ಭಾರತದ ಟಾಪ್‌-10 ಸಿರಿವಂತರಿವರು: ಇವರ ದಿನದ ಸಂಪಾದನೆ ಕೇಳಿದ್ರೆ ಅಚ್ಚರಿ ಖಚಿತ!

ಸತತ ಹತ್ತು ವರ್ಷಗಳ ನಂತರವೂ ಭಾರತದ 2 ಮಂದಿ ಉದ್ಯಮಿಗಳು ದೇಶದ ಟಾಪ್‌ -10 ಸಿರಿವಂತರ ಪಟ್ಟಿಯಲ್ಲಿ ಮುಂದುವರಿದಿದ್ದಾರೆ. ಮುಕೇಶ್‌ ಅಂಬಾನಿ ಈ ವರ್ಷವೂ ದೇಶದ ಸಿರಿವಂತರ ಪೈಕಿ ಮೊದಲ ಸ್ಥಾನದಲ್ಲೇ ಮುಂದುವರಿದಿದ್ದಾರೆ.

ಭಾರತದ ಟಾಪ್‌-10 ಸಿರಿವಂತರಿವರು: ಇವರ ದಿನದ ಸಂಪಾದನೆ ಕೇಳಿದ್ರೆ ಅಚ್ಚರಿ ಖಚಿತ!
Linkup
ಹೊಸದಿಲ್ಲಿ: ಸತತ ಹತ್ತು ವರ್ಷಗಳ ನಂತರವೂ ಭಾರತದ 2 ಮಂದಿ ಉದ್ಯಮಿಗಳು ದೇಶದ ಟಾಪ್‌ -10 ಸಿರಿವಂತರ ಪಟ್ಟಿಯಲ್ಲಿ ಮುಂದುವರಿದಿದ್ದಾರೆ. ಈ ವರ್ಷವೂ ದೇಶದ ಸಿರಿವಂತರ ಪೈಕಿ ಮೊದಲ ಸ್ಥಾನದಲ್ಲೇ ಮುಂದುವರಿದಿದ್ದಾರೆ. ಗೌತಮ್‌ ಅದಾನಿ ಮತ್ತು ಕುಟುಂಬವು ದೇಶದ ಸಿರಿವಂತರ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ. ಹುರೂನ್ ಇಂಡಿಯಾ ಸಿದ್ಧಪಡಿಸುವ 'ಐಐಎಫ್‌ಎಲ್‌ ವೆಲ್ತ್‌ ಹುರೂನ್‌ ಇಂಡಿಯಾ ರಿಚ್ ಲಿಸ್ಟ್‌ - 2021' ಗುರುವಾರ ಬಿಡುಗಡೆಯಾಗಿದ್ದು, ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ (ಆರ್‌ಐಎಲ್‌) ಅಧ್ಯಕ್ಷ ಮುಕೇಶ್ ಅಂಬಾನಿ ಅವರು ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ಮುಕೇಶ್ ಅಂಬಾನಿ ಅವರು ಸತತವಾಗಿ ಹತ್ತು ವರ್ಷಗಳಿಂದ 'ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿ ಮುಂದುವರಿದಿದ್ದಾರೆ ಎಂದು ಹುರೂನ್ ಇಂಡಿಯಾ ಹೇಳಿದೆ. ಮುಕೇಶ್‌ ಅಂಬಾನಿ ಒಟ್ಟು ಸಂಪತ್ತು ₹ 7.18 ಲಕ್ಷ ಕೋಟಿ ದಾಟಿದೆ. ಅದಾನಿ ಸಮೂಹದ ಒಡೆಯ ಗೌತಮ್‌ ಅದಾನಿ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದ್ದಾರೆ. ಅವರು ಒಂದು ವರ್ಷದಲ್ಲಿ ₹1,002 ಕೋಟಿ ಸಂಪತ್ತು ವೃದ್ಧಿಸಿಕೊಳ್ಳುವ ಮೂಲಕ ಒಟ್ಟು ಸಂಪತ್ತು ಮೌಲ್ಯ ₹5.05 ಲಕ್ಷ ಕೋಟಿ ದಾಟಿದೆ. ಮುಕೇಶ್‌ ಅಂಬಾನಿ ಸೇರಿದಂತೆ ಎಲ್‌. ಎನ್‌. ಮಿತ್ತಲ್‌, ದಿಲೀಪ್‌ ಶಾಂಘ್ವಿ, ಕುಮಾರ ಮಂಗಳಂ ಬಿರ್ಲಾ, ಶಿವ್‌ ನಾಡರ್‌ ಈ ಐವರು ಸತತ ಹತ್ತು ವರ್ಷಗಳಿಂದಲೂ ದೇಶದ ಟಾಪ್‌ 10 ಸಿರಿವಂತರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ದೇಶದ ಟಾಪ್‌ 10 ಸಿರಿವಂತರ ಯಾರು? ಅವರ ಸಂಪತ್ತಿನ ಒಟ್ಟು ಮೌಲ್ಯ ಎಷ್ಟು? ಇವರ ಒಂದು ದಿನದ ಸಂಪಾದನೆ ಎಷ್ಟಿದೆ ಎಂಬುದನ್ನು ನೋಡಿದರೆ ಅಚ್ಚರಿಯಾಗುತ್ತದೆ. ಮುಕೇಶ್‌ ಅಂಬಾನಿ ಮತ್ತು ಕುಟುಂಬದ ಒಂದು ದಿನ ಸಂಪಾದನೆಯೇ 163 ಕೋಟಿ ರೂಪಾಯಿಯಷ್ಟಿದೆ. ಗೌತಮ್‌ ಅದಾನಿ ಮತ್ತು ಕುಟುಂಬದ ಒಂದು ದಿನದ ಸಂಪಾದನೆ ಬರೋಬ್ಬರಿ 1,002 ಕೋಟಿ ರೂಪಾಯಿಯಷ್ಟಿದೆ. ದೇಶದ ಟಾಪ್-10 ಸಿರಿವಂತರ ಸಂಪತ್ತಿನ ಕುರಿತು ವಿವರ ಪಟ್ಟಿ ಇಲ್ಲಿದೆ. ಸೆಪ್ಟೆಂಬರ್‌ 15ರವರೆಗಿನ ಅಂಕಿ-ಅಂಶಗಳನ್ನು ಆಧರಿಸಿ ಈ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ.
ಕ್ರಮ ಸಂಖ್ಯೆ ಹೆಸರು ಕಂಪನಿ ಒಟ್ಟು ಸಂಪತ್ತು ದಿನದ ಸಂಪಾದನೆ
1 ಮುಕೇಶ್‌ ಅಂಬಾನಿ (64) ರಿಯಲಯನ್ಸ್‌ ಇಂಡಸ್ಟ್ರೀಸ್‌ ₹ 7.18 ಲಕ್ಷ ಕೋಟಿ ₹163 ಕೋಟಿ
2 ಗೌತಮ್‌ ಅದಾನಿ (59) ಅದಾನಿ ₹ 5.05 ಲಕ್ಷ ಕೋಟಿ ₹1002 ಕೋಟಿ
3 ಶಿವ ನಾಡರ್‌ (76) ಎಚ್‌ಸಿಎಲ್‌ ₹ 2.36 ಲಕ್ಷ ಕೋಟಿ ₹260 ಕೋಟಿ
4 ಎಸ್‌.ಪಿ.ಹಿಂದುಜಾ (85) ಹಿಂದುಜಾ ₹ 2.20 ಲಕ್ಷ ಕೋಟಿ ₹209 ಕೋಟಿ
5 ಎಲ್‌.ಎನ್‌.ಮಿತ್ತಲ್‌ (71) ಆರ್ಸೆಲರ್ ಮಿತ್ತಲ್‌ ₹ 1.74 ಲಕ್ಷ ಕೋಟಿ ₹312 ಕೋಟಿ
6 ಸೈರಸ್ ಎಸ್‌ ಪೊನಾವಾಲಾ (80) ಸೀರಂ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯಾ ₹ 1.63 ಲಕ್ಷ ಕೋಟಿ ₹190 ಕೋಟಿ
7 ರಾಧಾಕಿಶನ್‌ ದಮಾನಿ (66) ಅವೆನ್ಯೂ ಸೂಪರ್‌ಮಾರ್ಟ್ಸ್‌ ₹ 1.54 ಲಕ್ಷ ಕೋಟಿ ₹184 ಕೋಟಿ
8 ವಿನೋದ್‌ ಶಾಂತಿಲಾಲ್‌ ಅದಾನಿ ಅದಾನಿ ₹ 1.31 ಲಕ್ಷ ಕೋಟಿ ₹245 ಕೋಟಿ
9 ಕುಮಾರ್‌ ಮಂಗಳಂ ಬಿರ್ಲಾ (54) ಆದಿತ್ಯಾ ಬಿರ್ಲಾ ₹ 1.22 ಲಕ್ಷ ಕೋಟಿ ₹242 ಕೋಟಿ
10 ಜಯ್‌ ಚೌಧರಿ (62) ಜಿಸ್ಕೇಲರ್‌ ₹ 1.21 ಲಕ್ಷ ಕೋಟಿ ₹153 ಕೋಟಿ