ತು ಈಥರ್ ನಂತಹ ಹೆಚ್ಚು ಮೌಲ್ಯಯುತ ಕರೆನ್ಸಿಗಳ ಬೆಲೆಯಲ್ಲಿ ಭಾರೀ ಇಳಿಕೆಯಾಗಿದೆ. ಚೀನಾ ಕ್ರಿಪ್ಟೋಕರೆನ್ಸಿ ಬ್ಯಾನ್‌ ಮಾಡಲು ಕಾರಣವೇನು? ಚೀನಾ ಕ್ರಿಪ್ಟೋಕರೆನ್ಸಿ ಮೇಲೆ ನಿಷೇಧ ಹೇರಲು ಕಾಣರಣ ಏನೆಂದು ಅವಲೋಕಿಸಿದರೆ, ಚೀನಾದಲ್ಲಿ ವಿದ್ಯುತ್‌ ಕೊರತೆ ಎದುರಾಗಿರುವುದು ಗೋಚರಿಸುತ್ತದೆ. ಹೀಗಾಗಿ ಚೀನಾ ಸರಕಾರ ದಕ್ಷಿಣ ಚೀನಾದಲ್ಲಿ ವಿದ್ಯುತ್‌ ಕಡಿತ ಮಾಡುತ್ತಿದೆ. ಕ್ರಿಪ್ಟೋಕರೆನ್ಸಿ ಮೈನಿಂಗ್‌ಗೆ ಹೆಚ್ಚು ವಿದ್ಯುತ್‌ ಬೇಕಾಗುವ ಕಾರಣ ಕ್ರಿಪ್ಟೋ ಮೈನಿಂಗ್‌ ಮೇಲೆ ಪೂರ್ಣ ನಿರ್ಬಂಧ ಹೇರಿದೆ. ಜತೆಗೆ ಕ್ರಿಪ್ಟೋಕರೆನ್ಸಿಗಳನ್ನೂ ಬ್ಯಾನ್‌ ಮಾಡಿದೆ. ಈ ರೀತಿ ಚೀನಾವು ಕ್ರಿಪ್ಟಟೋ ವಲಯದ ಮೇಲೆ ಆಟ ಆಡಿದೆ ಎಂದು ಟೆಸ್ಲಾ ಸಿಇಒ ಎಲಾನ್‌ ಮಾಸ್ಕ್ ಹೇಳಿದ್ದಾರೆ. ಎಲಾನ್‌ ಮಸ್ಕ್‌ ಅಮೆರಿಕದ ಖಾಸಗಿ ಬಾಹ್ಯಾಕಾಶ ಸಂಸ್ಥೆ ಸ್ಪೇಸ್ಎಕ್ಸ್‌ನ ಅಧ್ಯಕ್ಷರೂ ಹೌದು. ಅಲ್ಲದೆ, ಇ-ವಾಹನಗಳ ತಯಾರಿಕೆಯದಲ್ಲಿ ಟೆಸ್ಲಾ ಮುಂಚೂಣಿಯಲ್ಲಿದೆ. ವೈಜ್ಞಾನಿಕ ನಿಯತಕಾಲಿಕ ಜೌಲ್‌ 2019ರಲ್ಲಿ ಪ್ರಕಟಿಸಿದ ಅಧ್ಯಯನ ವರದಿಯಂತೆ, ಭವಿಷ್ಯದಲ್ಲಿ ಬಿಟ್ ಕಾಯಿನ್ ಉತ್ಪಾದನೆಯಿಂದ ವಾರ್ಷಿಕ 22 ರಿಂದ 22.9 ಮಿಲಿಯನ್ ಮೆಟ್ರಿಕ್ ಟನ್ ಕಾರ್ಬನ್ ಡೈ ಆಕ್ಸೈಡ್ ಉತ್ಪಾದನೆಯಾಗಲಿದೆ ಎಂದು ಅಂದಾಜಿಸಲಾಗಿದೆ. ಬಿಟ್‌ಕಾಯಿನ್ ಮೈನಿಂಗ್‌ನಿಂದ ಪರಿಸರದ ಮೇಲಾಗುವ ಪರಿಣಾಮವು ವಿಶ್ವದಾದ್ಯಂತ ಆತಂಕ ಉಂಟುಮಾಡಿದೆ. ಹೀಗಾಗಿ ಚೀನಾ ಮತ್ತು ರಷ್ಯಾದಂತಹ ದೇಶಗಳು ಕ್ರಿಪ್ಟೋ ವಲಯವನ್ನು ಕಾನೂನು ಬಾಹಿರ ಎಂದು ಘೋಷಿಸಿವೆ. ಆದರೆ, ಎಲ್ ಸಾಲ್ವಡಾರ್, ಮಿಯಾಮಿ, ಫ್ಲೋರಿಡಾ, ಅಮೆರಿಕದಂತಹ ರಾಷ್ಟ್ರಗಳಲ್ಲಿ ಕ್ರಿಪ್ಟೋ ಗಣಿಗಾರಿಕೆಗೆಂದೇ ಪರಿಸರ ಸ್ನೇಹಿ ಇಂಧನ ಮೂಲಗಳನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತಿವೆ. ಎಲಾನ್‌ ಮಸ್ಕ್‌ ತೆಕ್ಕೆಯಲ್ಲಿ ಪ್ರಮುಖ ಕ್ರಿಪ್ಟೋಕರೆನ್ಸಿಗಳು ಎಲಾನ್‌ ಮಸ್ಕ್‌ ಇತ್ತೀಚೆಗಷ್ಟೇ ವಿಶ್ವದ ಪ್ರಮುಖ ಕ್ರಿಪ್ಟೋಕರೆನ್ಸಿಗಳನ್ನು ಸ್ವಾಧೀನಪಡಿಸಿಕೊಂಡಿದ್ದರು. ಎಲೋನ್‌ ಮಸ್ಕ್‌ ಅವರು ಬಿಟ್‌ಕಾಯಿನ್‌, ಡಾಗಿಕಾಯಿನ್ ಮತ್ತು ಇಥೆರಿಯಂ ಡಿಜಿಟಲ್‌ ಕರೆನ್ಸಿಗಳನ್ನು ತನ್ನ ಸ್ವಾಧೀನಕ್ಕೆ ಪಡೆದಿರುವುದಾಗಿ ಹೇಳಿಕೆ ನೀಡಿದ್ದರು. ಮಸ್ಕ್‌ ಅವರ ಈ ಇಂದು ಹೇಳಿಕೆ ಬೆನ್ನಲ್ಲೇ ಕ್ರಿಪ್ಟೋ ಮಾರುಕಟ್ಟೆಯಲ್ಲಿ ಜಿಗಿತ ಕಂಡಿತ್ತು.