ಮುಂದುವರಿದ ಕ್ರಿಪ್ಟೋಕರೆನ್ಸಿ ಬೆಲೆ ಕುಸಿತ: ಸೆ.26ರಂದು ಟಾಪ್-10 ಡಿಜಿಟಲ್ ಕರೆನ್ಸಿಗಳ ಬೆಲೆ ಎಷ್ಟಿದೆ?
ಮುಂದುವರಿದ ಕ್ರಿಪ್ಟೋಕರೆನ್ಸಿ ಬೆಲೆ ಕುಸಿತ: ಸೆ.26ರಂದು ಟಾಪ್-10 ಡಿಜಿಟಲ್ ಕರೆನ್ಸಿಗಳ ಬೆಲೆ ಎಷ್ಟಿದೆ?
ಹಲವು ರಾಷ್ಟ್ರಗಳು ಕ್ರಿಪ್ಟೋಕರೆನ್ಸಿಗಳ ಮೇಲೆ ನಿಷೇಧ ಹೇರಿದ್ದರೂ, ಕ್ರಿಪ್ಟೋಕರೆನ್ಸಿಗಳ ಬೆಲೆ ಏರುತ್ತಲೇ ಸಾಗಿದೆ. ಭಾರತದಲ್ಲಿ ಕೂಡ ಆರ್‌ಬಿಐ ನಿರ್ದೇಶನವಿದ್ದರೂ ಕ್ರಿಪ್ಟೋಕರೆನ್ಸಿಗಳ ಮೇಲೆ ಭಾರತೀಯರು ಬಿಲಿಯನ್ ಡಾಲರ್‌ಗಳಷ್ಟು ಹಣ ಹೂಡಿಕೆ ಮಾಡಿದ್ದಾರೆ.
ಹೊಸದಿಲ್ಲಿ: ಚೀನಾ ಸೇರಿದಂತೆ ವಿಶ್ವದ ಹಲವು ರಾಷ್ಟ್ರಗಳು ಕ್ರಿಪ್ಟೋಕರೆನ್ಸಿಗಳ ಮೇಲೆ ನಿಷೇಧ ಹೇರಿದ್ದರೂ, ಕ್ರಿಪ್ಟೋಕರೆನ್ಸಿಗಳ ಬೆಲೆ ಏರುತ್ತಲೇ ಸಾಗಿದೆ. ಭಾರತದಲ್ಲಿ ಕೂಡ ಆರ್‌ಬಿಐ ನಿರ್ದೇಶನವಿದ್ದರೂ ಕ್ರಿಪ್ಟೋಕರೆನ್ಸಿಗಳ ಮೇಲೆ ಭಾರತೀಯರು ಬಿಲಿಯನ್ ಡಾಲರ್‌ಗಳಷ್ಟು ಹಣ ಹೂಡಿಕೆ ಮಾಡಿದ್ದಾರೆ. ಕ್ರಿಪ್ಟೋ ಕರೆನ್ಸಿಗಳ ಮೌಲ್ಯ ಭಾನುವಾರ ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿದೆ. ಆದರೂ, ಅವುಗಳ ಮೇಲಿನ ಹೂಡಿಕೆ ಹೆಚ್ಚುತ್ತಲೇ ಇದೆ.
ಕ್ರಿಪ್ಟೋ ಕರೆನ್ಸಿಗಳ ನಾಯಕನೆಂದೇ ಕರೆಯಲಾಗುವ ಬಿಟ್‌ಕಾಯಿನ್ ಬೆಲೆಯಲ್ಲಿ ಭಾನುವಾರವೂ ಇಳಿಕೆಯಾಗಿದೆ. ಪ್ರಸ್ತುತ ಒಂದು ಬಿಟ್‌ಕಾಯಿನ್‌ಗೆ 42,254 ಡಾಲರ್ ದರದಲ್ಲಿ ವಹಿವಾಟು ನಡೆಸುತ್ತಿದೆ. ಕಳೆದ 24 ಗಂಟೆಗಳಲ್ಲಿ ಶೇ. 0.93ರಷ್ಟು ಬೆಲೆ ಕಳೆದುಕೊಂಡಿದೆ. ಈ ಮೂಲಕ ಬಿಟ್‌ಕಾಯಿನ್ ಕ್ರಿಪ್ಟೋಕರೆನ್ಸಿಯ ಮಾರುಕಟ್ಟೆ ಕ್ಯಾಪ್ 795.22 ಬಿಲಯನ್ ಡಾಲರ್‌ನಷ್ಟಿದೆ. ಕಳೆದ ಒಂದು ವಾರದಲ್ಲಿ ಮೌಲ್ಯದಲ್ಲಿ ಶೇ 10.38ರಷ್ಟು ಕುಸಿತ ಕಂಡಂತಾಗಿದೆ. ಆದಾಯಕ್ಕೆ ಸಂಬಂಧಿಸಿದಂತೆ, ಬಿಟ್‌ಕಾಯಿನ್ ಕಳೆದ ಒಂದು ವರ್ಷದಲ್ಲಿ 55.98 ಪ್ರತಿಶತದಷ್ಟು ಲಾಭ ನೀಡಿದೆ. ಬಿಟ್‌ಕಾಯಿನ್ ಕ್ರಿಪ್ಟೋಕರೆನ್ಸಿಯ ಸಾರ್ವಕಾಲಿಕ ಹೆಚ್ಚಿನ ಬೆಲೆ 64,888.99 ಡಾಲರ್ ಆಗಿದೆ.
ಇಥೆರಿಯಂ ಕ್ರಿಪ್ಟೋ ಕರೆನ್ಸಿ ಪ್ರಸ್ತುತ 2,867.18ಡಾಲರ್ ಮೌಲ್ಯದಲ್ಲಿ ವಹಿವಾಟು ನಡೆಸುತ್ತಿದೆ. ಇದೂ ಕೂಡ ಭಾನುವಾರ ಶೇ. 2.48ರಷ್ಟು ಇಳಿಕೆ ಕಂಡಿದೆ. ಈಥರ್ ಮೌಲ್ಯದಲ್ಲಿ ಕಳೆದ ಒಂದು ವಾರದಲ್ಲಿ ಶೇ.16.34ರಷ್ಟು ಇಳಿಕೆ ಕಂಡಿದೆ. ಕಾರ್ಡಾನೋ ಬೆಲೆಯಲ್ಲಿಯೂ ಶೇ.5.25ರಷ್ಟು ಇಳಿಕೆಯಾಗಿದೆ.
ವಿಶ್ವದ ಟಾಪ್ 10 ಕ್ರಿಪ್ಟೋಕರೆನ್ಸಿಗಳ ಪೈಕಿ 7 ಕರೆನ್ಸಿಗಳ ಮೌಲ್ಯ ಭಾನುವಾರ ಇಳಿಕೆಯಾಗಿದೆ. ಕಾರ್ಡಾನೋ ಮತ್ತು ಬಿನಾನ್ಸ್ ಕಾಯಿನ್‌ಗಳ ಮೌಲ್ಯದಲ್ಲಿ ಶೇ. 5ಕ್ಕಿಂತಲೂ ಹೆಚ್ಚು ಇಳಿಕೆಯಾಗಿದೆ. ಯುಎಸ್ಡಿ ಕಾಯಿನ್, ಪೋಲ್ಕಾಡಾಟ್ ಮತ್ತು ಟೆಥರ್ ಗಳ ಮೌಲ್ಯದಲ್ಲಿ ಸ್ವಲ್ಪ ಏರಿಕೆಯಾಗಿದೆ.
ವಿಶ್ವದ ಅತಿ ಹೆಚ್ಚು ದುಬಾರಿಯಾದ ಬಿಟ್‌ಕಾಯಿನ್ ಮೌಲ್ಯದಲ್ಲೂ ಶೇ.0.93ರಷ್ಟು ಇಳಿಕೆಯಾಗಿದೆ. ಸೆಪ್ಟೆಂಬರ್ ಮೊದಲ ವಾರದಲ್ಲಿ ಬಿಟ್‌ಕಾಯಿನ್ ಮೌಲ್ಯ ನಾಲ್ಕು ತಿಂಗಳ ಗರಿಷ್ಠ ಮಟ್ಟಕ್ಕೆ (52,000 ಡಾಲರ್) ಏರಿಕೆಯಾಗಿತ್ತು. ಆದರೆ, ಎಲ್‌ಸಾಲ್ವೆಡಾರ್ ಕಾನೂನು ಮಾನ್ಯತೆ ದೊರೆತ ನಂತರ ಬಿಟ್‌ಕಾಯಿನ್ ಮೌಲ್ಯ ಪಾತಾಳಕ್ಕೆ ಬಿದ್ದಿತ್ತು. ಬಿಟ್‌ಕಾಯಿನ್‌ಗೆ ಎಲ್ ಸಾಲ್ವೆಡಾರ್ ಕಾನೂನು ಮಾನ್ಯತೆ ನೀಡಿರುವ ಬೆನ್ನಲ್ಲೇ ಹೊಂಡುರಾಸ್ ಮತ್ತು ಗ್ವಾಟೆಮಾಲಾ ರಾಷ್ಟ್ರದ ಕೇಂದ್ರ ಬ್ಯಾಂಕುಗಳು ಕೂಡ ಬಿಟ್‌ಕಾಯಿನ್‌ಗೆ ಕಾನೂನು ಮಾನ್ಯತೆ ನೀಡಲು ಚಿಂತನೆ ನಡೆಸಿವೆ.
ವಿಶ್ವದ ಪ್ರಮುಖ ಕ್ರಿಪ್ಟೋಕರೆನ್ಸಿಗಳ ಮೌಲ್ಯ ಎಷ್ಟು
ವಿಶ್ವದ ಟಾಪ್ 10 ವಹಿವಾಟು ನಡೆಸಿದ ಕ್ರಿಪ್ಟೋಕರೆನ್ಸಿಗಳ ಪೈಕಿ ಬಹುತೇಕ ಕರೆನ್ಸಿಗಳು ಕಳೆದ 24 ಗಂಟೆಗಳಲ್ಲಿ ಮೌಲ್ಯ ಕಳೆದುಕೊಂಡಿವೆ. ಜಾಗತಿಕ ಮಾರುಕಟ್ಟೆಯಲ್ಲಿ ಸೆಪ್ಟೆಂಬರ್ 20ರಂದು ಅವುಗಳ ಮೌಲ್ಯ ಹೀಗಿದೆ.
ಬಿಟ್‌ಕಾಯಿನ್: $42,254
ಇಥೆರಿಯಂ: $2,857.64
ಬಿನಾನ್ಸ್ ಕಾಯಿನ್ : $340.47
ಟೆಥರ್: $1
ಕಾರ್ಡಾನೋ: $2.25
ಡೋಜೆಕಾಯಿನ್: $0.22
ಎಕ್ಸ್‌ಆರ್‌ಪಿ: $0.9876
ಪೊಲ್‌ಕಾಡಾಟ್: $32.11
ಯುಎಸ್‌ಡಿ ಕಾಯಿನ್: $1
ಸೊಲಾನೋ: $145.70
ಎಲ್ ಸಾಲ್ವೆಡಾರ್ ರಾಷ್ಟ್ರವು ತನ್ನ ಬಿಟ್‌ಕಾಯಿನ್ ಕಾನೂನನ್ನು ಸೆಪ್ಟೆಂಬರ್ 7 ರಂದು ಜಾರಿಗೊಳಿಸಿದೆ. ಈ ಬೆನ್ನಲ್ಲೇ ಹೂಡಿಕೆದಾರರಿಗೆ ನಿರೀಕ್ಷೆಗಳು ಹೆಚ್ಚಾಗಿವೆ. ತಜ್ಞರ ಪ್ರಕಾರ, ಬಿಟ್ ಕಾಯಿನ್ ಇನ್ನೂ ಪ್ರಬಲವಾಗಿದೆ. ಕಳೆದ ಎಂಟು ವಾರಗಳಲ್ಲಿ ಬಿಟ್‌ಕಾಯಿನ್ ಪ್ರಬಲವಾಗುತ್ತಿದೆ ಮತ್ತು ಅತಿಯಾದ ಖರೀದಿಯಾಗಿದೆ. ಬೆಲೆ ಜಿಗಿಯುತ್ತಿರುವ ಹಿನ್ನಲೆಯಲ್ಲಿ ವೈಯಕ್ತಿಕ ಹೂಡಿಕೆದಾರರ ಆಸಕ್ತಿಯೂ ಹೆಚ್ಚಾಗಿದೆ ಎಂದು ಗೆಲಾಕ್ಸಿ ಡಿಜಿಟಲ್ ಹೋಲ್ಡಿಂಗ್ಸ್‌ನ ಚೀಫ್ ಎಗ್ಸಿಕ್ಯುಟೀವ್ ಆಫೀಸರ್ ಮೈಕ್ ನೊವೋಗ್ರೆಟ್ ಇತ್ತೀಚೆಗೆ ತಿಳಿಸಿದ್ದರು.