ಮಾಧ್ಯಮಗಳ ಮೇಲಿನ ಐಟಿ ದಾಳಿಯಲ್ಲಿ ಸರಕಾರದ ಹಸ್ತಕ್ಷೇಪ ಇಲ್ಲ - ಕೇಂದ್ರ ಸ್ಪಷ್ಟನೆ

ಸಂಸ್ಥೆಗಳು ತಮ್ಮದೇ ಆದ ಕೆಲಸವನ್ನು ಮಾಡುತ್ತವೆ, ನಾವು ಅವರ ಕೆಲಸದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ತೆರಿಗೆ ವಂಚನೆ ಸಂಬಂಧ ದೈನಿಕ್‌ ಭಾಸ್ಕರ್‌ ಹಾಗೂ ಉತ್ತರ ಪ್ರದೇಶದ ಭಾರತ್‌ ಸಮಾಚಾರ ವಾಹಿನಿ ಮೇಲಿನ ಐಟಿ ದಾಳಿಗೆ ಸರಕಾರ ಸಮಜಾಯಿಷಿ ನೀಡಿದೆ.

ಮಾಧ್ಯಮಗಳ ಮೇಲಿನ ಐಟಿ ದಾಳಿಯಲ್ಲಿ ಸರಕಾರದ ಹಸ್ತಕ್ಷೇಪ ಇಲ್ಲ - ಕೇಂದ್ರ ಸ್ಪಷ್ಟನೆ
Linkup
ಹೊಸದಿಲ್ಲಿ: ತೆರಿಗೆ ವಂಚನೆ ಸಂಬಂಧ ಹಾಗೂ ಉತ್ತರ ಪ್ರದೇಶದ ಭಾರತ್‌ ಸಮಾಚಾರ ವಾಹಿನಿ ಮೇಲೆ ಗುರುವಾರ ನಡೆದಿದ್ದು, ಇದಕ್ಕೂ ಸರಕಾರಕ್ಕೂ ಸಂಬಂಧವಿಲ್ಲ ಎಂದು ಕೇಂದ್ರ ಸರಕಾರ ಹೇಳಿದೆ. "ಸಂಸ್ಥೆಗಳು ತಮ್ಮದೇ ಆದ ಕೆಲಸವನ್ನು ಮಾಡುತ್ತವೆ, ನಾವು ಅವರ ಕೆಲಸದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ಯಾವುದೇ ಘಟನೆಯ ಬಗ್ಗೆ ವರದಿ ಮಾಡುವ ಮೊದಲು ಸತ್ಯಗಳನ್ನು ತಿಳಿಯಬೇಕು ಎಂದು ನಾನು ಹೇಳಲು ಬಯಸುತ್ತೇನೆ. ಕೆಲವೊಮ್ಮೆ ಮಾಹಿತಿಯ ಕೊರತೆಯು ದಾರಿ ತಪ್ಪಿಸುತ್ತದೆ,” ಎಂದು ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಹೇಳಿದ್ದಾರೆ. ಸುಮಾರು 100ರಷ್ಟು ಅಧಿಕಾರಿಗಳು ದೈನಿಕ್‌ ಭಾಸ್ಕರ್‌ಗೆ ಸೇರಿದ 30 ಸ್ಥಳಗಳ ಮೇಲೆ ಗುರುವಾರ ಮುಂಜಾನೆ ದಾಳಿ ನಡೆಸಿದ್ದಾರೆ. ಸಂಸ್ಥೆಯ ಮಾಲೀಕರ ಕಚೇರಿ ಮತ್ತು ಮನೆಗಳೂ ದಾಳಿಗೆ ಗುರಿಯಾಗಿವೆ. ಭಾರತ್‌ ಸಮಾಚಾರದ ಲಖನೌ ಕಚೇರಿ ಹಾಗೂ ಸಂಪಾದಕರ ಮನೆಯಲ್ಲೂ ತೆರಿಗೆ ವಂಚನೆಗೆ ಸಂಬಂಧಿಸಿದ ದಾಖಲೆಗಳಿಗಾಗಿ ಅಧಿಕಾರಿಗಳು ಹುಡುಕಾಟ ನಡೆಸಿದ್ದಾರೆ. ‘ತೆರಿಗೆ ವಂಚನೆಯ ನಿರ್ಣಾಯಕ ಪುರಾವೆ’ ಸಿಕ್ಕಿದ ಹಿನ್ನೆಲೆಯಲ್ಲಿ ಈ ದಾಳಿ ನಡೆಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಆದರೆ ವಿರೋಧ ಪಕ್ಷಗಳು ಮಾತ್ರ ಇದನ್ನು ತಳ್ಳಿ ಹಾಕಿವೆ. ಕೊರೊನಾದಿಂದ ಸಾವಿಗೀಡಾದವರ ಸಂಖ್ಯೆಯನ್ನು ಸರಕಾರ ಮುಚ್ಚಿಟ್ಟಿದೆ ಎಂದು ದೈನಿಕ್‌ ಭಾಸ್ಕರ್‌ ಸರಣಿ ವರದಿಗಳನ್ನು ಪ್ರಕಟಿಸಿತ್ತು. ಇನ್ನು ಉತ್ತರ ಪ್ರದೇಶ ಸರಕಾರದ ವಿರುದ್ಧ ಭಾರತ್‌ ಸಮಾಚಾರ್‌ ವರದಿಗಳನ್ನು ಪ್ರಸಾರ ಮಾಡಿತ್ತು. ದಾಳಿಗೂ ಇದಕ್ಕೂ ಸಂಬಂಧ ಇದೆ ಎಂದು ವಿರೋಧ ಪಕ್ಷಗಳು ಆಪಾದಿಸಿವೆ. ಆದರೆ ಸರಕಾರ ಮಾತ್ರ, ತನಿಖಾ ಸಂಸ್ಥೆಗಳು ತಮ್ಮ ಕೆಲಸ ನಿರ್ವಹಿಸುತ್ತಿವೆ ಎಂದು ಸಮಜಾಯಿಷಿ ನೀಡಿದೆ.