ಕ್ರಿಪ್ಟೋ ಕರೆನ್ಸಿ ಖಾತೆ ತೆರೆಯುವುದು ಹೇಗೆ? ಇಲ್ಲಿದೆ ಸರಳ ವಿಧಾನ!

ನೀವು ಕೂಡ ಕ್ರಿಪ್ಟೋ ಟ್ರೇಡಿಂಗ್ ಖಾತೆ ತೆರೆಯಲು ಯೋಜಿಸುತ್ತಿದ್ದರೆ, ನೀವು ಹೂಡಿಕೆ ಮಾಡುವ ಮೊದಲು ಕ್ರಿಪ್ಟೋ ಮಾರುಕಟ್ಟೆಯ ಪ್ರತಿಯೊಂದು ಅಂಶವನ್ನು ಅರ್ಥಮಾಡಿಕೊಳ್ಳಬೇಕು. ಕ್ರಿಪ್ಟೋ ಖಾತೆ ತೆರೆಯುವ ಸರಳ ವಿಧಾನ ಇಲ್ಲಿದೆ.

ಕ್ರಿಪ್ಟೋ ಕರೆನ್ಸಿ ಖಾತೆ ತೆರೆಯುವುದು ಹೇಗೆ? ಇಲ್ಲಿದೆ ಸರಳ ವಿಧಾನ!
Linkup
ಹೊಸದಿಲ್ಲಿ: ಕುರಿತು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಕಳವಳ ವ್ಯಕ್ತಪಡಿಸಿದ್ದರೂ ಕೂಡ ದೇಶದಲ್ಲಿ ಕ್ರಿಪ್ಟೋಕರೆನ್ಸಿ ಮಾರುಕಟ್ಟೆ ಗಮನಾರ್ಹ ಬೆಳವಣಿಗೆ ಕಂಡಿದೆ. ಬಿಟ್‌ಕಾಯಿನ್, ಯುಥೆರಿಯಮ್, ಲಿಟ್‌ಕಾಯಿನ್, ಟೆಥರ್, ಡೋಜಿಕೋಯಿನ್‌ನಂತಹ ಕ್ರಿಪ್ಟೋಕರೆನ್ಸಿಗಳ ಜನಪ್ರಿಯತೆ ಹೂಡಿಕೆದಾರ ಗಮನ ಸೆಳೆದಿದೆ. ಅಲ್ಲದೆ, ಕ್ರಿಪ್ಟೋ ಕರೆನ್ಸಿ ಕುರಿತು ಸಂದೇಹ ಸಂದೇಹ ವ್ಯಕ್ತಪಡಿಸುವವರೂ ಕೂಡ ಒಮ್ಮೆ ಗಮನಹರಿಸುವಂತೆ ಮಾಡಿದೆ. ವರದಿಗಳ ಪ್ರಕಾರ ಕಳೆದ ವರ್ಷಕ್ಕೆ ಹೋಲಿಸಿದರೆ ಕ್ರಿಪ್ಟೋ ಮಾರುಕಟ್ಟೆಯಲ್ಲಿನ ಹೂಡಿಕೆ ಶೇ. 200ಕ್ಕಿಂತಲೂ ಹೆಚ್ಚಿನ ಬೆಳವಣಿಗೆ ಕಂಡಿದೆ. ಇದೆಲ್ಲವನ್ನು ಗಮನಿಸಿದ ನೀವು ಕೂಡ ಕ್ರಿಪ್ಟೋ ಟ್ರೇಡಿಂಗ್ ಖಾತೆ ತೆರೆಯಲು ಯೋಜಿಸುತ್ತಿದ್ದರೆ, ನೀವು ಹೂಡಿಕೆ ಮಾಡುವ ಮೊದಲು ಕ್ರಿಪ್ಟೋ ಮಾರುಕಟ್ಟೆಯ ಪ್ರತಿಯೊಂದು ಅಂಶವನ್ನು ಅರ್ಥಮಾಡಿಕೊಳ್ಳಬೇಕು. ಕ್ರಿಪ್ಟೋ ಟ್ರೇಡಿಂಗ್‌ ಖಾತೆ ತೆರೆಯುವುದು ಹೇಗೆ? ಕ್ರಿಪ್ಟೋ ಟ್ರೇಡಿಂಗ್ ಖಾತೆ ತೆರೆಯುವ ಪ್ರಕ್ರಿಯೆ ಅತ್ಯಂತ ಸರಳವಾದು ಮತ್ತು ಸುಲಭವೂ ಹೌದು. ಆದರೆ ಖಾತೆ ತೆರೆಯುವ ಮೊದಲು ಕ್ರಿಪ್ಟೋಕರೆನ್ಸಿ ಕುರಿತಂತೆ ನೀವು ಸರಿಯಾದ ಸಂಶೋಧನೆ ಮಾಡಬೇಕು. ವಾಜಿರ್‌ಎಕ್ಸ್‌ (WazirX) ಭಾರತದ ಅತ್ಯಂತ ಜನಪ್ರಿಯ ಕ್ರಿಪ್ಟೋಕರೆನ್ಸಿ ವಿನಿಮಯ ಕೇಂದ್ರಗಳಲ್ಲಿ ಒಂದಾಗಿದೆ. ಇಲ್ಲಿ ತಿಳಿಸಿರುವ ಸರಳ ಹಂತಗಳನ್ನು ಅನುಸರಿಸುವ ಮೂಲಕ ನೀವು ವಾಜಿರ್‌ಎಕ್ಸ್‌ ಏಜೆನ್ಸಿ ಮೂಲಕ ಖಾತೆ ತೆರೆಯಬಹುದು. ಹಂತ 1: ಕ್ರಿಪ್ಟೋ ಟ್ರೇಡಿಂಗ್ ಖಾತೆ ತೆರೆಯಲು WazirX ಅಪ್ಲಿಕೇಷನ್‌ ಡೌನ್‌ಲೋಡ್ ಮಾಡಿಕೊಳ್ಳಬೇಕು. ಅದರ ಅಧಿಕೃತ ವೆಬ್‌ಸೈಟ್ https://wazirx.com/ ಗೆ ಹೋಗಿ ಮತ್ತು ಸೈನ್ ಅಪ್ ಬಟನ್ ಮೇಲೆ ಕ್ಲಿಕ್ ಮಾಡಿ. ಹಂತ 2: ನಂತರನಿಮ್ಮ ಇಮೇಲ್ ವಿಳಾಸವನ್ನು ನಮೂದಿಸಲು ಕೇಳಲಾಗುತ್ತದೆ. ನಂತರ ಮೇಲ್‌ಗಳನನ್ನು ಸ್ವೀಕರಿಸಲು ಪಾಸ್‌ವರ್ಡ್ ಸೆಟ್‌ ಮಾಡಿ. ಹಂತ 3: ನಿಮ್ಮ ಮೇಲ್‌ಬಾಕ್ಸ್‌ನಲ್ಲಿ ನಿಮ್ಮ ವಿಳಾಸವನ್ನು ಲೊಕೇಟ್‌ ಮಾಡಬೇಕು. ನಂತರ ಇಮೇಲ್ ಅನ್ನು ವೆರಿಫೈ ಮಾಡಬೇಕು. ನೀವು ಚೆಕ್‌ಬಾಕ್ಸ್ ಟಿಕ್ ಮಾಡುವ ಮೊದಲು ಎಲ್ಲ ನಿಯಮಗಳು ಮತ್ತು ಷರತ್ತುಗಳನ್ನು ಓದಲು ಸೂಚಿಸಲಾಗಿದೆ. ಆದರೆ, ನೀವು ಕ್ರಿಪ್ಟೋ ಖಾತೆ ಆರಂಭಿಸುವ ಮೊದಲು, ಪ್ರಕ್ರಿಯೆ ಪೂರ್ಣಗೊಳಿಸಬೇಕು. ಕ್ರಿಪ್ಟೋ ಖಾತೆಯನ್ನು ಮಾಡುವ ವಿಧಾನ ಸ್ವಲ್ಪ ಭಿನ್ನವಾಗಿದೆ. ಕ್ರಿಪ್ಟೋ ಖಾತೆಯ ಕೆವೈಸಿ ಮಾಡುವುದು ಹೇಗೆ? ಹಂತ 1: ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಲು ನೀವು ವಾಸಿಸುವ ದೇಶವನ್ನು ಆಯ್ಕೆ ಮಾಡಬೇಕು. WazirXನ ಅಧಿಕೃತ ಕರೆನ್ಸಿ ಭಾರತೀಯ ರೂಪಾಯಿಯಾಗಿದ್ದು, ಇದು ಭಾರತೀಯ ಮಾರುಕಟ್ಟೆಯಲ್ಲಿ ಮಾತ್ರ ಲಭ್ಯವಿದೆ. ಹಂತ 2: ನೀವು ಅನುಮೋದಿತ ಕೆವೈಸಿ ಹೊಂದಿದ್ದರೆ ಪೀರ್-ಟು-ಪೀರ್ ವಹಿವಾಟು ಮತ್ತು ಹಿಂಪಡೆಯುವಿಕೆ ಮಾಡಬಹುದು. ನಿಮ್ಮ ಹೆಸರು, ಹುಟ್ಟಿದ ದಿನಾಂಕ ಮತ್ತು ಸರಕಾರದಿಂದ ಮಾನ್ಯತೆ ಪಡೆದ ಗುರುತಿನ ಚೀಟಿಯನ್ನು ಪ್ರತಿಯನ್ನು ನಮೂದಿಸಬೇಕು. ಹಂತ 3: ಎಲ್ಲ ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿದ ನಂತರ, ಕ್ರಿಪ್ಟೋಕರೆನ್ಸಿ ವಿನಿಮಯವು ದೃಢೀಕರಣದೊಂದಿಗೆ ನಿಮಗೆ ಮರಳುತ್ತದೆ. ನೀವು ಒಮ್ಮೆ ದೃಢೀಕರಣ ಸ್ವೀಕರಿಸಿದ ನಂತರ, ನಿಮ್ಮ ಕ್ರಿಪ್ಟೋ ಖಾತೆ ಸೆಟ್ ಆಗಿರುತ್ತದೆ. ನಿಮ್ಮ ವಹಿವಾಟನ್ನು ನೀವು ಆರಂಭಿಸಬಹುದು.