ಕಾಫಿಗೆ ಐತಿಹಾಸಿಕ ಬೆಲೆ, ಹವಾಮಾನ ವೈಪರೀತ್ಯ, ವಿದೇಶಗಳಲ್ಲಿ ಉತ್ಪನ್ನ ಕೊರತೆಯಿಂದ ದರ ಏರಿಕೆ

ಹವಾಮಾನ ವೈಪರೀತ್ಯದಿಂದಾಗಿ ಕಾಫಿ ಬೆಳೆಯುವ ದೇಶಗಳಲ್ಲಿ ಇಳುವರಿ ಕುಂಠಿತವಾಗಿದ್ದು, ಇದರಿಂದ ಕಾಫಿ ದರ ಗಗನಕ್ಕೇರಿದೆ. ಹೀಗಾಗಿ ಭಾರತ ಐತಿಹಾಸಿಕ ಗರಿಷ್ಠ ಮೌಲ್ಯಕ್ಕೆ ಕಾಫಿ ರಫ್ತು ಮಾಡಿ ದಾಖಲೆ ಸೃಷ್ಟಿಸಿದ್ದರೆ, ಕಾಫಿ ಪ್ರಿಯರ ಜೇಬಿಗೆ ಮಾತ್ರ ಕತ್ತರಿ ಬಿದ್ದಿದೆ. 50 ಕೆ.ಜಿ.ತೂಕದ ಬ್ಯಾಗ್ನ ಅರೇಬಿಕಾ ಪಾರ್ಚ್ಮೆಂಟ್ ಬೆಲೆ 16,000 ರೂ.ಗೆ ಏರಿಕೆ ಕಂಡಿದ್ದು, ಚೆರ್ರಿಗೂ 8 ಸಾವಿರ ರೂ.ವರೆಗೂ ದರವಿದೆ. ರೊಬೊಸ್ಟಾ ಪಾರ್ಚಮೆಂಟ್ ದರ ಸರಾಸರಿ 11 ಸಾವಿರ ರೂ.ಗೆ ತಲುಪಿದ್ದರೆ, ರೊಬೊಸ್ಟಾ ಚೆರ್ರಿ ಬೆಲೆಯೂ 6,000 ರೂ.ಗೆ ಮುಟ್ಟಿದೆ.