8 ವರ್ಷದ ಮಗುವಿನಿಂದ ಹಿಡಿದು ವೃದ್ಧರವರೆಗೆ ಬೆಂಗಳೂರಿನ ಒಂದೇ ಮನೆಯ 13 ಮಂದಿಗೆ ಕೊರೊನಾ!

ಐಟಿ-ಬಿಟಿ ಉದ್ಯೋಗದವರು ಇರುವ ಕುಟುಂಬದಲ್ಲಿ 8 ವರ್ಷದ ಮಕ್ಕಳಿಂದ ವೃದ್ಧರವರೆಗೆ ಅವಿಭಕ್ತ ಕುಟುಂಬದ 13 ಜನರಿದ್ದರು. ಇತ್ತೀಚೆಗೆ ಮನೆಯಲ್ಲಿ ಏಕಕಾಲಕ್ಕೆ ಮೂರ್ನಾಲ್ಕು ಜನರಿಗೆ ಮೈ-ಕೈ ನೋವು ಕಾಣಿಸಿದೆ. ಕೂಡಲೇ ಎಲ್ಲರೂ ಟೆಸ್ಟ್‌ ಮಾಡಿಸಿದ್ದಾರೆ. ಆಗ ಎಲ್ಲರಿಗೂ ಪಾಸಿಟಿವ್‌ ಬಂದಿದೆ.

8 ವರ್ಷದ ಮಗುವಿನಿಂದ ಹಿಡಿದು ವೃದ್ಧರವರೆಗೆ ಬೆಂಗಳೂರಿನ ಒಂದೇ ಮನೆಯ 13 ಮಂದಿಗೆ ಕೊರೊನಾ!
Linkup
ಬೆಂಗಳೂರು: ಬಿಟಿಎಂ ಲೇಔಟ್‌ನ ಒಂದೇ ಮನೆಯಲ್ಲಿ 13 ಮಂದಿಗೆ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿರುವ ಆಘಾತಕಾರಿ ಘಟನೆ ನಡೆದಿದೆ. ಒಂದೇ ಮನೆಯಲ್ಲಿ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿರುವ 13 ಮಂದಿಯ ಪೈಕಿ ಹತ್ತು ಜನ ಆಸ್ಪತ್ರೆಗೆ ದಾಖಲಾದರೆ, ಇನ್ನು ಮೂವರು ಕೋವಿಡ್‌ ಕೇರ್‌ ಸೆಂಟರ್‌ನಲ್ಲಿದ್ದಾರೆ ಎಂದು ತಿಳಿದು ಬಂದಿದೆ. ಐಟಿ-ಬಿಟಿ ಉದ್ಯೋಗದವರು ಇರುವ ಕುಟುಂಬದಲ್ಲಿ 8 ವರ್ಷದ ಮಕ್ಕಳಿಂದ ವೃದ್ಧರವರೆಗೆ ಅವಿಭಕ್ತ ಕುಟುಂಬದ 13 ಜನರಿದ್ದರು. ಇತ್ತೀಚೆಗೆ ಮನೆಯಲ್ಲಿ ಏಕಕಾಲಕ್ಕೆ ಮೂರ್ನಾಲ್ಕು ಜನರಿಗೆ ಮೈ-ಕೈ ನೋವು ಕಾಣಿಸಿದೆ. ಕೂಡಲೇ ಎಲ್ಲರೂ ಟೆಸ್ಟ್‌ ಮಾಡಿಸಿದ್ದಾರೆ. ಆಗ ಎಲ್ಲರಿಗೂ ಪಾಸಿಟಿವ್‌ ಬಂದಿದೆ. ಡುಪ್ಲೆಕ್ಸ್‌ ಮನೆಯಲ್ಲಿ 13 ಜನ ಇರುತ್ತಿದ್ದರು. ಐಟಿ ಉದ್ಯೋಗದಲ್ಲಿರುವ ಇಬ್ಬರು ಮನೆಯಿಂದಲೇ ಕೆಲಸ ಮಾಡುತ್ತಿದ್ದರು. ಅಗತ್ಯ ವಸ್ತುಗಳನ್ನು ತರಲೆಂದು ಮನೆ ಸಮೀಪದ ಅಂಗಡಿಗೆ ಹೋಗುತ್ತಿದ್ದರಂತೆ. ಮನೆಗೆ ಕೆಲಸದವರು ಬರುತ್ತಿದ್ದರು. ಅವರ ಮಾದರಿಯನ್ನು ಸಂಗ್ರಹಿಸಿ ಟೆಸ್ಟ್‌ಗೆ ಕಳುಹಿಸಲಾಗಿದೆ. ರಿಪೋರ್ಟ್‌ ಬರಬೇಕಿದೆ ಎಂದು ಆಸ್ಪತ್ರೆ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.