2.6 ಕೋಟಿ ಐಟಿ ರಿಟರ್ನ್‌ ಸಲ್ಲಿಕೆ, ಬಗೆಹರಿದ ಪೋರ್ಟಲ್‌ ಸಮಸ್ಯೆ - ಸರಕಾರ

ಐಟಿ ರಿಟರ್ನ್ಸ್‌ ಸಲ್ಲಿಕೆಗೆ ನಿಗದಿಪಡಿಸಿರುವ ಅಂತಿಮ ದಿನಾಂಕವನ್ನು ಡಿಸೆಂಬರ್‌ ಬಳಿಕ ಮುಂದೂಡಿಕೆ ಮಾಡುವುದಿಲ್ಲ ಎಂದು ಸರಕಾರ ಹೇಳಿದ್ದು, ಆದಷ್ಟು ಬೇಗ ರಿಟರ್ನ್ಸ್‌ ಸಲ್ಲಿಕೆ ಮಾಡುವಂತೆ ತೆರಿಗೆದಾರರಿಗೆ ಸೂಚಿಸಿದೆ.

2.6 ಕೋಟಿ ಐಟಿ ರಿಟರ್ನ್‌ ಸಲ್ಲಿಕೆ, ಬಗೆಹರಿದ ಪೋರ್ಟಲ್‌ ಸಮಸ್ಯೆ - ಸರಕಾರ
Linkup
ಹೊಸದಿಲ್ಲಿ: ಸಲ್ಲಿಕೆಗೆ ನಿಗದಿಪಡಿಸಿರುವ ಅಂತಿಮ ದಿನಾಂಕವನ್ನು ಡಿಸೆಂಬರ್‌ ನಂತರ ಮುಂದೂಡಿಕೆ ಮಾಡುವುದಿಲ್ಲ ಎಂದು ಸರಕಾರ ಸ್ಪಷ್ಟಪಡಿಸಿದ್ದು, ಆದಷ್ಟು ಬೇಗ ರಿಟರ್ನ್ಸ್‌ ಸಲ್ಲಿಕೆ ಮಾಡುವಂತೆ ತೆರಿಗೆದಾರರಿಗೆ ಸೂಚಿಸಿದೆ. ಜತೆಗೆ ಹೊಸ ಪೋರ್ಟಲ್‌ನಲ್ಲಿದ್ದ ಹೆಚ್ಚಿನ ಸಮಸ್ಯೆಗಳು ನಿವಾರಣೆಯಾಗಿವೆ ಎಂದೂ ಮಾಹಿತಿ ನೀಡಿದೆ. ಜ್ಞಾಪನೆ ಸಂದೇಶಗಳನ್ನು ಕಳುಹಿಸುವ ಹೊರತಾಗಿ ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ)ಯು ತನ್ನ ಬಳಿ ಇರುವ ಆದಾಯ ಮತ್ತು ಇತರ ಆಸ್ತಿಗಳ ವಿವರಗಳನ್ನು ಬಳಸಿಕೊಂಡು ಪೂರ್ಣ ಆದಾಯದ ವಿವರಗಳನ್ನು ಬಹಿರಂಗಪಡಿಸದೇ ರಿಟರ್ನ್ಸ್‌ ಫೈಲ್‌ ಮಾಡಿರುವವರನ್ನು ಪತ್ತೆ ಹಚ್ಚಬೇಕು ಎಂದು ಆದಾಯ ಇಲಾಖೆ ಸೂಚಿಸಿದೆ. ಸಿಬಿಡಿಟಿ ಬಳಿ ಇರುವ ದಾಖಲೆಗಳ ಪ್ರಕಾರ ಕಳೆದ ಬುಧವಾರದ ವೇಳೆಗೆ 2.6 ಕೋಟಿ ಜನರು ಆದಾಯ ತೆರಿಗೆ ರಿಟರ್ನ್ಸ್‌ಗಳನ್ನು ಫೈಲ್‌ ಮಾಡಿದ್ದಾರೆ. ಇವರಲ್ಲಿ 2 ಕೋಟಿ ಮಂದಿ ಆನ್‌ಲೈನ್‌ನಲ್ಲಿ ವೆರಿಫೈ ಕೂಡ ಮಾಡಿದ್ದಾರೆ. ಇನ್ನೂ 28 ಲಕ್ಷ ರಿಟರ್ನ್ಸ್‌ಗಳು ಫೈಲಿಂಗ್‌ ಹಾದಿಯಲ್ಲಿವೆ. ಹಲವು ಜನರಿಗೆ ರಿಫಂಡ್‌ ಕೂಡ ಕೈಸೇರಿದೆ. ಆರಂಭದಲ್ಲೇ ರಿಟರ್ನ್ಸ್‌ ಫೈಲ್‌ ಮಾಡಿದವರಿಗೆ ಶೀಘ್ರದಲ್ಲೇ ಹಣ ಪಾವತಿಯಾಗಿದೆ ಎಂದು ಸರಕಾರಿ ಮೂಲಗಳು ವಿಜಯ ಕರ್ನಾಟಕ ಸೋದರ ಪತ್ರಿಕೆ 'ಟೈಮ್ಸ್‌ ಆಫ್‌ ಇಂಡಿಯಾ'ಗೆ ತಿಳಿಸಿವೆ. ಹೊಸ ಆದಾಯ ತೆರಿಗೆ ಪೋರ್ಟಲ್‌ನ್ನು ತಯಾರಿಸಿದ್ದ , ಇದರಲ್ಲಿದ್ದ ಸಮಸ್ಯೆಗಳ ಕಾರಣಕ್ಕೆ ಭಾರಿ ಟೀಕೆ ಎದುರಿಸಿತ್ತು. ಆದರೆ ಇದೀಗ ಈ ಹೊಸ ಪೋರ್ಟಲ್‌ನಲ್ಲಿದ್ದ ಹೆಚ್ಚಿನ ಸಮಸ್ಯೆಗಳನ್ನು ಪರಿಹರಿಸಲಾಗಿದೆ ಎಂದು ಸರಕಾರ ಹೇಳಿದೆ. ಮತ್ತು ಈಗ ವ್ಯಕ್ತಿಗಳು ಆದಾಯ ತೆರಿಗೆ ರಿಟರ್ನ್ಸ್‌ನ್ನು ಯಾವುದೇ ತೊಂದರೆ ಇಲ್ಲದೇ ಫೈಲ್‌ ಮಾಡಬಹುದು ಎಂದು ಹೇಳಿದೆ. ಪೋರ್ಟಲ್‌ನಲ್ಲಿ ಸಮಸ್ಯೆಗಳು ಕಂಡು ಬಂದಿದ್ದ ಸಂದರ್ಭದಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಇದನ್ನು ಇನ್ಫೋಸಿಸ್‌ನ ಗಮನಕ್ಕೆ ತಂದು, ಪೋರ್ಟಲ್‌ನಲ್ಲಿರುವ ಸಮಸ್ಯೆಗಳನ್ನು ಪರಿಹರಿಸುವಂತೆ ಒತ್ತಾಯಿಸಿದ್ದರು. ಜತೆಗೆ ಐಟಿ ರಿಟರ್ನ್ಸ್‌ ಫೈಲ್‌ ಮಾಡಲು ನೀಡಿದ್ದ ಅಂತಿಮ ಗಡುವನ್ನು ವಿಸ್ತರಿಸುವಂತೆಯೂ ಸರಕಾರದದ ಮೇಲೆ ಒತ್ತಡ ಹೇರಿದ್ದರು. ಹೊಸ ವಾರ್ಷಿಕ ಆದಾಯ ಹೇಳಿಕೆಯಿಂದ ತೆರಿಗೆದಾರರಿಗೆ ಸಾಕಷ್ಟು ಅನುಕೂಲವಾಗಿದೆ ಎಂದು ಸರಕಾರ ಹೇಳಿದೆ. ಹೊಸ ಸ್ಟೇಟ್‌ಮೆಂಟ್‌ನಿಂದ ಹೆಚ್ಚಿನ ಎಲ್ಲಾ ಮಾಹಿತಿಗಳು ಆದಾಯ ತೆರಿಗೆ ಪೋರ್ಟಲ್‌ನಲ್ಲಿ ಲಭ್ಯವಾಗುವಂತೆ ಮಾಡಲಾಗಿದೆ ಎಂದು ಅದು ತಿಳಿಸಿದೆ.