ಕ್ರಿಪ್ಟೋ ಕರೆನ್ಸಿ ಬಗ್ಗೆ ಮತ್ತೆ ಕಳವಳ ವ್ಯಕ್ತಪಡಿಸಿದ ಆರ್‌ಬಿಐ ಗವರ್ನರ್‌ ಶಕ್ತಿಕಾಂತ ದಾಸ್‌!

ಕ್ರಿಪ್ಟೋಕರೆನ್ಸಿಗಳಲ್ಲಿ ವಹಿವಾಟು ನಡೆಸುತ್ತಿರುವ ಭಾರತೀಯ ಸಂಖ್ಯೆ ಕುರಿತು ವೈಭವೀಕರಿಸಲಾಗುತ್ತಿದೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಗವರ್ನರ್‌ ಶಕ್ತಿಕಾಂತ ದಾಸ್‌ ಹೇಳಿದ್ದಾರೆ.

ಕ್ರಿಪ್ಟೋ ಕರೆನ್ಸಿ ಬಗ್ಗೆ ಮತ್ತೆ ಕಳವಳ ವ್ಯಕ್ತಪಡಿಸಿದ ಆರ್‌ಬಿಐ ಗವರ್ನರ್‌ ಶಕ್ತಿಕಾಂತ ದಾಸ್‌!
Linkup
ಮುಂಬೈ: ಕ್ರಿಪ್ಟೋಕರೆನ್ಸಿಗಳಲ್ಲಿ ವಹಿವಾಟು ನಡೆಸುತ್ತಿರುವ ಭಾರತೀಯ ಸಂಖ್ಯೆ ಕುರಿತು ವೈಭವೀಕರಿಸಲಾಗುತ್ತಿದೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ () ಗವರ್ನರ್‌ ಶಕ್ತಿಕಾಂತ ದಾಸ್‌ ಹೇಳಿದ್ದಾರೆ. ಈ ಮೂಲಕ ವರ್ಚುವಲ್‌ ಕರೆನ್ಸಿ ಕುರಿತಂತೆ ಮತ್ತೊಮ್ಮೆ ಕಳವಳ ವ್ಯಕ್ತಪಡಿಸಿದ್ದಾರೆ. ಭಾರತದಲ್ಲಿ ಕ್ರಿಪ್ಟೋಕರೆನ್ಸಿಯಲ್ಲಿ ಹೂಡಿಕೆ ಮಾಡಿರುವ ಶೇ.70ರಷ್ಟು ಹೂಡಿಕೆದಾರರು 3000 ರೂಪಾಯಿಗಿಂತ ಹೆಚ್ಚು ಹೂಡಿಕೆ ಮಾಡಿಲ್ಲ. ಆದರೆ, ಎಕ್ಸ್‌ಚೇಂಜ್‌ಗಳು ಇತ್ತೀಚೆಗೆ ಜಾಹೀತು ಮೂಲಕ ಕ್ರಿಪ್ಟೋ ವಹಿವಾಟು ಅಂಕಿಸಂಖ್ಯೆ ಕುರಿತು ವೈಭವೀಕರಿಸಿವೆ. ಭಾರತದಲ್ಲಿ ಸುಮಾರು 10 ಕೋಟಿಗೂ ಹೆಚ್ಚು ಮಂದಿ ಕ್ರಿಪ್ಟೋ ವಲಯದಲ್ಲಿ ಸಕ್ರಿಯರಾಗಿದ್ದು, ಸುಮಾರು 6 ಲಕ್ಷ ಕೋಟಿ ರೂಪಾಯಿಯಷ್ಟು ಕ್ರಿಪ್ಟೋಕರೆನ್ಸಿಗಳಲ್ಲಿ ಹೂಡಿಕೆಯಾಗಿದೆ ಎಂದು ಎಕ್ಸ್‌ಚೇಂಜ್‌ಗಳು ಜಾಹೀರಾತುಗಳಲ್ಲಿ ಹೇಳಿಕೊಂಡಿವೆ ಎಂದಿದ್ದಾರೆ. ಕ್ರಿಪ್ಟೋಕರೆನ್ಸಿಯಲ್ಲಿ ಹೂಡಿಕೆಯಾಗುತ್ತಿರುವ ಪ್ರಮಾಣದಲ್ಲಿ ಖಂಡಿತವಾಗಿಯೇ ಹೆಚ್ಚಳವಾಗಿದೆ. ಆದರೆ, ಕ್ರಿಪ್ಟೋ ಎಕ್ಸ್‌ಚೇಂಜ್‌ಗಳು ಹೇಳುವ ಅಂಕಿ-ಸಂಖ್ಯೆಗಳ ಬಗ್ಗೆ ನನಗೆ ಖಚಿತತೆ ಇಲ್ಲ. ಏಕೆಂದರೆ, ನಾವು ಹೊಂದಿರುವ ಯಾವುದೇ ಮಾಹಿತಿಯು ಸಮಂಜಸವಾದ ವಿಶ್ವಾಸ ಹೊಂದಿರಬೇಕು. ಆದರೆ, ಕ್ರಿಪ್ಟೋ ಮಾರುಕಟ್ಟೆಯಲ್ಲಿ ಭಾಗವಹಿಸುವವರ ಸಂಖ್ಯೆಯನ್ನು ಗಮನಿಸಿದರ, ಇದನ್ನು ವೈಭವೀಕರಿಸಲಾಗುತ್ತಿದೆ ಎಂದು ನಾನು ಹೇಳಬಲ್ಲೆ ಎಂದು ಶಕ್ತಿಕಾಂತ್‌ ದಾಸ್‌ ತಿಳಿಸಿದ್ದಾರೆ. ಸುಮಾರು ಶೇ.70ರಷ್ಟು ಅಥವಾ ಅದಕ್ಕಿಂತಲೂ ಹೆಚ್ಚಿನ ಕ್ರಿಪ್ಟೋ ಹೂಡಿಕೆದಾರರು ಸುಮಾರು 1000ದಿಂದ 3000 ರೂಪಾಯಿ ವರೆಗಷ್ಟೇ ಹೂಡಿಕೆ ಮಾಡಿದ್ದಾರೆ. ಬಹುಶಃ ಸಾಧ್ಯವಾದಷ್ಟು ಜನರನ್ನು ಕ್ರಿಪ್ಟೋ ಎಕ್ಸ್‌ಚೇಂಜ್‌ಗಳಲ್ಲಿ ನೋಂದಾಯಿಸಲು ಪ್ರಯತ್ನಿಸಲಾಗುತ್ತಿದೆ ಎಂದು ದಾಸ್ ಹೇಳಿದರು. ಈ ಹಿಂದೆಯೂ ಅನುಮಾನ ವ್ಯಕ್ತಪಡಿಸಿದ್ದ ದಾಸ್‌ ಆರ್‌ಬಿಐ ಗವರ್ನರ್‌ ಶಕ್ತಿಕಾಂತ್‌ ದಾಸ್‌ ಈ ಹಿಂದೆಯೂ ಕ್ರಿಪ್ಟೋ ಕರೆನ್ಸಿ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಕ್ರಿಪ್ಟೋ ಕರೆನ್ಸಿಗಳ ಬಗೆಗಿನ ತಮ್ಮ ಗಂಭೀರ ಹಾಗೂ ಪ್ರಮುಖ ಕಾಳಜಿಗಳನ್ನು ಕೇಂದ್ರ ಸರಕಾರದ ಗಮನಕ್ಕೆ ತರಲಾಗಿದೆ ಎಂದೂ ತಿಳಿಸಿದ್ದರು. ಅಷ್ಟೇ ಅಲ್ಲದೆ, ಕ್ರಿಪ್ಟೋ ಪ್ಲಾಟ್‌ಫಾರ್ಮ್‌ಗಳನ್ನು ಹೇಗೆ ನಿಭಾಯಿಸಬೇಕು ಎಂಬುದರ ಬಗ್ಗೆ ಕೇಂದ್ರ ಸರಕಾರವೇ ಒಂದು ನಿರ್ಧಾರ ತೆಗೆದುಕೊಳ್ಳಬೇಕು ಎಂದೂ ಹೇಳಿದ್ದರು. ಭಾರತೀಯ ಆರ್ಥಿಕತೆ ಮುಂದುವರೆಯಲು ಖಾಸಗಿ ಕ್ರಿಪ್ಟೋ ಕರೆನ್ಸಿಗಳ ಕೊಡುಗೆ ಕುರಿತು ನಮಗೆ ‘ವಿಶ್ವಾಸಾರ್ಹ ಉತ್ತರಗಳು’ ಬೇಕು ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ್‌ ದಾಸ್ ಕೇಳಿದ್ದರು. ಕಳೆದ ಫೆಬ್ರವರಿಯಲ್ಲಿ ದೇಶದ ಆರ್ಥಿಕತೆಯ ಸ್ಥಿರತೆ ಮೇಲೆ ಕ್ರಿಪ್ಟೋ ಕರೆನ್ಸಿಗಳು ಉಂಟು ಮಾಡಬಹುದಾದ ಅಪಾಯಗಳ ಬಗ್ಗೆಯೂ ಅವರು ಕಾಳಜಿ ವ್ಯಕ್ತಪಡಿಸಿದ್ದರು.