ಕೊರೊನಾದಿಂದ ಮೃತಪಟ್ಟವರ ಶವ ಸಂಸ್ಕಾರಕ್ಕೆ 230.25 ಎಕರೆ ಜಾಗ ಮೀಸಲಿಟ್ಟ ರಾಜ್ಯ ಸರ್ಕಾರ
ಕೊರೊನಾದಿಂದ ಮೃತಪಟ್ಟವರ ಶವ ಸಂಸ್ಕಾರಕ್ಕೆ 230.25 ಎಕರೆ ಜಾಗ ಮೀಸಲಿಟ್ಟ ರಾಜ್ಯ ಸರ್ಕಾರ
ಚಿತಾಗಾರ ಮತ್ತು ರುದ್ರಭೂಮಿಗಳ ಕೊರತೆ ನೀಗಿಸಲು ರಾಜ್ಯ ಸರಕಾರ ಬುಧವಾರ ತಾತ್ಕಾಲಿಕವಾಗಿ 230 ಎಕರೆ 25 ಗುಂಟೆ ಜಾಗ ಮೀಸಲಿರಿಸಿ ಆದೇಶ ಹೊರಡಿಸಿದೆ. ಕರ್ನಾಟಕ ಭೂ ಕಂದಾಯ ಕಾಯಿದೆಯಡಿ ಜಮೀನನ್ನು ವಶಪಡಿಸಿಕೊಂಡು ಕೂಡಲೇ ಬಿಬಿಎಂಪಿಗೆ ಹಸ್ತಾಂತರಿಸಲು ಬೆಂಗಳೂರು ನಗರ ಜಿಲ್ಲಾಧಿಕಾರಿಗಳಿಗೆ ಕಂದಾಯ ಇಲಾಖೆ ಸೂಚಿಸಿದೆ.
ಬೆಂಗಳೂರು: ಕೊರೊನಾ ಪ್ರಕರಣಗಳು ಹೆಚ್ಚಾದಂತೆ ಸಾವಿನ ಸಂಖ್ಯೆಯೂ ದಿನೇ ದಿನೆ ಗಣನೀಯ ಪ್ರಮಾಣದಲ್ಲಿ ಏರಿಕೆ ಆಗುತ್ತಿದೆ.
ಕೊರೊನಾ ರೋಗಿಗಳ ಸಾವಿನ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಶವ ಸಂಸ್ಕಾರಕ್ಕೆ ಚಿತಾಗಾರ ಮತ್ತು ರುದ್ರಭೂಮಿಗಳ ಕೊರತೆ ಉಲ್ಬಣಿಸಿತ್ತು. ಈ ಕೊರತೆ ನೀಗಿಸಲು ರಾಜ್ಯ ಸರಕಾರ ಬುಧವಾರ ತಾತ್ಕಾಲಿಕವಾಗಿ 230 ಎಕರೆ 25 ಗುಂಟೆ ಜಾಗ ಮೀಸಲಿರಿಸಿ ಆದೇಶ ಹೊರಡಿಸಿದೆ. ಕರ್ನಾಟಕ ಭೂ ಕಂದಾಯ ಕಾಯಿದೆಯಡಿ ಜಮೀನನ್ನು ವಶಪಡಿಸಿಕೊಂಡು ಕೂಡಲೇ ಬಿಬಿಎಂಪಿಗೆ ಹಸ್ತಾಂತರಿಸಲು ನಗರ ಜಿಲ್ಲಾಧಿಕಾರಿಗಳಿಗೆ ಕಂದಾಯ ಇಲಾಖೆ ಸೂಚಿಸಿದೆ.
ಮೀಸಲಿರಿಸಿದ ಜಾಗದ ವಿವರ: