ಏಪ್ರಿಲ್‌-ಮೇನಲ್ಲಿ ಭಾರತದ ಚಿನ್ನದ ಆಮದು ಭಾರಿ ಹೆಚ್ಚಳ

2020ರ ಏಪ್ರಿಲ್‌-ಮೇನಲ್ಲಿ ಕೋವಿಡ್‌ ಬಿಕ್ಕಟ್ಟಿನ ಪರಿಣಾಮ ಕೇವಲ 599 ಕೋಟಿ ರೂ.ಗೆ ಕುಸಿದಿದ್ದ ಭಾರತದ ಬಂಗಾರದ ಆಮದು ಮೌಲ್ಯ ಕಳೆದ ಏಪ್ರಿಲ್‌-ಮೇನಲ್ಲಿ 51,438 ಕೋಟಿ ರೂ.ಗೆ ಏರಿಕೆಯಾಗಿದೆ.

ಏಪ್ರಿಲ್‌-ಮೇನಲ್ಲಿ ಭಾರತದ ಚಿನ್ನದ ಆಮದು ಭಾರಿ ಹೆಚ್ಚಳ
Linkup
ಹೊಸದಿಲ್ಲಿ: ಕಳೆದ ಏಪ್ರಿಲ್‌-ಮೇನಲ್ಲಿ ಭಾರತದ ಮೌಲ್ಯ 51,438 ಕೋಟಿ ರೂ.ಗೆ ಏರಿಕೆಯಾಗಿದೆ. 2020ರ ಏಪ್ರಿಲ್‌-ಮೇನಲ್ಲಿ ಕೋವಿಡ್‌ ಬಿಕ್ಕಟ್ಟಿನ ಪರಿಣಾಮ ಕೇವಲ 599 ಕೋಟಿ ರೂ. ಮೌಲ್ಯದ ಬಂಗಾರ ಆಮದಾಗಿತ್ತು. ಜತೆಗೆ ಆಮದು ಮಂದಗತಿಯಲ್ಲಿತ್ತು. ಬಂಗಾರದ ಆಮದು ಏರಿಕೆಯಾಗಿರುವುದರಿಂದ ದೇಶದ ವ್ಯಾಪಾರ ಕೊರತೆಯ ಪ್ರಮಾಣ ಏಪ್ರಿಲ್‌-ಮೇ ಅವಧಿಯಲ್ಲಿ 21 ಶತಕೋಟಿ ಡಾಲರ್‌ಗೆ (1.53 ಲಕ್ಷ ಕೋಟಿ ರೂ.) ವೃದ್ಧಿಸಿದೆ. ಭಾರತ ಅತ್ಯಧಿಕ ಆಮದು ಮಾಡುವ ದೇಶವಾಗಿದ್ದು, ಜ್ಯುವೆಲ್ಲರಿ ವಲಯದಲ್ಲಿ ಚಿನ್ನಕ್ಕೆ ಹೆಚ್ಚು ಬೇಡಿಕೆ ಇದೆ. ವಾರ್ಷಿಕ 800-900 ಟನ್‌ ಚಿನ್ನ ದೇಶಕ್ಕೆ ಆಮದಾಗುತ್ತದೆ. ಭಾರತದಿಂದ ಜ್ಯುವೆಲ್ಲರಿ ರಫ್ತು ಕೂಡ ಏಪ್ರಿಲ್‌-ಮೇನಲ್ಲಿ 634 ಕೋಟಿ ಡಾಲರ್‌ಗೆ (46,282 ಕೋಟಿ ರೂ.) ಏರಿಕೆಯಾಗಿದೆ. ಕಲ್ಲಿದ್ದಲು ಆಮದು ಹೆಚ್ಚಳ ಭಾರತ ಕಳೆದ ಏಪ್ರಿಲ್‌ನಲ್ಲಿ 2.2 ಕೋಟಿ ಟನ್‌ ಕಲ್ಲಿದ್ದಲನ್ನು ಆಮದು ಮಾಡಿಕೊಂಡಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ1.70 ಕೋಟಿ ಟನ್‌ ಆಮದು ಮಾಡಿಕೊಳ್ಳಲಾಗಿತ್ತು. ಸಾಮಾನ್ಯವಾಗಿ ಮಳೆಗಾಲ ಪೂರ್ವದಲ್ಲಿ ಕಲ್ಲಿದ್ದಲು ಸಂಗ್ರಹ ಹೆಚ್ಚುತ್ತದೆ. ಹೀಗಾಗಿ ಬೇಡಿಕೆಯೂ ವೃದ್ಧಿಸುತ್ತದೆ. ಉಕ್ಕು ಉತ್ಪಾದನೆ ವೃದ್ಧಿ ಭಾರತ ಕಳೆದ ಮೇನಲ್ಲಿ 92 ಲಕ್ಷ ಟನ್‌ ಉಕ್ಕು ಉತ್ಪಾದಿಸಿದ್ದು, ಶೇ.47ರಷ್ಟು ಹೆಚ್ಚಳವಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 58 ಲಕ್ಷ ಟನ್‌ ಉಕ್ಕು ಉತ್ಪಾದನೆಯಾಗಿತ್ತು. ವಿಶ್ವ ಉಕ್ಕು ಸಂಘಟನೆಗೆ 64 ದೇಶಗಳು ಸಲ್ಲಿಸಿರುವ ಅಂಕಿ ಅಂಶಗಳ ಪ್ರಕಾರ, 2021ರ ಮೇನಲ್ಲಿ 17.44 ಕೋಟಿ ಟನ್‌ ಉಕ್ಕು ಉತ್ಪಾದನೆಯಾಗಿದೆ. 2020ರ ಇದೇ ಅವಧಿಗೆ ಹೋಲಿಸಿದರೆ ಶೇ.17ರಷ್ಟು ಹೆಚ್ಚು. ಜಾಗತಿಕ ಮಟ್ಟದಲ್ಲಿ ಚೀನಾ ಅತ್ಯಧಿಕ ಉಕ್ಕು ಉತ್ಪಾದಿಸಿದ್ದು, 9.2 ಕೋಟಿ ಟನ್‌ ಉತ್ಪಾದಿಸಿದೆ. ಜಪಾನ್‌, ರಷ್ಯಾ, ಟರ್ಕಿ, ಬ್ರೆಜಿಲ್‌ ನಲ್ಲೂ ಉಕ್ಕು ಉತ್ಪಾದನೆ ಏರಿಕೆಯಾಗಿದೆ.