ಜಾಕ್‌ ಮಾಗೆ ಶಾಕ್‌, ಅಲಿಬಾಬಾ ಕಂಪನಿಗೆ 20,000 ಕೋಟಿ ರೂ. ದಂಡ ವಿಧಿಸಿದ ಚೀನಾ!

ಮಾರುಕಟ್ಟೆ ಮೇಲೆ ತಾನು ಸಾಧಿಸಿರುವ ಪ್ರಾಬಲ್ಯವನ್ನು ದುರ್ಬಳಕೆ ಮಾಡಿಕೊಳ್ಳಲು ಯತ್ನಿಸಿದ ಕಾರಣಕ್ಕೆ ಜಾಕ್‌ ಮಾ ಮಾಲಿಕತ್ವದ ಅಲಿಬಾಬ ಸಂಸ್ಥೆಗೆ ಚೀನಾ ಸರಕಾರ ಭಾರಿ ಮೊತ್ತದ ದಂಡ ವಿಧಿಸಿದೆ.

ಜಾಕ್‌ ಮಾಗೆ ಶಾಕ್‌, ಅಲಿಬಾಬಾ ಕಂಪನಿಗೆ 20,000 ಕೋಟಿ ರೂ. ದಂಡ ವಿಧಿಸಿದ ಚೀನಾ!
Linkup
ಶಾಂಘೈ, : ಚೀನಾದ ಇ-ಕಾಮರ್ಸ್‌ ದಿಗ್ಗಜ ಅಲಿಬಾಬಾ ಗ್ರೂಪ್‌ಗೆ ಅಲ್ಲಿನ ನಿಯಂತ್ರಕರು ಬರೋಬ್ಬರಿ 18.2 ಬಿಲಿಯನ್‌ ಯುವಾನ್‌ (20,774 ಕೋಟಿ ರೂ.) ದಂಡ ವಿಧಿಸಿದ್ದಾರೆ. ಮಾರುಕಟ್ಟೆ ಮೇಲೆ ಸಾಧಿಸಿರುವ ಪ್ರಾಬಲ್ಯವನ್ನು ದುರ್ಬಳಕೆ ಮಾಡಿಕೊಳ್ಳಲು ಯತ್ನಿಸಿದ ಕಾರಣಕ್ಕೆ ಮಾಲಿಕತ್ವದ ಸಂಸ್ಥೆಗೆ ಈ ದಂಡ ವಿಧಿಸಲಾಗಿದೆ. ಅಲಿಬಾಬ್‌ ವಿರುದ್ಧ ಡಿಸೆಂಬರ್‌ನಲ್ಲಿ ತನಿಖೆ ಪ್ರಾರಂಭವಾಗಿತ್ತು. ಈ ತನಿಖೆ ಮುಕ್ತಾಯಗೊಂಡ ಬಳಿಕ ಸರಕಾರದ ಮಾರುಕಟ್ಟೆ ನಿಯಂತ್ರಕರು ದಂಡ ವಿಧಿಸಿದ್ದಾರೆ. ಅಲಿಬಾಬಾ ತನ್ನ ಜನಪ್ರಿಯ ಇ-ಕಾಮರ್ಸ್‌ ಪ್ಲ್ಯಾಟ್‌ಫಾರ್ಮ್‌ಗಳಲ್ಲಿ ಸರಕುಗಳನ್ನು ಮಾರಾಟ ಮಾಡಲು ಇಚ್ಛಿಸುವ ವ್ಯಾಪಾರಿಗಳಿಗೆ, ತನ್ನ ‌ ಪ್ಲ್ಯಾಟ್‌ಫಾರ್ಮ್‌ಗಳಲ್ಲಿ ಮಾತ್ರ ತಮ್ಮ ಸರಕನ್ನು ಮಾರಾಟ ಮಾಡಬೇಕು. ಪ್ರತಿಸ್ಪರ್ಧಿ ಇ-ಕಾಮರ್ಸ್ ಸೈಟ್‌ಗಳಲ್ಲಿ ಮಾರಾಟ ಮಾಡುವಂತಿಲ್ಲ ಎಂಬ ಷರತ್ತು ಇಟ್ಟಿತ್ತು. ಈ ಮೂಲಕ ಮಾರುಕಟ್ಟೆಯಲ್ಲಿ ತನಗಿರುವ ಪ್ರಾಬಲ್ಯವನ್ನೇ ಬಳಸಿಕೊಂಡು ಏಕಸ್ವಾಮ್ಯ ಸಾಧಿಸಲು ಮುಂದಾಗಿದ್ದಕ್ಕೆ ಸರಕಾರ ದಂಡದ ಮೂಗುದಾರ ಹಾಕಿದೆ. 2019ರಲ್ಲಿ ಅಲಿಬಾಬಾ ಕಂಪನಿ ನಡೆಸಿದ ವಹಿವಾಟಿನ ಶೇಕಡಾ 4ರಷ್ಟು ದಂಡ ವಿಧಿಸಲು ನಿರ್ಧರಿಸಲಾಯಿತು. ಆ ವರ್ಷ ಕಂಪನಿ 455.7 ಬಿಲಿಯನ್‌ ಯುವಾನ್‌ ವ್ಯಾಪಾರ ನಡೆಸಿತ್ತು. ಕಳೆದ ಅಕ್ಟೋಬರ್‌ನಲ್ಲಿ ಚೀನಾ ಸರಕಾರವನ್ನು ಜಾಕ್‌ ಮಾ ತರಾಟೆಗೆ ತೆಗೆದುಕೊಂಡ ಅವರ ಕಂಪನಿ ಮೇಲೆ ಚೀನಾ ಸರಕಾರದ ವಕ್ರ ದೃಷ್ಟಿ ಬಿದ್ದಿದೆ. ಬಳಿಕ ಅಲಿಬಾಬ್‌ ಗ್ರೂಪ್‌ನ ನಾಗಾಲೋಟಕ್ಕೂ ಬ್ರೇಕ್‌ ಬಿದ್ದಿದೆ. ಇತ್ತೀಚೆಗೆ ಜಾಕ್‌ ಮಾ ನಾಪತ್ತೆಯಾಗಿದ್ದಾರೆ ಎಂಬ ಸುದ್ದಿ ಕೂಡ ಹರಿದಾಡಿತ್ತು. ನಂತರ ಅವರೇ ಸ್ವತಃ ನಾಪತ್ತೆಯಾಗಿಲ್ಲ ಎಂದು ಸ್ಪಷ್ಟನೆ ಕೂಡ ನೀಡಬೇಕಾಯಿತು.