ಸ್ಪೋಟದ ಬೆನ್ನಲ್ಲೇ ಜಮ್ಮು-ಕಾಶ್ಮೀರದಲ್ಲಿ ಮತ್ತೊಂದು ಉಗ್ರಕೃತ್ಯ: ಪೊಲೀಸ್ ಅಧಿಕಾರಿ, ಪತ್ನಿ, ಮಗಳನ್ನು ಗುಂಡಿಕ್ಕಿ ಹತ್ಯೆ!

ಮಾಜಿ ಪೊಲೀಸ್​ ಅಧಿಕಾರಿ ಮಾಜಿ ಎಸ್​​ಪಿಒ ಫಯಾಜ್​ ಅಹ್ಮದ್​ ಮನೆಗೆ ನುಗ್ಗಿದ ಉಗ್ರರು ನಿರಂತರ ಗುಂಡಿನ ಸುರಿಮಳೆಗೈದು ಅವರನ್ನು ಹಾಗೂ ಅವರ ಪತ್ನಿ, ಪುತ್ರಿ ಸೇರಿ ಮೂವನ್ನು ಕೊಂದು ಹಾಕಿ ಎಸ್ಕೇಪ್‌ ಆಗಿದ್ದಾರೆ. ಇನ್ನು ಗುಂಡಿನ ದಾಳಿಗೆ ಮಾಜಿ ಪೊಲೀಸ್ ಅಧಿಕಾರಿ ಫಯಾಜ್​ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಸ್ಪೋಟದ ಬೆನ್ನಲ್ಲೇ ಜಮ್ಮು-ಕಾಶ್ಮೀರದಲ್ಲಿ ಮತ್ತೊಂದು ಉಗ್ರಕೃತ್ಯ: ಪೊಲೀಸ್ ಅಧಿಕಾರಿ, ಪತ್ನಿ, ಮಗಳನ್ನು ಗುಂಡಿಕ್ಕಿ ಹತ್ಯೆ!
Linkup
ಶ್ರೀನಗರ: ಕಣಿವೆ ರಾಜ್ಯದಲ್ಲಿ ಉಗ್ರರ ಅಟ್ಟಹಾಸ ಮುಂದುವರೆದಿದೆ. ಭಾನುವಾರ ಮುಂಜಾನೆ ಜಮ್ಮುವಿನ ವಿಮಾನ ನಿಲ್ಧಾಣದಲ್ಲಿ ಬಾಂಬ್‌ ಸ್ಪೋಟಿಸುವ ಮೂಲಕ ಕುಕೃತ್ಯ ಮೆರೆದಿದ್ದ ಆದೇ ದಿನ ರಾತ್ರಿ ವೇಳೆಗೆ ಜಮ್ಮು-ಕಾಶ್ಮೀರದ ಮಾಜಿ ಪೊಲೀಸ್ ಅಧಿಕಾರಿ, ಅವರ ಪತ್ನಿ ಮತ್ತು ಪುತ್ರಿಯನ್ನು ಹತ್ಯೆ ಮಾಡುವ ಮೂಲಕ ಅಟ್ಟಹಾಸ ಮರೆಸಿದ್ದಾರೆ. ಈ ಘಟನೆ ಜಮ್ಮುಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಹರಿಪರಿಗಂ ಗ್ರಾಮದಲ್ಲಿ ನಡೆದಿದೆ. ಮಾಜಿ ಪೊಲೀಸ್ ಅಧಿಕಾರಿ ಮಾಜಿ ಎಸ್ಪಿಒ ಫಯಾಜ್ ಅಹ್ಮದ್ ಮನೆಗೆ ನುಗ್ಗಿದ ಉಗ್ರರು ನಿರಂತರ ಗುಂಡಿನ ಸುರಿಮಳೆಗೈದು ಅವರನ್ನು ಹಾಗೂ ಅವರ ಪತ್ನಿ, ಪುತ್ರಿ ಸೇರಿ ಮೂವನ್ನು ಕೊಂದು ಹಾಕಿ ಎಸ್ಕೇಪ್‌ ಆಗಿದ್ದಾರೆ. ಇನ್ನು ಗುಂಡಿನ ದಾಳಿಗೆ ಮಾಜಿ ಪೊಲೀಸ್ ಅಧಿಕಾರಿ ಫಯಾಜ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಪತ್ನಿ ರಾಜಾ ಬೇಗಂ ಮತ್ತು ಪುತ್ರಿ ರಫಿಯಾ ಗಂಭೀರವಾಗಿ ಗಾಯಗೊಂಡಿದ್ದರು. ಇವರಿಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆಸ್ಪತ್ರೆಗೆ ಸೇರಿಸಿದ ಕೆಲವೇ ಹೊತ್ತಲ್ಲಿ ಪತ್ನಿ ರಾಜಾ ಬೇಗಂ ಕೂಡ ಸಾವನ್ನಪ್ಪಿದ್ದಾರೆ. ಪುತ್ರಿ ರಫಿಯಾಗೆ ಚಿಕಿತ್ಸೆ ಮುಂದುವರಿಸಲಾಗಿತ್ತಾದರೂ ಅವರೂ ಬದುಕಲಿಲ್ಲ ಎಂದು ವಲಯದ ಪೊಲೀಸರು ತಿಳಿಸಿದ್ದಾರೆ. ಇನ್ನು ನಾಪತ್ತೆಯಾಗಿರುವ ಉಗ್ರರಿಗೆ ಪೊಲೀಸರು ಹಾಗೂ ಯೋಧರು ಹುಡುಕಾಟ ಆರಂಭಿಸಿದ್ದಾರೆ. ಘಟನೆಯನ್ನು ಜಮ್ಮು-ಕಾಶ್ಮೀರ ಲೆಫ್ಟಿನೆಂಟ್‌ ಗವರ್ನರ್‌ ತೀವ್ರವಾಗಿ ಖಂಡಿಸಿದ್ದಾರೆ. ಭಾನುವಾರ ಬೆಳಗ್ಗೆ ಜಮ್ಮುವಿನ ಏರ್‌ಪೋರ್ಟ್‌ ಬಳಿ ಅವಳಿ ಬಾಂಬ್‌ ಸ್ಪೋಟ ಸಂಭವಿಸಿತ್ತು. ಡ್ರೋನ್‌ ಮೂಲಕ ಸ್ಪೋಟ ನಡೆಸಲಾಗಿತ್ತು. ಈ ಘಟನೆ ಬಳಿಕ ಸುಮಾರು 6 ಕೆಜಿ ತೂಕದ ಐಇಡಿ ಹಿಡಿದುಕೊಂಡು ಹೋಗುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿ, ಪೊಲೀಸರು ವಶಪಡಿಸಿಕೊಂಡಿದ್ದರು.