ತಾಳೆ ಬೆಳೆ ಪ್ರದೇಶ ವಿಸ್ತರಣೆಗೆ ಸಹಾಯಧನ: ಪ್ರತಿ ಹೆಕ್ಟೇರ್‌ಗೆ ₹5 ಸಾವಿರ ಸಬ್ಸಿಡಿ

ತೋಟಗಾರಿಕೆ ಇಲಾಖೆ ವತಿಯಿಂದ 2021-22ನೇ ಸಾಲಿಗೆ ತಾಳೆಬೆಳೆ ಪ್ರದೇಶ ವಿಸ್ತರಣೆಗಾಗಿ ಸಹಾಯಧನ ನೀಡಲಾಗುತ್ತಿದೆ. ಎಣ್ಣೆ ಕಾಳುಗಳಲ್ಲೇ ಅತ್ಯಂತ ಹೆಚ್ಚು ಇಳುವರಿ ನೀಡುವ ತಾಳೆ ಬೆಳೆಯನ್ನು ಬೆಳೆಯುವುದು ಹೇಗೆಂಬ ಮಾಹಿತಿ ಇಲ್ಲಿದೆ.

ತಾಳೆ ಬೆಳೆ ಪ್ರದೇಶ ವಿಸ್ತರಣೆಗೆ ಸಹಾಯಧನ: ಪ್ರತಿ ಹೆಕ್ಟೇರ್‌ಗೆ ₹5 ಸಾವಿರ ಸಬ್ಸಿಡಿ
Linkup
ಚಾಮರಾಜನಗರ: ತೋಟಗಾರಿಕೆ ಇಲಾಖೆ ವತಿಯಿಂದ 2021-22ನೇ ಸಾಲಿಗೆ ಪ್ರದೇಶ ವಿಸ್ತರಣೆಗಾಗಿ ನೀಡಲಾಗುತ್ತಿದೆ. ತಾಳೆ ಬೆಳೆಯು ಪ್ರಪಂಚದಾದ್ಯಂತ ಸಾಗುವಳಿ ಮಾಡಲ್ಪಡುತ್ತಿರುವ ಖ್ಯಾದ್ಯ ತೈಲ ಬೆಳೆಗಳಲ್ಲಿಅತ್ಯಂತ ಹೆಚ್ಚು ತೈಲದ ಇಳುವರಿ ನೀಡುವ ಬೆಳೆಯಾಗಿದೆ. ಪ್ರತಿ ಹೆಕ್ಟೇರಿಗೆ ಪ್ರತಿ ವರ್ಷಕ್ಕೆ 4 ರಿಂದ 6 ಟನ್‌ಗಳಷ್ಟು ತೈಲದ ಇಳುವರಿ ನೀಡುವ ಸಾಮರ್ಥ್ಯ ಹೊಂದಿದೆ. ಪ್ರಸ್ತುತ ಜಾಗತಿಕ ಖಾದ್ಯ ತೈಲ ಮಾರುಕಟ್ಟೆಯಲ್ಲಿ ಅತ್ಯಂತ ಪ್ರಮುಖ ಸ್ಥಾನ ಹೊಂದಿರುವ ತಾಳೆ ಬೆಳೆಯು ಅಡುಗೆ-ತಿಂಡಿ ತಿನಿಸುಗಳ ತಯಾರಿಕೆ ಅಲ್ಲದೆ ವನಸ್ಪತಿ, ಸಾಬೂನು, ಗ್ಲಿಸರಿನ್‌ ಮತ್ತು ಪ್ಯಾರಾಫಿನ್‌ ತಯಾರಿಕೆಯಲ್ಲೂ ಬಳಸುವರು. ಹೆಚ್ಚು ಮಳೆ ಬೀಳುವ ಹಾಗೂ ನೀರಾವರಿ ಅನುಕೂಲವಿರುವ ಪ್ರದೇಶಗಳಲ್ಲಿ ತಾಳೆ ಬೆಳೆಯನ್ನು ಬೆಳೆಯಲಾಗುತ್ತಿದೆ. ಹೇಗೆ ನಾಟಿ: ನಾಟಿ ಮಾಡಲು ಜೂನ್‌, ಆಗಸ್ಟ್‌ ಸಮಯ ಸೂಕ್ತವಾಗಿದೆ. ವರ್ಷದ ಯಾವುದೇ ಸಮಯದಲ್ಲಿ ನೀರಾವರಿ ಪ್ರದೇಶದಲ್ಲಿ ತಾಳೆಗಿಡಗಳನ್ನು ನೆಡಬಹುದು. ಪ್ರತಿ ಎಕರೆಗೆ 57 ಸಸಿ ಅಥವಾ ಪ್ರತಿ ಹೆಕ್ಟೇರ್‌ಗೆ 143 ಸಸಿಗಳಂತೆ 9ಮೀ 9ಮೀ. ಅಂತರದ ತ್ರಿಕೋನ ಪದ್ದತಿಯಲ್ಲಿ ನಾಟಿ ಮಾಡಬೇಕು. 5 ಸಾವಿರ: ಇಲಾಖೆಯ ವತಿಯಿಂದ ತಾಳೆ ಸಸಿಗಳನ್ನು ನಾಟಿ ಮಾಡಲು ಉಚಿತವಾಗಿ ವಿತರಿಸಲಾಗುವುದು. ಪ್ರತಿ ಹೆಕ್ಟೇರ್‌ಗೆ 5ಸಾವಿರ ರೂ.ಗಳ ಸಹಾಯಧನವನ್ನು ರಾಸಾಯನಿಕ ಮತ್ತು ಸಾವಯವ ಗೊಬ್ಬರಗಳಿಗೆ ನೀಡಲಾಗುವುದು. ಅಂತರ ಬೆಳೆಯಾಗಿ ಬೆಳೆಯುವ ಹಣ್ಣು, ತರಕಾರಿ, ಹೂ, ಔಷಧೀಯ ಹಾಗೂ ಸುಗಂಧಿತ ಬೆಳೆಗಳಿಗೆ ಪ್ರತಿ ಹೆಕ್ಟೇರ್‌ಗೆ 5 ಸಾವಿರ ರೂ.ಗಳ ಸಹಾಯಧನ ನೀಡಲಾಗುವುದು ಮಾಹಿತಿಗೆ ಆಯಾ ತಾಲೂಕಿನ ತೋಟಗಾರಿಕೆ ಇಲಾಖೆಯನ್ನು ಸಂಪರ್ಕಿಸುವಂತೆ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.