ಇಡಿ ಬಂಧಿಸಿದ ಸೆಂಥಿಲ್ ಬಾಲಾಜಿ ಯಾರು? ತಮಿಳುನಾಡಿನ ಪ್ರಭಾವಿ ಸಚಿವನ ಮೇಲೆ ಕೇಂದ್ರದ ಕಣ್ಣೇಕೆ?

ಚೆನ್ನೈ: ಬರೋಬ್ಬರಿ 18 ಗಂಟೆಗಳ ವಿಚಾರಣೆ ಬಳಿಕ ತಮಿಳುನಾಡಿನ ವಿದ್ಯುತ್ ಸಚಿವ ಸೆಂಥಿಲ್ ಬಾಲಾಜಿ ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬುಧವಾರ ಬೆಳಗ್ಗೆ ಬಂಧಿಸಿದ್ದಾರೆ. ಈ ಬೆಳವಣಿಗೆ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿದ್ದು, ಬಂಧನವಾದ ಬಳಿಕ ಸೆಂಥಿಲ್ ಬಾಲಾಜಿ ಬಿಕ್ಕಿ ಬಿಕ್ಕಿ ಅಳುತ್ತಿರುವ ದೃಶ್ಯಗಳು ಎಲ್ಲೆಡೆ ವೈರಲ್ ಆಗಿವೆ. ಎದೆನೋವಿನ ಕಾರಣ ಆಸ್ಪತ್ರೆಗೆ ಸೇರಿರುವ ಸೆಂಥಿಲ್ ಬಾಲಾಜಿಗೆ ಐಸಿಯನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಹಿನ್ನೆಲೆ ಪ್ರತಿಪಕ್ಷಗಳು ಕೇಂದ್ರ ಸರ್ಕಾರದ ವಿರುದ್ಧ ಮುಗಿಬಿದ್ದಿವೆ. 2011 ರಿಂದ 2016ರ ಅವಧಿಯಲ್ಲಿ ಸಾರಿಗೆ ಇಲಾಖೆಯಲ್ಲಿ ನಡೆದಿದೆ ಎನ್ನಲಾದ ಉದ್ಯೋಗಕ್ಕಾಗಿ ಲಂಚ ಪಡೆದ ಹಗರಣದಲ್ಲಿ ಸೆಂಥಿಲ್ ಬಾಲಾಜಿ ಅವರನ್ನು ಇಡಿ ಬಂಧಿಸಿದೆ. ಈ ಅವಧಿಯಲ್ಲಿ ತಮಿಳುನಾಡಿನಲ್ಲಿ ಇದ್ದ ಎಐಎಡಿಎಂಕೆಯ ಜಯಲಲಿತಾ ನೇತೃತ್ವದ ಸರ್ಕಾರದಲ್ಲಿ ಸೆಂಥಿಲ್ ಬಾಲಾಜಿ ಸಾರಿಗೆ ಸಚಿವರಾಗಿದ್ದರು. ಸದ್ಯ ಅವರು ಎಂಕೆ ಸ್ಟಾಲಿನ್ ಸಂಪುಟದಲ್ಲಿ ವಿದ್ಯುತ್ ಮತ್ತು ಅಬಕಾರಿ ಖಾತೆಗಳನ್ನು ನಿರ್ವಹಿಸುತ್ತಿದ್ದರು. ಅಷ್ಟಕ್ಕೂ ಈ ಸೆಂಥಿಲ್ ಬಾಲಾಜಿ ಯಾರು? ಕೇಂದ್ರ ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ಮುಗಿಬಿದ್ದಿರುವುದು ಏಕೆ? ಯಾವ ಪ್ರಕರಣದಲ್ಲಿ ತಮಿಳುನಾಡಿನ ವಿದ್ಯುತ್ ಸಚಿವರ ಬಂಧನವಾಗಿದೆ ಎಂಬುದರ ವಿವರಣೆ ಇಲ್ಲಿದೆ.